Kolara News : ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಟೊಮ್ಯಾಟೊ ಬೆಳೆಗಳು ಸರಿಯಾಗಿ ಬರುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಕೆಸಿ ವ್ಯಾಲಿ ಯೋಜನೆ. ಟೊಮ್ಯಾಟೊ ಬೆಳೆಗೆ ಆಂಧ್ರದಲ್ಲಿ, ತಮಿಳುನಾಡಿನಲ್ಲಿ ಯಾವುದೇ ಎಫೆಕ್ಟ್ ಆಗುತ್ತಿಲ್ಲ. ಆದ್ರೆ ಕೇವಲ ಕೋಲಾರ-ಚಿಕ್ಕಬಳ್ಳಾಪುರದಲ್ಲಿ ಮಾತ್ರ ಏಕೆ ಆಗುತ್ತಿದೆ? ಎಂದು ಮುಳಬಾಗಿಲು ಕ್ಷೇತ್ರದ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಪ್ರಶ್ನಿಸಿದರು.
ಈಗ ಎಲ್ಲೆಡೆ ಟೊಮ್ಯಾಟೊ ಬೆಲೆ ಗಗನಕ್ಕೇರಿತ್ತಿದೆ. ರೈತ ಸಾಲ ಮಾಡಿ ಮೂರು ಸಾವಿರ ಟೊಮ್ಯಾಟೊ ಗಿಡ ಹಾಕಿದ್ರೆ, ಮೊದಲು 1500 ಬಾಕ್ಸ್ ಟೊಮ್ಯಾಟೊ ಸಿಗುತ್ತಿತ್ತು, ಆದ್ರೆ ಈಗ 400 ಬಾಕ್ಸ್ ಗೆ ಇಳಿಕೆಯಾಗಿದೆ. ಇದರಿಂದ ಎಲ್ಲೆಡೆ ಟೊಮ್ಯಾಟೊ ಬೆಲೆ ಹೆಚ್ಚಾಗಿದೆ. ಅಲ್ಲದೆ ಟೊಮ್ಯಾಟೊಗೆ ರೋಗಬಾಧೆಯೂ ಹೆಚ್ಚಾಗಿದೆ. ವೈಜ್ಞಾನಿಕವಾಗಿ ನೋಡುವುದಾದ್ರೆ ಮುಂದಿನ ದಿನಗಳಲ್ಲಿ ಕೆಸಿ ವ್ಯಾಲಿ ಯೋಜನೆಯಿಂದ ಬೆಳೆಯುವ ತರಕಾರಿಗಳು ವಿಷಪೂರಿತವಾಗುತ್ತವೆ ಅಂತ ಹೇಳಲಾಗುತ್ತಿದೆ. ಈ ಬಗ್ಗೆ ನನ್ನತ್ರ ದಾಖಲೆಗಳೂ ಇವೆ. ಮುಂದಿನ ದಿನಗಳಲ್ಲಿ ನಾವು ಬೆಳೆಯುವ ತರಕಾರಿಗಳನ್ನು ಯಾರೂ ತೆಗೆದುಕೊಳ್ಳದಿದ್ದರೆ ನಿಜವಾಗಲೂ ರೈತರೇ ವಿಷ ಕುಡಿಯುವ ಪರಿಸ್ಥಿತಿ ಬರುತ್ತದೆ ಎಂದು ಕೆಸಿ ವ್ಯಾಲಿ ಯೋಜನೆ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.
