- Advertisement -
ಬೆಂಗಳೂರು: ಸಿದ್ದರಾಮಯ್ಯ ಎಚ್ ಡಿ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎಚ್ ಡಿ ದೇವೇಗೌಡ ರವರು ಮೋದಿಯನ್ನು ಭೇಟಿಯಾಗಿರುವ ಕಾರಣದಿಂದ ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯರವರು ಹೆಚ್ ಡಿ ದೇವೇಗೌಡ ರವರು ಮೋದಿಯ ಜೊತೆ ಸೇರಿ ಸರ್ಕಾರ ಮಾಡಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ಸಮಯದಲ್ಲಿ ಮಾತನಾಡದ ಇವರು ಈಗ ಮೋದಿಯ ಜೊತೆ ಬಾಯಿ ಬಾಯಿ ಬಡಿಯುತ್ತಿದ್ದಾರೆ. ಜೆಡಿಎಸ್ ಗೆ ಯಾವುದೇ ಸಿದ್ಧಾಂತವಿಲ್ಲ, ಅವರದು ಅವಕಾಶವಾದಿ ರಾಜಕಾರಣ ಅವರಿಗೆ ಬಿಜೆಪಿಯ ಬಿ ಟೀಮ್ ಎಂದರೆ ಸಿಟ್ಟು ಬರುತ್ತದೆ, ಆದರೆ ಅನುಮಾನವೇ ಬೇಡ ಜೆಡಿಎಸ್ ಬಿಜೆಪಿಯ ಬಿ ಟೀಮ್ ಎಂದು ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
- Advertisement -