Tuesday, October 14, 2025

Latest Posts

JDS ಯುವ ನಾಯಕ ನಿಖಿಲ್‌ ಕುಮಾರಸ್ವಾಮಿ ಧರ್ಮಸ್ಥಳ ಯಾತ್ರೆ

- Advertisement -

ಧರ್ಮಸ್ಥಳ ವಿಚಾರವನ್ನೇ 2028ರ ಗೆಲುವಿಗೆ ಬ್ರಹ್ಮಾಸ್ತ್ರ ಮಾಡಿಕೊಳ್ಳಲು, ದೋಸ್ತಿ ಪಡೆ ಸ್ಟ್ರ್ಯಾಟಜಿ ರೂಪಿಸಿದೆ. ಇದರ ಭಾಗವಾಗೇ ಬಿಜೆಪಿ ಬಳಿಕ ಜೆಡಿಎಸ್‌ ಕೂಡ ಧರ್ಮಸ್ಥಳ ಯಾತ್ರೆಗೆ ಹೊರಟು ನಿಂತಿದೆ. ಆಗಸ್ಟ್‌ 31ರಂದು, ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ನೇತೃತ್ವದಲ್ಲಿ, ಧರ್ಮಸ್ಥಳ ಯಾತ್ರೆ ಕೈಗೊಳ್ಳಲಾಗ್ತಿದೆ.

ಕಾಂಗ್ರೆಸ್ ಸರ್ಕಾರ ಮತ್ತು ಹಿಂದೂ ಧರ್ಮದ ಕೆಲ ವಿರೋಧಿಗಳು ಸೇರಿ, ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದನ್ನು ಜೆಡಿಎಸ್ ಖಂಡಿಸುತ್ತದೆ. ಆಗಸ್ಟ್ 31ರಂದು ಸತ್ಯಯಾತ್ರೆ ಕೈಗೊಂಡಿದ್ದು, 300ಕ್ಕೂ ಹೆಚ್ಚು ಕಾರುಗಳಲ್ಲಿ ಸಾವಿರಾರು ಮಂದಿ ಧರ್ಮಸ್ಥಳಕ್ಕೆ ಹೋಗುತ್ತಿದ್ದೇವೆ. ಹೀಗಂತ ಚಿಕ್ಕಬಳ್ಳಾಪುರ ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲಕುಂಟಹಳ್ಳಿ ಮುನಿಯಪ್ಪ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರದಿಂದ ಹಾಸನಕ್ಕೆ ತೆರಳಿ, ಅಲ್ಲಿಂದ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಜೊತೆಗೂಡಿ ಧರ್ಮಸ್ಥಳಕ್ಕೆ ಹೋಗುತ್ತಿದ್ದೇವೆ. ಇದರಲ್ಲಿ ಜೆಡಿಎಸ್ ಕಾರ್ಯಕರ್ತರು, ಮುಖಂಡರು, ಧರ್ಮಸ್ಥಳದ ಭಕ್ತರು ಆಗಮಿಸುತ್ತಿದ್ದಾರೆ. ಈ ಮೂಲಕ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಬೆಂಬಲ ನೀಡಬೇಕು.

ಯೂಟ್ಯೂಬರ್ ಸಮೀರ್ ಕಾರಣಕ್ಕಾಗಿ, ಧರ್ಮಸ್ಥಳದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಮಾಸ್ಕ್‌ಮ್ಯಾನ್ ಚಿನ್ನಯ್ಯನ ಹೇಳಿಕೆ ಆಧರಿಸಿ , ಎಲ್ಲಾ ಕಡೆ ಗುಂಡಿಗಳನ್ನು ಆಗೆಯಲಾಗಿದೆ. ಆದರೆ ಎಲ್ಲೂ ಕೂಡ ಒಂದೇ ಒಂದು ಹೆಣದ ಮೂಳೆಯೂ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಜನರೇ ಇದಕ್ಕೆ ಉತ್ತರ ನೀಡಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರ್ಮಸ್ಥಳ ಸತ್ಯ ಕ್ಷೇತ್ರ. ಹಾಸನದಿಂದ ನೇರವಾಗಿ ಧರ್ಮಸ್ಥಳಕ್ಕೆ ನಮ್ಮ ಪ್ರಯಾಣ ಸಾಗಲಿದೆ. ಧರ್ಮಸ್ಥಳದಲ್ಲಿರುವ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿ, ಮಂಜುನಾಥನ ದರ್ಶನ ಪಡೆದು ವೀರೇಂದ್ರ ಹೆಗಡೆಯವರ ಆಶೀರ್ವಾದ ಪಡೆಯುತ್ತೇವೆ. ಜೆಡಿಎಸ್ ಪಕ್ಷವು ನಿಮ್ಮ ಪರವಾಗಿ ಇರಲಿದೆ ಎಂಬ ಸಂದೇಶವನ್ನು ಕೊಡುತ್ತೇವೆ. ಹೀಗಂತ ಚಿಕ್ಕಬಳಾಪುರದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಬಾಲಕುಂಟಹಳ್ಳಿ ಮುನಿಯಪ್ಪ ತಿಳಿಸಿದ್ರು.

- Advertisement -

Latest Posts

Don't Miss