Friday, October 17, 2025

Latest Posts

3 ಕುಟುಂಬಗಳ ಮಹಾ ಯುದ್ಧ । ಬೆಳಗಾವಿ ಅಸಲಿ ರಾಜಕೀಯ

- Advertisement -


ಕರ್ನಾಟಕದ ನಕಾಶೆಯಲ್ಲಿ ಬೆಂಗಳೂರಿನ ಹೊರತಾಗಿ ಅತೀ ಹೆಚ್ಚು ರಾಜಕೀಯ ಶಕ್ತಿ ಹೊಂದಿರುವ ಒಂದು ಜಿಲ್ಲೆಯನ್ನು ಹೇಳಿ ಅಂದ್ರೆ ಉತ್ತರ ಒಂದೇ ಆಗಿರುತ್ತದೆ. ಅದುವೇ ಬೆಳಗಾವಿ. ರಾಜ್ಯ ರಾಜಕೀಯದಲ್ಲಿ ಬೆಳಗಾವಿಯ ಪಾತ್ರ ಅಪಾರ. ಇದು ಬರೋಬ್ಬರಿ 18 ವಿಧಾನಸಭಾ ಕ್ಷೇತ್ರಗಳ ಈ 18 ಸೀಟ್ಗಳನ್ನು ಗೆಲ್ಲುವವರು ಬೆಂಗಳೂರಿನ ಸಿಂಹಾಸನಕ್ಕೆ ಏರುವುದು ಸುಲಭ.

ಇಲ್ಲಿ ಪ್ರಭುತ್ವ ವಹಿಸಿಕೊಂಡಿರೋದು ಶಾಸಕರೋ ಅಥವಾ ಸಂಸದರೋ ಅಲ್ಲ. ಇಲ್ಲಿ ನಿಜವಾದ ರಾಜಕಾರಣ ನಡೆಯೋದು ಮೂರು ಮನೆತನಗಳ ನಡುವೇ – ಜಾರಕಿಹೊಳಿ, ಕತ್ತಿ ಮತ್ತು ಜೊಲ್ಲೆ.

ಆದರೆ, ಇಲ್ಲಿನ ಅಸಲಿ ಅಧಿಕಾರ ಇರುವುದು ಶಾಸಕರು ಅಥವಾ ಎಂಪಿಗಳ ಕೈಯಲ್ಲಿ ಅಲ್ಲ. ಬದಲಾಗಿ, ಮೂರು ಪ್ರಬಲ ಕುಟುಂಬಗಳ ಹಿಡಿತದಲ್ಲಿದೆ. ಲ್ಲಿ ನಿಜವಾದ ರಾಜಕಾರಣ ನಡೆಯೋದು ಮೂರು ಮನೆತನಗಳ ನಡುವೇ ಅದುವೇ ಜಾರಕಿಹೊಳಿ, ಕತ್ತಿ ಮತ್ತು ಜೊಲ್ಲೆ ಕುಟುಂಬ. ಈ ಮೂರು ಮನೆತನಗಳ ನಡುವಿನ ದೋಸ್ತಿ, ದುಶ್ಮನಿ ಮತ್ತು ಅಧಿಕಾರಕ್ಕಾಗಿ ನಡೆಯುವ ಆಟ, ಇಡೀ ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಾಯಿಸಬಲ್ಲ ಶಕ್ತಿ ಹೊಂದಿದೆ.

ಹಾಗಾದರೆ, ಯಾರು ಇವರು? ಈ ರಾಜವಂಶಗಳ ಕಹಾನಿ ಏನು? ಇವರ ಶಕ್ತಿಯ ಮೂಲವೇನು? ಅತಿ ಮುಖ್ಯವಾಗಿ, ಇತ್ತೀಚೆಗೆ ಈ ಕುಟುಂಬಗಳ ನಡುವೆ ಮಹಾಭಾರತದ ಕಥೆ ಶುರುವಾಗಿದೆ. ಏನದು? ಇವತ್ತು ಬೆಳಗಾವಿಯ ಅಧಿಕಾರದ ಆಳವನ್ನು ತಿಳಿದುಕೊಳ್ಳೋಣ.

