ಬೆಂಗಳೂರು: ಚಿತ್ರರಂಗದಲ್ಲಿ ಚಾಪನ್ನು ಮೂಡಿಸಿದ ಜೋಗಿ ಪ್ರೇಮ್ ಅವರು ಪ್ರೇಕ್ಷಕರಿಗೆ ಅನೇಕ ಸಿನೆಮಾಗಳನ್ನೆ ನೀಡಿದ್ರು. ಈಗ ಜೋಗಿ ಪ್ರೇಮ್ ಅವರು ಹೊಸ ಸಿನಿಮಾ ಮಾಡಲು ತಯಾರಾಗಿದ್ದು ಅದರ ಸ್ಕ್ರಿಪ್ಟ್ ರೆಡಿಯಾಗಿದ್ದು ಅದರ ಪೂಜೆಯನ್ನು ಪೂರ್ಣಗೊಳಿಸಿದ್ದಾರೆ. ಇದೀಗ ಪೊಗರು ನಂತರ ಧ್ರುವಾ ಜೋಗಿ ಪ್ರೇಮ್ ಜೊತೆ ಕೈಜೊಡಿಸುತ್ತಿತ್ತು ಭಾರೀ ನಿರೀಕ್ಷೆ ಹುಟ್ಟುಹಾಕಿದೆ.
ಹೌದು ‘ಏಕ್ ಲವ್ ಯಾ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಜೋರಾಗಿದ್ದು, ಇದರ ಜೊತೆ ಜೊತೆಗೆ ಪ್ರೇಮ್ ಮತ್ತೊಂದು ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಪ್ರೇಮ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 9 ಚಿತ್ರ ಇದಾಗಿದ್ದು, ಇದರ ಸ್ಕ್ರಿಪ್ಟ್ ಪೂಜೆಯನ್ನು ಅಗಸ್ಟ್ ಮೊದಲನೇ ವಾರದಲ್ಲಿ ನೇರವೇರಿಸಿದ್ದರು. ಅದೇ ರೀತಿ ಪ್ರೇಮ್ ಅವರು ಪೂಜೆಯ ವೇಳೆ ಹತೋ ಪ್ರಾಪ್ಸ್ಯಸಿ ಸ್ವರ್ಗಂ, ಜತ್ವಾ ಭೋಕ್ಸ್ಯ ಸೇ ಮಹೀಮ್ ತಸ್ಮಾದುತ್ತಿಷ್ಠ ಕೌಂತೇಯ ಯುದ್ದಾಯ ಕೃತನಿಶ್ಚಯಃ ಯುದ್ದ ಶುರು ಎಂಬ ಸಾಲುಗಳು ಎಲ್ಲರ ಗಮನ ಸೆಳೆಯುತ್ತಿದ್ದು ಪ್ರೇಮ್ ಅವರು ಹೊಸ ಸಿನೆಮಾ ಗೆ ಸಿದ್ದತೆಯನ್ನು ಮಾಡಿಕೊಂಡಿದ್ದಾರೆ.. ಧ್ರುವಾ ಸರ್ಜಾ ಸಹ ಪ್ರೇಮ್ ಮೇಲೆ ನಿರೀಕ್ಷೆ ಇಟ್ಟು ಈ ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಈ ಚಿತ್ರವನ್ನು ಕೆವಿಎನ್ ಪ್ರೋಡಕ್ಷನ್ ನಿರ್ಮಮಾನವನ್ನು ಮಾಡಲಾಗಿದ್ದು ಇದೇ ತಿಂಗಳಿನಲ್ಲಿ ಚಿತ್ರದ ಟೈಟಲ್ ಲಾಂಚ್ ಮಾಡುವುದಾಗಿ ತಿಳಿಸಿದ್ದಾರೆ.
ವಿನುತಾ ಹವಾಲ್ದಾರ್ ಕರ್ನಾಟಕ ಟಿವಿ ಬೆಂಗಳೂರು.