www.karnatakatv.net: ಮುಂಬೈ- ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ 44ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋ ಫೋನ್ ನೆಕ್ಸ್ಟ್ 5G ಫೋನ್ ನನ್ನು ಅಧಿಕೃತವಾಗಿ ಪರಿಚಯಿಸಿದೆ. ಟೆಲಿಕಾಂ ದೈತ್ಯ ಕಂಪನಿಯು ಟೆಕ್ ದೈತ್ಯ ಗೂಗಲ್ ಜೊತೆ ಸೇರಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ 5G ಫೋನ್ ಗಳನ್ನ ಮಾರುಕಟ್ಟೆಗೆ ತರುವ ಬಗ್ಗೆ ಮಾಹಿತಿ ನೀಡಿದೆ. ಈ ಹೊಸ ಸಾಧನದಲ್ಲಿ ವಾಯ್ಸ್ ಅಸಿಸ್ಟಂಟ್, ಭಾಷಾ ಅನುವಾದ, ಸ್ಮಾರ್ಟ್ ಕ್ಯಾಮೆರಾ ಸೇರಿದಂತೆ ಇನ್ನೂ ಹಲವು ಬಗೆಯ ಸೌಲಭ್ಯಗಳು ಇರಲಿವೆ ಎಂದು ತಿಳಿದು ಬಂದಿದೆ. ಈ ಹೊಸ ಸ್ಮಾರ್ಟ್ ಫೋನ್ ಗಳು ಈ ವರ್ಷ ಗಣೇಶ ಚತುರ್ಥಿಯಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದು ಕಂಪನಿ ಹೇಳಿದೆ.