೩ ಕುಟುಂಬಗಳು ಯಾಕೆ ಬಡೆದಾಡಿಕೊಳ್ಳುತ್ತಿವೆ ಅನ್ನೋದನ್ನ ಗಮನಿಸೋದಾದ್ರೆ ಬೆಳಗಾವಿ, ‘ಕರ್ನಾಟಕದ ಎರಡನೇ ರಾಜಧಾನಿ’ ಅಂತಲೇ ಪರಿಚಿತ.ಆದರೆ ಇದು ಕೇವಲ ರಾಜಕೀಯದ ದಿಗ್ಗಜರ ನಾಡಲ್ಲ – ಇದು ಸಕ್ಕರೆಯ ಸಾಮ್ರಾಜ್ಯ ಕೂಡ. ಇದು ‘ಶುಗರ್ ಬೌಲ್’ ಅಥವಾ ‘ಸಕ್ಕರೆ ಬಟ್ಟಲು’ ಅಂತಾನೆ ಪ್ರಸಿದ್ಧ. ಬೆಳಗಾವಿ ಜಿಲ್ಲೆಯಲ್ಲಿ 24 ಸಕ್ಕರೆ ಕಾರ್ಖಾನೆಗಳಿವೆ. ಇದರ ವಹಿವಾಟು ಸಾವಿರಾರು ಕೋಟಿ ರೂಪಾಯಿಗಳು. ಭಾರತದ ಮೊದಲ ಏರೋ ಸ್ಪೇಸ್ SEZ ಕೂಡ ಇಲ್ಲೇ ಇದೆ. ಇಷ್ಟೆಲ್ಲಾ ಶ್ರೀಮಂತಿಕೆ ಇದ್ದರೂ ಕೂಡ ಇಲ್ಲಿನ ಪ್ರತಿ ವ್ಯಕ್ತಿಯ ಆದಾಯ ರಾಜ್ಯದಲ್ಲಿ 22ನೇ ಸ್ಥಾನದಲ್ಲಿದೆ.

ಹಾಗಾದರೆ, ಇದಕ್ಕೆ ಕಾರಣವೇನು? ಈ ಸಂಪತ್ತೆಲ್ಲಾ ಎಲ್ಲಿಗೆ ಹೋಗುತ್ತಿದೆ? ಅಂತ ಕೇಳಿದ್ರೆ ಇಲ್ಲಿನ ರಾಜಕೀಯ ಅಧಿಕಾರದ ಆಧಾರಸ್ತಂಭವೇ ಸಹಕಾರಿ ಸಂಸ್ಥೆಗಳು ಮತ್ತು ಸಕ್ಕರೆ ಕಾರ್ಖಾನೆಗಳು. ಬೆಳಗಾವಿಯ DCC ಬ್ಯಾಂಕ್ ಮತ್ತು ಸಹಕಾರಿ ಸಂಘಗಳ ಹಿಡಿತ ಯಾರ ಕೈಯಲ್ಲಿ ಇರುತ್ತದೆಯೋ, ಅವರೇ ಈ ಜಿಲ್ಲೆಯ ನಿಜವಾದ ಕಿಂಗ್. ₹1000 ಕೋಟಿ ಸಾಮ್ರಾಜ್ಯಕ್ಕಾಗಿ ನಡೆಯುವ ಸಮರ ಇದೇ ಅಧಿಕಾರದ ಮೂಲ.

ಇನ್ನು ೩ ಕುಟುಂಬಗಳ ಪರಿಚಯವನ್ನ ನೋಡೋದಾದ್ರೆ ಮೊದಲು, ಜಾರಕಿಹೊಳಿ ಮನೆತನ. ಇವರದ್ದು ಐದು ಜನ ಅಣ್ಣ-ತಮ್ಮಂದಿರು ಆದ್ರೆ ವಿಭಿನ್ನ, ವಿಶಿಷ್ಟ ತಂತ್ರ. ಸತೀಶ್, ರಮೇಶ್, ಭೀಮಶಿ, ಲಖನ್, ಬಾಲಚಂದ್ರ ಜಾರಕಿಹೊಳಿ. ಒಬ್ಬರು ಬಿಜೆಪಿಯಲ್ಲಿದ್ದರೆ, ಮತ್ತೊಬ್ಬರು ಕಾಂಗ್ರೆಸ್ಸಿನಲ್ಲಿ. ಇದನ್ನು ‘ಪೊಲಿಟಿಕಲ್ ಹೆಡ್ಜಿಂಗ್’ ಎನ್ನಬಹುದು. ರಾಜ್ಯದಲ್ಲಿ ಯಾರೇ ಅಧಿಕಾರಕ್ಕೆ ಬರಲಿ, ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದ್ರು ಕೂಡ ತಮ್ಮ ಕುಟುಂಬದ ಶಕ್ತಿ ಮಾತ್ರ ಕಡಿಮೆಯಾಗಬಾರದು ಎಂಬುದು ಜಾರಕಿಹೊಳಿ ಸಹೋದರರ ಗುರಿ. ರಮೇಶ್ ಜಾರಕಿಹೊಳಿ ಆಪರೇಷನ್ ಕಮಲದ ರೂವಾರಿ, ಸತೀಶ್ ಜಾರಕಿಹೊಳಿ ವಿಚಾರವಾದಿ, ಸಿಎಂ ಹುದ್ದೆಯ ಆಕಾಂಕ್ಷಿ.

