Saturday, July 27, 2024

Latest Posts

ಕರ್ನಾಟಕದಲ್ಲಿ ಜೆಡಿಎಸ್ ಬಿಜೆಪಿ ಜೊತೆ ಹೋಗಿದ್ದು ಆತ್ಮಾಹುತಿ ತೀರ್ಮಾನ: ಕೆ.ರಾಜಣ್ಣ

- Advertisement -

Hassan News: ಹಾಸನ: ಹಾಸನದ ಅರಸೀಕೆರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿದ್ದು, ಈಗಾಗಲೇ ಶ್ರೇಯಸ್‌ಪಟೇಲ್ ಅಭ್ಯರ್ಥಿ ಎಂದು ಘೋಷಣೆ ಆಗಿದೆ. ಅವರು ವೈಯುಕ್ತಿಕವಾಗಿ ಎಲ್ಲಾ ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿ ಮತಯಾಚನೆ ಮಾಡುತ್ತಿದ್ದಾರೆ. ನನಗೆ ವಿಶ್ವಾಸವಿದೆ ಉತ್ತಮವಾದ ಅಭ್ಯರ್ಥಿಯನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿರುವ ಹಿನ್ನಲೆಯಲ್ಲಿ ಮತದಾರರ ಒಲವು ಕಾಂಗ್ರೆಸ್ ಪಕ್ಷದ ಪರವಾಗಿದೆ ಎಂದು ರಾಜಣ್ಣ ಹೇಳಿದರು.

ಹಾಸನದಲ್ಲಿ ಲೋಕಸಭಾ ಚುನಾವಣೆ ಮೂಲಕ ಹೊಸ ಇತಿಹಾಸ ಸೃಷ್ಟಿ ಮಾಡ್ತಾರೆ ಎನ್ನುವ ವಿಶ್ವಾಸ ನನಗಿದೆ. ಮಾ.30 ರಂದು ಹಾಸನಕ್ಕೆ ಸಿಎಂ ಬರಲು ಸಮಯ ಇರಲಿಲ್ಲ. ಸಿಎಂ ಒಬ್ಬರೇ ಬರುವುದು ಸರಿಯಲ್ಲ, ಸಿಎಂ-ಡಿಸಿಎಂ ಇಬ್ಬರು ಬರಬೇಕು ಎಂಬುದು ಎಲ್ಲಾ ಮುಖಂಡರ ಆಶಯ. ಒಬ್ಬರು ಬರ್ತಾರೆ, ಒಬ್ಬರು ಬರಲಿಲ್ಲ ಎಂದರೆ ಸರಿ ಹೋಗಲ್ಲ. ಇಬ್ಬರು ಕೂಡ ಒಟ್ಟಿಗೆ ಬಂದು ಪ್ರಚಾರ ಮಾಡ್ತಾರೆ ಎಂದು ರಾಜಣ್ಣ ಹೇಳಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್‌ರೇವಣ್ಣ ಸ್ಪರ್ಧೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ರಾಜಣ್ಣ,  ಇತಿಹಾಸ ಇದೆ ನೋಡಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಒಂಭತ್ತು ಸೀಟ್‌ಗಳನ್ನು ಬಿಟ್ಟು ಕೊಟ್ಟಿದ್ದೆವು. ಆದರೆ ಅವರು ಗೆದ್ದಿದ್ದು ಎಷ್ಟು. ಕರ್ನಾಟಕದ ರಾಜ್ಯದಲ್ಲಿ ಮೈತ್ರಿ ಜೆಡಿಎಸ್‌ನವರ ಆತ್ಮಾಹುತಿ ತೀರ್ಮಾನ ಅದು. ಬಿಜೆಪಿ ಜೊತೆ ಹೋಗಿದ್ದು ಆತ್ಮಾಹುತಿ ತೀರ್ಮಾನ.