ಬಜೆಟ್ ಗಿಂತ ಮುಂಚೆಯೇ ನಮ್ಮ ಕ್ಷೇತ್ರಕ್ಕೆ ಬೇಕಾದ ಕೆಲವೊಂದು ಯೋಜನೆಗಳ ಬಗ್ಗೆ ನಾವು ಸರ್ಕಾರಕ್ಕೆ ಮನವಿ ಕೊಟ್ಟಿದ್ದೆವು. ಅದರಂತೆ ಬಜೆಟ್ ನಲ್ಲಿ ಮುಳಬಾಗಿಲು ತಾಲೂಕಿಗೆ ಅಭಿವೃದ್ಧಿ ಯೋಜನೆಗಳನ್ನು ನೀಡುತ್ತಾರೆಂದು ನಿರೀಕ್ಷೆ ಮಾಡಿದ್ದೆವು. ಆದ್ರೆ ನಮ್ಮ ನಿರೀಕ್ಷೆ ಹುಸಿಯಾದಿಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಎತ್ತಿನಹೊಳೆ ಯೋಜನೆಗೆ ದುಡ್ಡು ಕೊಟ್ಟಿದ್ದೀರಿ. ನಾವು ಐಶ್ವರ್ಯ ಕೇಳುತ್ತಿಲ್ಲ, ಕುಡಿಯುವುದಕ್ಕೆ ನೀರು ಕೇಳುತ್ತಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಬದುಕುತ್ತಿರುವ ನಾವು ಟ್ಯಾಕ್ಸ್ ಕಟ್ಟುತ್ತಿದ್ದೇವೆ. ಎಲ್ಲರಿಗೂ ಕೊಟ್ಟಂತೆ ನಮಗೂ ಮೂಲಭೂತ ಸೌಕರ್ಯ ಕೊಡಿ ಎಂದು ಕೇಳುತ್ತಿದ್ದೇವೆ. ಎತ್ತಿನಹೊಳೆ ಯೋಜನೆ ಲೇಟಾಗುತ್ತೆ ಅಂತ ಅಂತರ್ಜಲ ಮಟ್ಟ ವೃದ್ಧಿಯಾಗಲು ಕೆಸಿ ವ್ಯಾಲಿ ಯೋಜನೆ ಕೊಟ್ಟಿದ್ದೀರಿ. ಮಲೇಷ್ಯಾ, ಇಂಡೋನೇಷ್ಯಾ, ದುಬೈನಲ್ಲೂ ಸಮುದ್ರದ ನೀರನ್ನು ಶುದ್ಧೀಕರಣ ಮಾಡಿ ಕುಡಿಯುತ್ತಾರೆ. ಆ ತರ ವೈಜ್ಙಾನಿಕವಾಗಿ ಕೊಟ್ಟಾಗ ಮಾತ್ರ ನೀರು ಯೋಗ್ಯವಾಗಿರುತ್ತದೆ. ನೀರು ಸಾಧ್ಯವಾಗದಿದ್ರೆ ಆಂಧ್ರಕ್ಕೆ ಕಳುಹಿಸಿಕೊಡಿ ಎಂದು ಮಿಸ್ಸಾಗಿ ಸದನದಲ್ಲಿ ಹೇಳಿದೆ. ಈ ಬಗ್ಗೆ ಸದನದಲ್ಲಿ ಕ್ಷಮೆಯನ್ನೂ ಕೇಳಿದ್ದೇನೆ ಎಂದರು.
ರಾಜ್ಯಕ್ಕೆ ಬರಬೇಕಿದ್ದ ಕೃಷ್ಣಾ ನದಿ ಪಾಲನ್ನು ಆಂಧ್ರಕ್ಕೆ ಕೊಟ್ಟಿದ್ದಾರೆ. ನನ್ನ ಮುಳಬಾಗಿಲು ಕ್ಷೇತ್ರದ 500 ಮೀಟರ್ ಅಂತರದಲ್ಲಿ ನಾಲೆ ಹೋಗಿದೆ. ವ್ಯವಸಾಯಕ್ಕೆ ನೀರು ಕೊಡದಿದ್ದರೂ ಪರವಾಗಿಲ್ಲ, ಕುಡಿಯಲು ನೀರು ಕೊಡಿ ಎಂದು ಕೇಳುತ್ತಿದ್ದೇವೆ. ಜನರು ನನಗೆ ಮತ ಹಾಕಿ ಕಳಿಸಿದ್ದಾರೆ. ಸನದಲ್ಲಿ ಹೋಗಿ ಕಾಫಿ, ಟೀ ಕುಡಿಯಲು ನನ್ನನ್ನು ಕಳುಹಿಸಿಲ್ಲ. ನಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ನಾನು ಸದನದಲ್ಲಿ ಧ್ವನಿ ಎತ್ತಿದ್ದೇನೆ ಎಂದರು.
Anganavadi: ಅಂಗನವಾಡಿ ಮೇಲ್ಚಾವಣಿ ಇಲ್ಲದ ಕಾರಣ ಮಕ್ಕಳನ್ನು ಬೇರೆ ಕಡೆ ಸ್ಥಳಾಂತರ
Shakthi yojne: ಬೆಂಗಳೂರು ಬಂದ್ ಗೆ ಕರೆ ನೀಡಿದ್ದ ಸಾರಿಗೆ ನೌಕರರು ಕರೆ ವಾಪಸ್