ಎರಡನೆಯದಾಗಿ ಕತ್ತಿ ಕುಟುಂಬ. ಹುಕ್ಕೇರಿಯ ಸಿಂಹಗಳು. ಹುಕ್ಕೇರಿ ತಾಲೂಕೇ ಇವರ ಭದ್ರಕೋಟೆ. ಈ ಕುಟುಂಬದ ಆಧಾರ ಸ್ತಂಭವಾಗಿದ್ದ ದಿವಂಗತ ಉಮೇಶ್ ಕತ್ತಿಯವರ ನಂತರ, ಸಹೋದರ ರಮೇಶ್ ಕತ್ತಿ ಮತ್ತು ಪುತ್ರ ನಿಖಿಲ್ ಕತ್ತಿ ಜವಾಬ್ದಾರಿ ವಹಿಸಿದ್ದಾರೆ.

ಮೂರನೆಯ ಶಕ್ತಿ ಅಂದ್ರೆ ಅದು ಜೊಲ್ಲೆ ದಂಪತಿ. ಅಣ್ಣಸಾಹೇಬ್ ಜೊಲ್ಲೆ ಮತ್ತು ಶಶಿಕಲಾ ಜೊಲ್ಲೆ. ಸಹಕಾರಿ ಸಂಸ್ಥೆಗಳು ಮತ್ತು ಶಿಕ್ಷಣದ ಮೂಲಕ ಇವರು ದೊಡ್ಡಓಟ್ ಬ್ಯಾಂಕ್ ಸೃಷ್ಟಿಸಿದ್ದಾರೆ. ಪತ್ನಿ ಲೋಕಸಭೆಗೆ, ಗಂಡ ವಿಧಾನಸಭೆಗೆ ಟೋಟಲ್ ಆಗಿ ಪವರ್ ಪ್ಯಾಕ್ ಜೋಡಿ.

ಇಷ್ಟು ದಿನಗಳ ಕಾಲ ಸುಪ್ತವಾಗಿದ್ದ ಶೀತಲ ಸಮರವ 2025 ರಲ್ಲಿ ಒಂದೇ ಒಂದು ಘಟನೆಯಿಂದಾಗಿ ಬಹಿರಂಗ ಯುದ್ಧವಾಗಿ ಬದಲಾಯಿತು. ಅದು ರಾಜಕೀಯ ದ್ರೋಹದ ಕಥೆ. ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಅಣ್ಣಸಾಹೇಬ್ ಜೊಲ್ಲೆ ಸೋತು ಹೋಗ್ತಾರೆ. ಇದಕ್ಕೆ ತನ್ನದೇ ಪಕ್ಷದ ನಾಯಕ ರಮೇಶ್ ಕತ್ತಿಯವರ ‘ಒಳಗೇಟು’ ಕಾರಣ ಎಂದು ಜೊಲ್ಲೆ ನಂಬಿದರು. ಇದರ ಪ್ರತೀಕಾರ ತೀರಿಸಿಕೊಳ್ಳಲು ಜೊಲ್ಲೆ ಅವರು ತಮ್ಮ ಬದ್ಧವೈರಿಗಳಾಗಿದ್ದ ಜಾರಕಿಹೊಳಿಯವರೊಂದಿಗೆ ಕೈ ಜೋಡಿಸಿದರು. ಹೀಗೆ, ಹೊಸ ಮೈತ್ರಿಕೂಟ ರಚನೆಯೊಂದಿಗೆ ಬೆಳಗಾವಿಯಲ್ಲಿ ರಾಜಕೀಯ ಮಹಾಭಾರತ ಶುರುವಾಯಿತು.