ದೇವೇಗೌಡರು ಸೆಕ್ಯೂಲರ್ ಅಂತ ಭಾಷಣ ಮಾಡವ್ರು. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೀನಿ, ಮೋದಿ ಪ್ರಧಾನಮಂತ್ರಿ ಆದರೆ ದೇಶ ಬಿಟ್ಟು ಹೋಗ್ತಿನಿ ಅಂತ ಹೇಳಿದ್ರು. ಬಿಜೆಪಿ ಕೋಮುವಾದಿ ಪಕ್ಷ, ಆ ಪಕ್ಷದ ಬಗ್ಗೆ ಅವರಿಗಿ ಇದ್ದಂತಹ ಆಕ್ರೋಶ ಅವರ ಮಾತುಗಳಲ್ಲಿ ಕೇಳ್ತಾ ಇದ್ದೇವು. ಆದರೆ ಇವತ್ತು ಅವರ ಜೊತೆಯಲ್ಲಿ ಕೈ ಜೋಡಿಸಿರುವುದು ಅವರ ಹೇಳಿಕೆಗೂ, ನಡವಳಿಕೆಗೂ ವ್ಯತ್ಯಾಸ ಇದೆ ಅನ್ನೋದನ್ನ ಜನ ಅರ್ಥ ಮಾಡಿಕೊಳ್ತಾರೆ. ಈಗ ಜನ ಯಾರು ದಡ್ಡರಿಲ್ಲ, ಎಲ್ಲಾ ವಿದ್ಯಾವಂತರಿದ್ದಾರೆ, ಪ್ರಬುದ್ದರಿದ್ದಾರೆ. ಎಲ್ಲವನ್ನೂ ಅರ್ಥೈಸಿಕೊಂಡು ಅವರಿಗೆ ಸರಿಯಾದ ಪಾಠ ಕಲುಸ್ತಾರೆ ಅನ್ಕೊತಿನಿ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಅರ್ಹತೆ ಇದೆ. ಆದರೆ ನಮ್ಮಲ್ಲೆರ ನೋವು ಏನು ಅಂದರೆ, ಜಾತ್ಯಾತೀತ ಮನೋಭಾವ ಇರುವವರು ಎಲ್ಲರೂ ಒಗ್ಗಟ್ಟಾಗಿ ದೇಶವನ್ನು ರಕ್ಷಣೆ ಮಾಡಬೇಕು. ಆದರೆ ಇವರು ಮೂರು ಸೀಟ್‌ಗಾಗಿ ಕೋಮುವಾದಿ ಪಕ್ಷದ ಕೈಜೋಡಿಸಿರುವುದು ಎಷ್ಟು ಸರಿ ಎಂದು ಜನ ತೀರ್ಮಾನ ಮಾಡ್ತಾರೆ ಎಂದು ರಾಜಣ್ಣ ಹೇಳಿದ್ದಾರೆ.

ಕಾಂಗ್ರೆಸ್‌ನಿಂದ ಹೆಚ್ಚು ಮಂದಿ ಕುಟುಂಬಸ್ಥರಿಗೆ ಟಿಕೆಟ್ ನೀಡಿದ ವಿಚಾರದ ಬಗ್ಗೆ ಮಾತನಾಡಿದ ರಾಜಣ್ಣ, ಈಗ ಅದೆಲ್ಲಾ ಬಿಡಿ ಮಾಮೂಲಿ ಆಗಿ ಹೋಗಿದೆ. ಎಲ್ಲಾ ಪಾರ್ಟಿಯಲ್ಲೂ ಕೊಟ್ಟಿದ್ದಾರೆ, ಕಾಂಗ್ರೆಸ್‌ನಲ್ಲಿ ಕೊಟ್ಟಿದ್ದಕ್ಕೆ ಏಕೆ ಆಕ್ಷೇಪಣೆ ಮಾಡಬೇಕು. ನಾವೇನು ಬಿಜೆಪಿಯವರನ್ನು ಆಕ್ಷೇಪಣೆ ಮಾಡ್ತೀವಾ. ಯಡಿಯೂರಪ್ಪ ಅವರು ಬಿಜೆಪಿಯ ರಾಷ್ಟ್ರಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳುವ ಕಮಿಟಿಯಲ್ಲಿ ಇದ್ದಾರೆ. ಅವರ ಮಗ ಇಲ್ಲಿ ರಾಜ್ಯಾಧ್ಯಕ್ಷರು, ಅದನ್ನು ಹೆಚ್ಚು ಮಹತ್ವ ಕೊಟ್ಟು ಟೀಕೆ ಮಾಡಲು ಹೋಗಲ್ಲ. ಜನರು ಯಾರ ಪರ ಇದ್ದಾರೆ ಎನ್ನುವುದನ್ನು ತಿಳಿದುಕೊಂಡು ಟಿಕೆಟ್ ಕೊಟ್ಟಿದ್ದಾರೆ. ಅದನ್ನು ಟೀಕೆ ಮಾಡುವುದನ್ನು ಸರಿಯಲ್ಲ ಎಂದು ರಾಜಣ್ಣ ಹೇಳಿದ್ದಾರೆ.

ಪ್ರೀತಂಗೌಡ ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡಲು ನಿರ್ಧಾರ ಮಾಡದ ವಿಚಾರದ ಬಗ್ಗೆ ಮಾತನಾಡಿದ ರಾಜಣ್ಣ,  ಪ್ರೀತಂಗೌಡರು ಒಬ್ಬ ಪ್ರಬುದ್ಧ ರಾಜಕಾರಣಿ. ಅವರು ಕೂಡ ಶಾಸಕರಾಗಿ ಹೋರಾಟದಲ್ಲಿ ಬಂದವರು. ಅವರು, ಅವರ ಸ್ಥಳೀಯ ರಾಜಕಾರಣದಲ್ಲಿ ಅಳಿವು, ಉಳಿವಿನ ಪ್ರಶ್ನೆ ಇರುತ್ತದೆ. ಅವರು ಉತ್ತಮವಾದ ನಿರ್ಧಾರ ತೆಗೆದುಕೊಳ್ತಾರೆ ಎಂಬುದು ನಮ್ಮ ನಿರೀಕ್ಷೆ. ಅದರ ಲಾಭ ಕಾಂಗ್ರೆಸ್‌ಗೆ ಆಗುತ್ತಾ ಎಂಬುದನ್ನು ಕಾದುನೋಡಬೇಕು ಎಂದು ರಾಜಣ್ಣ ಹೇಳಿದ್ದಾರೆ.

