Thursday, August 7, 2025

Latest Posts

ಸಾರಿಗೆ ನೌಕರರಿಗೆ ಜೆಡಿಎಸ್ ಬೆಂಬಲ!

- Advertisement -

ಸಾರಿಗೆ ನೌಕರರ ಹೋರಾಟಕ್ಕೆ ಜೆಡಿಎಸ್ ಕೂಡ ಬೆಂಬಲ ಘೋಷಿಸಿದೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಸಾರಿಗೆ ನೌಕರರಿಗೆ ಸ್ಪಂದಿಸಬೇಕು ಅಂತಾ, ಜೆಡಿಎಸ್‌ ಯುವ ನಾಯಕ ನಿಖಿಲ್‌ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿಗಳು ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ, ಹಿಂದೆ ಮುಂದೆ ನೋಡುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಒಂದು ಹೇಳಿಕೆ, ಅಧಿಕಾರ ಇಲ್ಲದಿದ್ದಾಗ ಒಂದು ರೀತಿಯ ವರ್ತನೆ. ಇದು ಡಬಲ್ ಸ್ಟಾಂಡ್ ಸರ್ಕಾರ ಅಂತಾ ನಿಖಿಲ್‌ ವ್ಯಂಗ್ಯವಾಡಿದ್ರು.

ನೆಲಮಂಗಲದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಿಖಿಲ್‌ ಕುಮಾರಸ್ವಾಮಿ, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಈ ಹಿಂದೆ ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ, ಈಗಿನ ಮುಖ್ಯಮಂತ್ರಿಗಳೇ ಸಾರಿಗೆ ನೌಕರರ ಪರವಾಗಿ ಭಾಷಣ ಮಾಡಿದ್ರು. ಅವರಿಗೆ ಸಹಕಾರ ಕೊಡ್ತೀವಿ ಅಂತಾ ಹೇಳಿದ್ರು. ಈಗ ನಿಮ್ಮದೇ ಸರ್ಕಾರದ ಇದೆ. ದಯಮಾಡಿ ಸಹಕಾರ ಕೊಡಿ.

ಮುಖ್ಯಮಂತ್ರಿಗಳು ನಾಲ್ಕೂವರೆ ಲಕ್ಷ‌ ಕೋಟಿ ಬಜೆಟ್ ಬಗ್ಗೆ ಮಾತಾಡ್ತಾರೆ. KSRTC, BMTC ನೌಕರರ 800 ಕೋಟಿ ವೇತನ ಪರಿಷ್ಕರಣೆ ಮಾಡುವುದು ದೊಡ್ಡ ವಿಷಯ ಅಲ್ಲ. ಆದರೆ ಅವರ ಪರಿಸ್ಥಿತಿಗಳು ಹೇಗಿದೆ ಅನ್ನೋದನ್ನ ಗಮನಿಸಬೇಕು. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಅವರ ಬೇಡಿಕೆ ಈಡೇರಿಸಿ. ಇಲ್ಲದಿದ್ದರೆ ಸಾರಿಗೆ ನೌಕರರ ಬೆಂಬಲಕ್ಕೆ ನಾವು ಬದ್ದ. ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆಂದು ಎಚ್ಚರಿಕೆ ನೀಡಿದ್ರು.

ಒಟ್ನಲ್ಲಿ, ಸಾರಿಗೆ ನೌಕರರ ಮುಷ್ಕರಕ್ಕೆ ಜನಸಾಮಾನ್ಯರು ಬೆಂಬಲ ವ್ಯಕ್ತಪಡಿಸಿದ್ರು. ಬೇಡಿಕೆಗಳನ್ನು ಈಡೇರಿಸಿ ಅಂತಾ ಆಗ್ರಹಿಸಿದ್ರು. ಇದೀಗ ಜೆಡಿಎಸ್‌ ಕೂಡ ಬೆಂಬಲ ನೀಡಿದೆ.

- Advertisement -

Latest Posts

Don't Miss