ನಂತರ ಜಾರಕಿಹೊಳಿ-ಜೊಲ್ಲೆ ಒಕ್ಕೂಟದ ಮೊದಲ ಟಾರ್ಗೆಟ್ 25 ವರ್ಷಗಳಿಂದ ರಮೇಶ್ ಕತ್ತಿ ಆಳ್ತಿದ್ದ ಬೆಳಗಾವಿಯ ಡಿಸಿಸಿ ಬ್ಯಾಂಕ್. ಮೈತ್ರಿಕೂಟವು ನಿರ್ದೇಶಕರನ್ನು ಸೆಳೆದು, ಕತ್ತಿ ವಿರುದ್ಧಅವಿಶ್ವಾಸ ನಿರ್ಣಯ ಮಂಡಿಸಿ ಕೆಳಗಿಳಿಸಿತು. ಆದರೆ ಕತ್ತಿ ಕುಟುಂಬ ಕುಗ್ಗಲಿಲ್ಲ. ಯುದ್ಧದ ಎರಡನೇ ಅಖಾಡ ಹುಕ್ಕೇರಿ ಸಹಕಾರಿ ಸಂಘದ ಚುನಾವಣೆ. ಕತ್ತಿ ಬಳಸಿದ ಅಸ್ತ್ರ ಚುನಾವಣೆಯನ್ನು ಹುಕ್ಕೇರಿ ಜನರ ಸ್ವಾಭಿಮಾನದ ಪ್ರಶ್ನೆಯನ್ನಾಗಿ ಮಾಡಿದ್ದು. ಫಲಿತಾಂಶ ಕತ್ತಿ ಕುಟುಂಬ 15ಕ್ಕೆ 15 ಸೀಟುಗಳನ್ನು ಗೆದ್ದು ಕ್ಲೀನ್ ಸ್ವೀಪ್ ಮಾಡಿತು. ತಮ್ಮ ಕೋ ಟೆಯನ್ನು ರಕ್ಷಿಸಿಕೊಂಡಿತು.

ಈಗ ಎಲ್ಲರ ಚಿತ್ತ, ಗಮನ ಇರೋದು ಅಂತಿಮ ಯುದ್ಧದ ಕಡೆಗೆ. ಅಕ್ಟೊಬರ್ 2025 ರ 19 ನೇ ದಿನಾಂಕದಂದು ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ. ಈ ಬಾರಿ ರಮೇಶ್ ಜಾರಕಿಹೊಳಿ ಅವರೇ ನೇರವಾಗಿ ಕಣಕ್ಕೆ ಇಳಿದಿದ್ದಾರೆ. ಈ ಚುನಾವಣೆಯ ಫಲಿತಾಂಶವು ಬೆಳಗಾವಿಯ ಮುಂದಿನ ದಶಕದ ರಾಜಕೀಯ ಸಮೀಕರಣವನ್ನು ನಿರ್ಧರಿಸಲಿದೆ. ಆದರೆ, ಈ ಆಟದಲ್ಲಿ ಸಾಮಾನ್ಯ ಜನರ ಕಥೆ ಏನು? ಈ ಕುಟುಂಬಗಳು ಸಾವಿರಾರು ಕೋಟಿ ಮೌಲ್ಯದ ಅಧಿಕಾರಕ್ಕಾಗಿ ಹೋರಾಡುತ್ತಿವೆ. ಆದರೆ, ಬೆಳಗಾವಿ ಇನ್ನೂ ಅಭಿವೃದ್ಧಿಯಿಂದ ವಂಚಿತವಾಗಿದೆ. ಈ ರಾಜಕೀಯ ಮತ್ತು ಆರ್ಥಿಕಚಕ್ರದಲ್ಲಿ ಸಾಮಾನ್ಯ ಜನರ ಬದುಕು ಎಲ್ಲೋ ಕಳೆದು ಹೋಗಿಲ್ಲವೇ ಅನ್ನೋಹಾಗಾಗಿದೆ. ಈ ಅಧಿಕಾರದ ಆಟದಲ್ಲಿ, ಜಾರಕಿಹೊಳಿಗಳು, ಕತ್ತಿಗಳು ಅಥವಾ ಜೊಲ್ಲೆಗಳೇ ಗೆಲ್ಲಬಹುದು. ಆದರೆ, ನಿಜವಾಗಿ ಸೋಲುತ್ತಿರುವವರು ಯಾರು? ಈ ಪ್ರಶ್ನೆಯನ್ನು ಬಗ್ಗೆ ನೀವೇ ಯೋಚನೆ ಮಾಡಿ.

ವರದಿ : ಲಾವಣ್ಯ ಅನಿಗೋಳ

 

 

 

 

 

- Advertisement -

Latest Posts

Don't Miss