ಕರ್ನಾಟಕ ಟಿವಿ ಯಾದಗಿರಿ : ಜೀನಿ ಮಿಲ್ಲೇಟ್ ಹೆಲ್ತ್ ಮಿಕ್ಸ್ ಸಕಲ ಕಾಯಿಲೆಗೂ ರಾಮಬಾಣ ಅನ್ನೋದು ಗೊತ್ತಿರುವ ವಿಚಾರ. ಕಾಯಿಲೆ ಬಂದ ಮೇಲೆ ಜನ ಔಷಧಿಗಳ ಮೊರೆ ಹೋಗ್ತಾರೆ. ಅಂತಹ ಸಂದರ್ಭದಲ್ಲಿ ತಿಂಗಳುಗಟ್ಟಲೇ, ಕೆಲವೊಂದು ವೇಳೆ ವರ್ಷಗಟ್ಟಲೆ ಮಾತ್ರೆಗಳನ್ನ ನುಂಗುವಂತ ಸನ್ನಿವೇಶ ನಿರ್ಮಾಣವಾಗುತ್ತದೆ. ಆದ್ರೆ, ಕಾಯಿಲೆಗೆ ತುತ್ತಾದವರು ಮಾತ್ರೆಗಳ ಜೊತೆ ಜೀನಿ ಮಿಲ್ಲೆಟ್ಸ್ ಗಂಜಿ ಕುಡಿಯೋದರಿಂದ ದೇಹದಲ್ಲಿ ಶಕ್ತಿ ಹೆಚ್ಚಾಗಿ ರೋಗಗಳ ವಿರುದ್ಧ ಹೋರಾಡಿ ಗುಣವಾಗಲು ಸಹಕಾರಿಯಾಗುತ್ತೆ. ಯಾಕಂದ್ರೆ ಜೀನಿ ಮಿಲ್ಲೆಟ್ಸ್ ಹೆಲ್ತ್ ಪೌಡರ್ ಅನ್ನು 9 ಸಿರಿಧಾನ್ಯಗಳು ಸೇರಿ 24 ರೀತಿಯ ಕಾಳುಗಳ ಮಿಶ್ರಣದಿಂದ ತಯಾರು ಮಾಡಲಾಗಿದೆ. ಯಾದಗಿರಿ ಜಿಲ್ಲಾಡಳಿತ ಕಳೆದ 5-6 ತಿಂಗಳಿಂದ ಕ್ಷಯ ರೋಗಿಗಳಿಗೆ ಔಷಧಿಯ ಜೊತೆ ಜೀನಿ ಮಿಲ್ಲೆಟ್ಸ್ ಗಂಜಿಯನ್ನ ಪ್ರಾಯೋಗಿಕವಾಗಿ ಕುಡಿಯಲು ಕೊಡುತ್ತ ಕೊಟ್ಟಿದ್ರು. ಜೀನಿ ಗಂಜಿ ಕುಡಿಯುವ ರೋಗಿಗಳು ಇತರೆ ರೋಗಿಗಳಿಗಿಂತ ತುಂಬಾ ವೇಗವಾಗಿ ರಿಕವರಿಯಾದ ಹಿನ್ನೆಲೆ ಇಂದು ಜೀನಿ ಕಂಪನಿಯ ಎಂಡಿ ದಿಲೀಪ್ ಕುಮಾರ್ ಅವರನ್ನ ಸನ್ಮಾನಿಸಲಾಯಿತು.
