ಕರ್ನಾಟಕ ಟಿವಿ : ಕುಮಾರಸ್ವಾಮಿ ಸಿಎಂ ಕುರ್ಚಿ ಕಳೆದುಕೊಂಡ ಮೇಲೆ ಜೆಡಿಎಸ್ ಮುಖಂಡರು ಒಬ್ಬೊಬ್ಬರಾಗಿಯೇ ಪಕ್ಷಕ್ಕೆ ಗುಡ್ ಹೇಳೊಕೆ ಶುರು ಮಾಡ್ತಿದ್ದಾರೆ. ಮದ್ದೂರಿನ ಜೆಡಿಎಸ್ ಪ್ರಭಾವಿ ಮುಖಂಡ ಸ್ವಾಮಿಗೌಡ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೇರುವ ದೃಷ್ಟಿಯಿಂದ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಿ ಇದ್ದಾರೆ. ಮಾಜಿ ಸಚಿವ ಮದ್ದೂರು ಶಾಸಕ ಡಿ.ಸಿ ತಮ್ಮಣ್ಣ ಶತಾಯಗತಾಯ ಸ್ವಾಮಿಗೌಡರನ್ನ ಕೆಎಂಎಫ್ ನಿರ್ದೇಶಕ ಚುನಾವಣೆಯಲ್ಲಿ ಸೋಲಿಸಲು ಬಿಜೆಪಿಯ ರೂಪಾ ಹಾಗೂ ಕದಲೂರು ರಾಮಕೃಷ್ಣ ಗೆ ಒಳಗೊಳಗೆ ಬೆಂಬಲಿಸಿದ್ರು. ಆದ್ರೆ ಸ್ವಾಮಿಗೌಡ ಅತಿಹೆಚ್ಚು ಮತ ಪಡೆದು ಗೆಲುವು ಸಾಧಿಸಿದ್ರು ಎರಡನೆ ಅಭ್ಯರ್ಥಿಯಾಗಿ ಬಿಜೆಪಿ ಬೆಂಬಲಿತ ರೂಪಾ ಸಹ ಗೆಲುವು ಕಂಡ್ರು.
ಮದ್ದೂರು ವಿಧಾನಸಭೆಯಿಂದ ಸ್ವಾಮಿಗೌಡಗೆ ಟಿಕೆಟ್
ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್, ಕಾಂಗ್ರೆಸ್ ನಾಯಕರು ಬಿಜೆಪಿ ಅಧಿಕಾರಕ್ಕೆ ಬಂದಾಗ ಪಕ್ಷ ಸೇರಿ ಅಧಿಕಾರ ಅನುಭವಿಸ್ತಾರೆ. ನಂತರ ವಾಪಸ್ ಜೆಡಿಎಸ್, ಕಾಂಗ್ರೆಸ್ ಸೇರ್ತಾರೆ. ಹೀಗಾಗಿ ಈ ಬಾರಿ ಬಿಜೆಪಿಗೆ ಅಧಿಕಾರ ಅನುಭವಿಸಲು ಬರುವವರಿಗೆ ಕಠಿಣ ಕಂಡೀಷನ್ ಹಾಕ್ತಿದ್ದಾರೆ. ಈಗ ಕೆಎಂಎಫ್ ಅಧ್ಯಕ್ಷರಾಗಲು ಬಿಜೆಪಿ ಸೇರ್ತಿರುವ ಸ್ವಾಮಿಗೌಡ ಮುಂಬರುವ ಜಿ.ಪಂ ಹಾಗೂ ತಾಪಂ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನ ಗೆಲ್ಲಿಸಬೇಕು. ಆಗ ಕಂಪ್ಲೀಟ್ ಟರ್ಮ್ ಅಧಿಕಾರನ್ನ ಸ್ವಾಮಿಗೌಡ ಅನುಭವಿಸಬಹುದು. ಮದ್ದೂರಿನಲ್ಲಿ ಬಿಜೆಪಿ ಸಂಘಟನೆಗೆ ಮಾಡುವ ಭರವಸೆ ನೀಡಿ ಇದೀಗ ಸ್ವಾಮಿಗೌಡ ಬಿಜೆಪಿ ಸೇರ್ಪಡೆಯಾಗಿ ಕೆಎಂಎಫ್ ಅಧ್ಯಕ್ಷರಾಗಲು ಮುಂದಾಗಿದ್ದಾರೆ.
ಕರ್ನಾಟಕ ಟಿವಿ, ಮಂಡ್ಯ