ಕೋಲಾರ: ಜೆಡಿಎಸ್ ನ ಮೊದಲ ಪಂಚರತ್ನ ಯಾತ್ರೆಗೆ ಅದ್ದೂರಿ ಸಮಾವೇಶದ ಮೂಲಕ ಚಾಲನೆಯನ್ನು ನೀಡಲಾಗಿದೆ, ಮಳೆಯಿಂದ ಎರಡು ಬಾರಿ ಮುಂದೂಡಲಾಗಿದ್ದ ಪಂಚರತ್ನ ಯಾತ್ರೆಗೆ ಶುಕ್ರವಾರ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಅವರು ಚಾಲನೆ ನೀಡಿದ್ದಾರೆ. ಮುಳಬಾಗಿಲು ನಗರದ ಹೊರ ಹೊಲಯದ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಮಿಸಲಾಗಿದ್ದ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಮೊದಲ ಪಂಚರತ್ನ ಯಾತ್ರೆಗೆ ಅದ್ದೂರಿ ಚಾಲನೆ ನೀಡಲಾಗಿದೆ.
ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆಸಿದ ವಿಚಾರ : ನಾಳೆ ಎಲ್ಲ ತಪ್ಪಿಸ್ಥರನ್ನು ಬಂಧಿಸಲು ಸರ್ಕಾರಕ್ಕೆ ಗಡುವು ಕೊಟ್ಟ ಡಿಕೆಶಿ
ಕಾರ್ಯಕ್ರಮಕ್ಕಾಗಿ 40 ಎಕರೆ ಪ್ರದೇಶದಲ್ಲಿ ಜರ್ಮನ್ ಟೆಂಟ್ ವ್ಯೆವಸ್ಥೆಯನ್ನು ಮಾಡಲಾಗಿದ್ದು , ಕೋಲಾರ , ಚಿಕ್ಕಬಳ್ಳಾಪುರ , ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಿಂದ ಬಸ್ ಗಳ ಮೂಲಕ ಜನರನ್ನು ಕರೆತರಲಾಗಿತ್ತು. ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಭಾಗಿಯಾಗಿದ್ದು ಎಲ್ಲರಿಗೂ ಮದ್ಯಾಹ್ನದ ಊಟದ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿತ್ತು.
84 ಲಕ್ಷ ಸಾಲ ಕೊಟ್ಟು 4 ಕೋಟಿ ಕಟ್ಟಲು ಹೇಳಿದ ಬ್ಯಾಂಕ್ : ದಯಾಮರಣಕ್ಕೆ ಅರ್ಜಿ ಬರೆದ ವ್ಯಕ್ತಿ
ಎಚ್. ಡಿ. ದೇವೇಗೌಡ ಅವರು ಕಾರ್ಯಕ್ರಮದಲ್ಲಿ ಮಾತನಾಡಿ ಕೆಂದ್ರದ ಮೋದಿ ಸರ್ಕಾರ ತಮಿಳು ನಾಡಿನ ಒಲೈಕೆಗಾಗಿ ನಮ್ಮ ಪಾಲಿನ ನೀರನ್ನು ತಮಿಳುನಾಡಿಗೆ ಬಿಟ್ಟು ಕೊಡುತ್ತಿದ್ದಾರೆ , ನಮ್ಮ ನಾಡಿನ ಅಭಿವೃದ್ಧಿಗೆ ಪಂಚರತ್ನ ಯೋಜನೆ ಸಿದ್ದಪಡಿಸಿದ್ದು ಇವುಗಳ ಅನುಷ್ಟಾನಕ್ಕೆ ಕುಮಾರಸ್ವಾಮಿ ಯವರನ್ನು ಬೆಂಬಲಿಸಿ ಅಧಿಕಾರ ನೀಡಿ ಆಶಿರ್ವದಿಸಿ ಎಂದು ವಿನಂತಿಸಿದರು. ನಿಖಿಲ್ ಕುಮಾರಸ್ವಾಮಿ ಮಾತನಾಡಿ 1994 ರಲ್ಲಿ ದೇವೇಗೌಡರು ಕುರುಡುಮಲೆ ವಿನಾಯಕನಿಗೆ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ನಡೆಸಿ ಜೆಡಿಎಸ್ ಅಧಿಕಾರಕ್ಕೆ ಬಂದಿತ್ತು. ಅದೇರೀತಿ ಈ ಸಲ ವಿನಾಯಕನ ಸನ್ನಿದಾನದಿಂದ ಯಾತ್ರೆ ಪ್ರಾರಂಬಿಸಿದ್ದೇವೆ ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಮಹಾರಾಷ್ಟ್ರದ ಮುಂಬೈ-ಪುಣೆ ಎಕ್ಸ್ ಪ್ರೆಸ್ ವೇಯಲ್ಲಿ ಭೀಕರ ಅಪಘಾತ: ಐವರ ದುರ್ಮರಣ, ಮೂವರ ಸ್ಥಿತಿ ಚಿಂತಾಜನಕ
ಜೆಡಿಎಸ್ ರಾಜ್ಯಾದ್ಯಕ್ಷ ಸಿ. ಎಂ. ಇಬ್ರಾಹಿಂ ಮಾತನಾಡಿ ಕಾಂಗ್ರೆಸ್ ಅವರ ಸ್ವಯಂಕೃತ ಅಪರಾದ ದಿಂದ ಅಳಿವಿನ ಅಂಚಿಗೆ ಹೋಗಿದ್ದಾರೆ , ಇನ್ನು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮಾತನಾಡಿ ಸಿದ್ದರಾಮಯ್ಯ ಪಂಚರತ್ನ ಯಾತ್ರೆಯ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದರು. ಇನ್ನು ದೆಹಲಿಯಿಂದ ಲಕೋಟೆ ಬಂದು ಅದರಂತೆ ಆಡಳಿತ ನಡೆಸುವ ಪಕ್ಷ ಬಿಜೆಪಿ, ಅವರಿಂದ ಜನರಿಗೆ ಯಾವುದೇ ಪ್ರಯೋಜನ ಇಲ್ಲ. ಇಂತಹ ದರಿದ್ರ ಸರ್ಕಾರ ಅಧಿಕಾರಕ್ಕೆ ಬರುವಂತೆ ಮಾಡಿದ್ದು ಕಾಂಗ್ರೆಸ್ ನವರು ಎಂದು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ . ಇನ್ನು ಶುಕ್ರವಾರ ರಾತ್ರಿ ಮುಳಬಾಗಿಲು ತಾಲ್ಲೂಕಿನ ಉರುಕುಂಟೆ ಮಿಟ್ಟೂರು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡುವ ಮುಖಾಂತರ ಗ್ರಾಮವಾಸ್ತವ್ಯಕ್ಕೆ ಚಾಲನೆಯನ್ನು ಸಹ ಕುಮಾರಸ್ವಾಮಿ ನೀಡಲಿದ್ದಾರೆ .
ಮಹಾರಾಷ್ಟ್ರದ ಮುಂಬೈ-ಪುಣೆ ಎಕ್ಸ್ ಪ್ರೆಸ್ ವೇಯಲ್ಲಿ ಭೀಕರ ಅಪಘಾತ: ಐವರ ದುರ್ಮರಣ, ಮೂವರ ಸ್ಥಿತಿ ಚಿಂತಾಜನಕ