2028ರ ವಿಧಾನಸಭಾ ಚುನಾವಣೆಗೆ JDS ಮೊದಲ ಅಭ್ಯರ್ಥಿ ಹೆಸರು ಘೋಷಣೆ

ಬೆಂಗಳೂರು: 2028ರ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಪಕ್ಷ ಇಂದು ಮೊದಲ ಅಭ್ಯರ್ಥಿಯ ಘೋಷಣೆ ಮಾಡಿದೆ. ಜೆ.ಪಿ ಭವನದಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಮುಂದಿನ ಚುನಾವಣೆಗೆ ಮೊದಲ ಕ್ಷೇತ್ರ HD ಕೋಟೆ ಅಭ್ಯರ್ಥಿ ಘೋಷಣೆ ಮಾಡ್ತಾ ಇದೀವಿ ಎಂದು ಘೋಷಣೆ ಮಾಡಿದರು.

ಹೆಚ್‌.ಡಿ ಕೋಟೆ ವಿಧಾನಸಭಾ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಕೆ.ಎಂ ಕೃಷ್ಣ ನಾಯಕ್ ಅವರು ಇಂದು ಜೆಡಿಎಸ್ ಪಕ್ಷವನ್ನು ಸೇರಿಕೊಂಡರು. ಹೆಚ್.ಡಿ ಕುಮಾರಸ್ವಾಮಿ ಅವರು ಕೃಷ್ಣ ನಾಯಕ್ ಅವರು ಪಕ್ಷಕ್ಕೆ ಬರಮಾಡಿಕೊಂಡು ಸ್ವಾಗತ ಕೋರಿದರು.

ಕೆ.ಎಂ ಕೃಷ್ಣ ನಾಯಕ್ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಹೆಚ್.ಡಿ ಕುಮಾರಸ್ವಾಮಿ ಅವರು ಮಾತನಾಡಿದರು. ಕೃಷ್ಣ ನಾಯಕ್ ಅವರ ಸಾಂಕೇತಿಕವಾಗಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಇಂದು ನಡೆದಿದೆ. ಹೋದ ಬಾರಿಯೇ ಅವರಿಗೆ  ನಮ್ಮ ಪಕ್ಷದಿಂದ ಟಿಕೆಟ್ ಕೊಡಬೇಕಿತ್ತು. ಕಾರಣಾಂತರದಿಂದ  ಅದು ಸದ್ಯ ಆಗಲಿಲ್ಲ.

ನಾವು ಮಾಡಿದ ತಪ್ಪಿನಿಂದ ನಾವು ಹೆಚ್‌.ಡಿ ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸೋತಿದ್ದೇವೆ. ನನ್ನ ಜೊತೆ ಕೃಷ್ಣ ನಾಯಕ್ ಅವರು  ಒಳ್ಳೆ ಭಾಂದವ್ಯ ಹೊಂದಿದ್ದಾರೆ. ಕೃಷ್ಣ ನಾಯಕ್ ಅವರು ನಮ್ಮ ಪಕ್ಷದ ಪರವಾಗಿ ಚುನಾವಣೆಗೆ ನಿಲ್ಲಿಸುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.

ಕೃಷ್ಣ ನಾಯಕ್ ಅವರು ಮರಳಿ ಮನೆಗೆ ಬರ್ತಾ ಇದಾರೆ ಅವರಿಗೆ ಶುಭವಾಗಲಿ. ನಾವು ಒಂದು ದಿನಾಂಕ ನಿಗದಿಪಡಿಸಿ ಅಧಿಕೃತವಾಗಿ ಪಕ್ಷ ಸೇರ್ಪಡೆ ಕಾರ್ಯಕ್ರಮ  ಮಾಡ್ತೀವಿ . ಮುಂದಿನ ಚುನಾವಣೆಗೆ ಮೊದಲ ಕ್ಷೇತ್ರ HD ಕೋಟೆ ಅಭ್ಯರ್ಥಿ ಘೋಷಣೆ ಮಾಡ್ತಾ ಇದ್ದೀವಿ ಎಂದು ಜೆಡಿಎಸ್ ಕಚೇರಿ ಜೆ.ಪಿ ಭವನದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ತಿಳಿಸಿದ್ದಾರೆ.

About The Author