ಬೆಂಗಳೂರು: ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಜೆಡಿಎಸ್ ಪ್ರಮುಖ ನಾಯಕ ಮತ್ತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಆಪ್ತರಾದ ವೈಎಸ್ ವಿ ದತ್ತಾ ಅವರು ಮಾತನಾಡಿ, ನಾನು ಕ್ಷೇತ್ರ ಪೂರ್ತಿ ಸಂಚಾರ ಮಾಡುತ್ತಿದ್ದೇನೆ ಅಲ್ಲಿನ ಜನರು ಕಾಂಗ್ರೆಸ್ ಸೇರ್ಪಡೆಯಾಗಿ ಎಂದು ಹೇಳುತ್ತಿದ್ದಾರೆ. ಪಕ್ಷತೀತವಾಗಿ ನನಗೆ ಕಾರ್ಯಕರ್ತರು ಇದ್ದಾರೆ. ಜನರು ಮತ್ತು ಕಾರ್ಯಕರ್ತರ ಒತ್ತಾಯದ ಮೇರೆಗೆ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ.
ಜೆಡಿಎಸ್ ಗೆ ಗುಡ್ ಬೈ ಹೇಳಿ, ಕಾಂಗ್ರೆಸ್ ನತ್ತ ಮುಖ ಮಾಡಿದ ವೈ.ಎಸ್.ವಿ ದತ್ತಾ
ತಂದೆ ಸಮಾನರಾದ ದೇವೇಗೌಡರಿಗೆ ಈ ವಿಚಾರ ಹೇಳದೆ ಒದ್ದಾಡುತ್ತಿದ್ದೇನೆ. ನಾನು ಯಾವುದೇ ಷರತ್ತು ಹಾಕದೆ ಕಾಂಗ್ರೆಸ್ ಸೇರ್ಪಡೆಯಾಗಲು ನಿರ್ಧರಿಸಿದ್ದೇನೆ. ನಾನು ಹತ್ತಾರು ಸಲ ಈ ವಿಚಾರ ಪ್ರಸ್ತಾಪಿಸಲು ದೇವೇಗೌಡರನ್ನು ಭೇಟಿಯಾಗಿದ್ದೆ, ಆದರೆ ಅದು ಸಾಧ್ಯವಾಗಿಲ್ಲ. ನನ್ನ ಎಮ್ ಎಲ್ ಸಿ ಮಾಡಿದ್ದು ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು.. ಅವರ ಋಣ ನನ್ನ ಮೇಲೆ ಇದೆ. ಅದಕ್ಕಾಗಿ ನಾನು ತಳಮಟ್ಟದಿಂದ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ.. ಜೆಡಿಎಸ್ ನಿಂದ ಶಾಸಕ ಆಗುವವರೆಗೂ ಪಕ್ಷ ಕಟ್ಟಿದ್ದೇನೆ.. ಕಡೂರಿನ ರಾಜಕೀಯ ಬೇರೆ ಕ್ಷೇತ್ರಗಳಿಗಿಂತ ಭಿನ್ನವಾಗಿದೆ.. ದೇವೇಗೌಡ ಅವರಿಗೆ ಗೊತ್ತಿದೆ ಕ್ಷೇತ್ರದಲ್ಲಿ ಸ್ಥಳೀಯವಾಗಿ ಇರಲು ತೀರ್ಮಾನ ಮಾಡಿದ್ದಾರೆ ಎಂದು ದೇವೇಗೌಡರು ಕ್ಷಮಿಸುತ್ತಾರೆ ಎಂದು ಹೇಳಿದರು.
ರಾಜಧಾನಿಯಲ್ಲಿ ‘ಬ್ಲೂ ಫೀವರ್’ ಹಾವಳಿ : ಚಿಕ್ಕಮಕ್ಕಳಲ್ಲಿ ಜ್ವರ, ಶೀತ ಕಾಣಿಸಿದರೆ ನಿರ್ಲಕ್ಷ್ಯ ಬೇಡ
ನಾಳೆ ನಡೆಯುವ ಜೆಪಿ ನಡ್ಡಾ ಕಾರ್ಯಕ್ರಮಕ್ಕೆ ಬಿಎಸ್ ವೈಗೆ ಅಧಿಕೃತ ಆಹ್ವಾನವಿಲ್ಲ