ಟಿಬಿ ನಿಯಂತ್ರಣ ವಿಚಾರದಲ್ಲಿ ಯಾದಗಿರಿಗೆ ಬೆಳ್ಳಿಪದಕ
ಇದಿಷ್ಟೆ ಅಲ್ಲ ಯಾದಗಿರಿ ಜಿಲ್ಲೆ ಇಡೀ ದೇಶದಲ್ಲಿ ಕಡಿಮೆ ಟಿಬಿ ರೋಗಿಗಳಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಕೆಂದ್ರ ಸರ್ಕಾರ ಬೆಳ್ಳಿ ಪದಕ ನೀಡಿ ಗೌರವಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಯಾದಗಿರಿ ಡಿಸಿ ರಾಗಪ್ರಿಯ ಜೀನಿ ಮಿಲ್ಲೇಟ್ಸ್ ನಿಂದ ರೋಗಿಗಳಲ್ಲಿ ಆದ ಬದಲಾವಣೆ ಬಗ್ಗೆ ಮಾಹಿತಿ ನೀಡಿದ್ರು ಜೊತೆಗೆ ಸಿರಿಧಾನ್ಯಗಳ ಸಿರಿವಂತ ದಿಲೀಪ್ ಕುಮಾರ್ ಕಾರ್ಯವನ್ನ ಶ್ಲಾಘಿಸಿದ್ರು. ಅಲ್ಲದೇ ಇತರೆ ರೋಗಿಗಳಿಗೂ ಜೀನಿ ಕೊಡುವ ಗುರಿ ಇಟ್ಟುಕೊಳ್ಳಬೇಕು ಅಂತ ಹೇಳಿದ್ರು.
ಡಾ. ರಾಗಪ್ರಿಯಾ, ಯಾದಗಿರಿ ಜಿಲ್ಲಾಧಿಕಾರಿ
ಈ ಸಂದರ್ಭದಲ್ಲಿ ಮಾತನಾಡಿದ ದಿಲೀಪ್ ಕುಮಾರ್ ಅಭಿವೃದ್ಧಿ ವಿಚಾರದಲ್ಲಿ ಹಿಂದುಳಿದ ಜಿಲ್ಲೆಯ ಪಟ್ಟಿಗೆ ಸೇರಿದ್ದ ಜಿಲ್ಲೆ ಇದೀಗ ಕ್ಷಯ ರೋಗ ನಿಯಂತ್ರಣ ವಿಚಾರದಲ್ಲಿ ಬೆಳ್ಳಿ ಪದಕ ಪಡೆದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಜೊತೆ ಹೆಚ್ಚಿನದಾಗಿ ಕೈಜೋಡಿಸುವುದಾಗಿ ತಿಳಿಸಿದ್ರು.
ದಿಲೀಪ್ ಕುಮಾರ್, ಜೀನಿ ಕಂಪನಿ ಎಂಡಿ
ಇನ್ನು ರಾಷ್ಟ್ರಮಟ್ಟದ ಕ್ಷಯ ರೋಗ ನಿಯಂತ್ರಣ ವಿಚಾರದಲ್ಲಿ ಬೆಳ್ಳಿಪದಕ ಪಡೆದ ಅಧಿಕಾರಿಗಳು ಕ್ಷಯ ರೋಗಿ ಗುಣಮುಖರಾಗಲು ಜೀನಿ ಸಹಕಾರಿಯಾದ ಹಿನ್ನೆಲೆ ಧನ್ಯವಾದ ತಿಳಿಸಿದ್ರು.
ಒಟ್ಟಾರೆ, ಒಂದೊಳ್ಳೆಯ ಆಹಾರ ಮನುಷ್ಯನ ರಕ್ಷಕನಾಗಿ ಕಾಪಾಡುತ್ತೆ ಅನ್ನೋದಕ್ಕೆ ಈ ಘಟನೆ ಉದಾಹರಣೆ. ಹೀಗಾಗಿ ಆರೋಗ್ಯ ಹದಗೆಟ್ಟವರು, ಆರೋಗ್ಯ ಚೆನ್ನಾಗಿ ಕಾಪಾಡಿಕೊಳ್ಳಬೇಕು ಅನ್ನುವವರು ಜೀನಿ ಕುಡಿಯೋದ್ರಿಂದ ಖಂಡಿತ ಸುಧಾರಣೆ ಕಾಣಬಹುದು.
ಅನಿಲ್ ಕುಮಾರ್, ಕರ್ನಾಟಕ ಟಿವಿ.ನೆಟ್, ಯಾದಗಿರಿ