ಜಿಲ್ಲಾಧಿಕಾರಿ ಸಿ.ಸತ್ಯಭಾಮ ವಿರುದ್ಧ ಚುನಾವಣಾ ಆಯೋಗಕ್ಕೆ ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು ವರ್ಗಾವಣೆ ಮಾಡುವಂತೆ ಪತ್ರ ಬರೆದ ವಿಚಾರದ ಬಗ್ಗೆ ಮಾತನಾಡಿರುವ ರಾಜಣ್ಣ, ಜಿಲ್ಲಾಧಿಕಾರಿ ಸಿ.ಸತ್ಯಭಾಮ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಪತ್ರ ಬರೆಯುವುದು ಅವರಿಗೆ ಬಿಟ್ಟದ್ದು.ಆದರೆ ಆರೋಪಗಳನ್ನು ಮಾಡ್ತಾರಲ್ಲ ಅದನ್ನು ಖಂಡಿಸುತ್ತೇನೆ. ಸರ್ಕಾರಿ  ನೌಕರರು ಸದಾಭಿಪ್ರಾಯ ಹೊಂದಿರುತ್ತಾರೆ. ಒಂದು ಪಕ್ಷದ ಬಗ್ಗೆ ಒಬ್ಬೊಬ್ಬರು ಅಭಿಪ್ರಾಯ ಇಟ್ಟುಕೊಂಡಿರುತ್ತಾರೆ. ಆದರೆ ಒಬ್ಬ ಅಧಿಕಾರಿ ಮೇಲೆ ಸುಳ್ಳು ಆರೋಪ ಮಾಡಿರುವುದನ್ನು ಖಂಡಿಸುತ್ತೇನೆ ಎಂದು ರಾಜಣ್ಣ ಹೇಳಿದ್ದಾರೆ.

ಸತ್ಯಾಂಶ ಇದ್ದರೆ ಬೇರೆ ವಿಚಾರ. ಸರ್ಕಾರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಂದಾಗ ನಮ್ಮ ಸರ್ಕಾರ ಈ ರೀತಿ ಯೋಜನೆಗಳನ್ನು ತಂದಿದೆ ಎಂದು ಹೇಳಿದ್ದಾರೆ. ಅದರಲ್ಲಿ ತಪ್ಪು ಏನಿದೆ..? ಇವರು ಪ್ರಧಾನಮಂತ್ರಿ, ಮುಖ್ಯಮಂತ್ರಿ ಇದ್ದಾಗ, ಯಾವ ಜಿಲ್ಲೆಗೆ ಹೋದರು ಅಲ್ಲಿನ ಜಿಲ್ಲಾಧಿಕಾರಿಗಳು ನಮ್ಮ ಸರ್ಕಾರ ಈ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ಪತ್ರದಲ್ಲಿ ಬರೆದಿರುವ ಆರೋಪಗಳು ಸತ್ಯಕ್ಕೆ ದೂರುವಾದವು. ವಿನಾಕಾರಣ ಬಡವರಪರ ಕೆಲಸ ಮಾಡುವ ಒಬ್ಬ ಅಧಿಕಾರಿಯ ಮೇಲೆ ಆರೋಪ ಮಾಡುವುದು ಯಾರಿಗೂ ಶೋಭೆ ತರಲ್ಲ ಎಂದು ರಾಜಣ್ಣ ಹೇಳಿದ್ದಾರೆ.

ರಾಜ್ಯದಲ್ಲಿ ‌ಕಾಂಗ್ರೆಸ್ ಅಡ್ರೆಸ್ ಇಲ್ಲದಂತಾಗಲಿದೆ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ

ಕಾರ್ಯಕರ್ತರಲ್ಲಿ ಒಗ್ಗಟ್ಟಾಗಿ ದುಡಿಯುವ ವಾತಾವರಣ ‌ನಿರ್ಮಾಣವಾಗಿದೆ: ಬಿ.ವೈ.ವಿಜಯೇಂದ್ರ

ಇವರು ಯಾವುದಾದರೂ‌ ಸಂಘಟನೆಯಲ್ಲಿ ಹೋರಾಡಿರೋ ಐಡೆಂಟಿಟಿ‌ ಇದ್ಯಾ?: ಯತೀಂದ್ರ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

- Advertisement -

Latest Posts

Don't Miss