ರಾಜ್ಯದಲ್ಲಿ ಶಿವನ ಮೂರನೇ ಕಣ್ಣಿನಂತೆ ಜೆಡಿಎಸ್ ಅಧಿಕಾರಕ್ಕೆ ಬರಿತ್ತೆ – ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ

ತುಮಕೂರು; ಎಚ್.ಡಿ ಕುಮಾರಸ್ವಾಮಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಯಡಿಯೂರಪ್ಪ ಅವರನ್ನು ಅಧಿಕಾರಕ್ಕೆ ತಂದಿದ್ದು ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ತುಮಕೂರಿನಿಂದ ಸ್ಪರ್ಧೆಗೆ ಇಳಿಸಿ ಸೋಲುವಂತೆ ಮಾಡಿದ್ದು ಡಾ.ಜಿ ಪರಮೇಶ್ವರ್ ಎಂದು ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಆರೋಪಿಸಿದರು.

ನಗರದಲ್ಲಿ ಬುಧವಾರ ನಡೆದ ಜನತಾ ಜಲಧಾರೆ ಸಮಾವೇಶದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಸಿಎಂ ಆದಾಗ ಒಂದು ದಿನ ಕೂರಲಿಲ್ಲ. ಬಿಜೆಪಿಗಿಂತ ಕಾಂಗ್ರೆಸ್ಸಿನವರು ಕುಮಾರಸ್ವಾಮಿಗೆ ಸಿಎಂ ಆಗಿದ್ದಾಗ ಹೆಚ್ಚಿಗೆ ಕಾಟ ಕೊಟ್ಟರು ಎಂದು ದೂರಿದರು.

‘ಪರಮೇಶ್ವರ್ ಗೆ ಕೇಳ್ತೀನಿ, ಕುಮಾರಸ್ವಾಮಿ‌ನ ತೆಗೆದು ಯಡಿಯೂರಪ್ಪನ ತಂದವರು ಯಾರು?’ ಎಂದು ಪ್ರಶ್ನಿಸಿದ ಸಿಎಂ ಇಬ್ರಾಹಿಂ, ಪರಮೇಶ್ವರ್ ಸಿದ್ದಗಂಗಾ ಮಠದಲ್ಲಿ ಪ್ರಮಾಣ ಮಾಡಬೇಕು, ನೀವು ಬಿಜೆಪಿ ಸರ್ಕಾರ ತಂದು ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಂ ಅಂತೀರಾ? ದೇವೇಗೌಡರನ್ನು ಬಲವಂತವಾಗಿ ತುಮಕೂರಿಗೆ ಕರೆದುಕೊಂಡು ಬಂದು ವಿಷ ಹಾಕಿದ್ರಿ ಎಂದು ಪರಮೇಶ್ವರ್ ವಿರುದ್ಧ ಕಿಡಿಕಾರಿದರು.

ರಾಜ್ಯದಲ್ಲಿ ಶಿವನ ಮೂರನೇ ಕಣ್ಣಿನಂತೆ ಜೆಡಿಎಸ್ ಅಧಿಕಾರಕ್ಕೆ ಬರಿತ್ತೆ, ಮುಂದೆ 123 ಸೀಟು ಗೆಲ್ತೀವಿ, ಅಷ್ಟೆ ಅಲ್ಲ ಲೋಕಸಭೆಯಲೂ ಬಹುಮತ ಪಡೆಯುತ್ತೇವೆ. ತುಮಕೂರಿನ ಎಲ್ಲಾ 11 ವಿಧಾನಸಭೆ ಕ್ಷೇತ್ರಗಳಲ್ಲೂ ಜನತಾದಳ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ 13ನೇ ತಾರೀಕು ಜಲಧಾರೆ ಕಾರ್ಯಕ್ರಮದ ದೊಡ್ಡ ಸಮಾರಂಭ ಆಗಲಿದೆ. ನಂತರ ರಾಜ್ಯದಲ್ಲಿ ಅನೇಕ ಕಾರ್ಯಕ್ರಮಗಳು ಆಗುತ್ತವೆ. 7ನೇ ತಾರೀಕಿನ ನಂತರ ಬೇರೆ ಪಕ್ಷದಿಂದ ಜೆಡಿಎಸ್ ಗೆ ಬರೋರು ಇದ್ದಾರೆ. ನಾನು ಲಿಸ್ಟ್ ಬಿಡುಗಡೆ ಮಾಡ್ತಿನಿ ಎಂದಯ ಸಿಎಂ ಇಬ್ರಾಹಿಂ ತಿಳಿಸಿದರು.

About The Author