Jogimatti : ಕೋಟೆನಾಡಿನಲ್ಲಿ ಮಲೆನಾಡಿನ ಸೊಬಗು…! ಪ್ರವಾಸಿಗರು ಫುಲ್ ಖುಷ್..!

Chithradurga News: ಕರುನಾಡ ಕೋಟೆನಾಡು ಚಿತ್ರದುರ್ಗದಲ್ಲಿ ಇದೀಗ ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ. ಹೌದು ಕೋಟೆನಾಡಿನ ಊಟಿ ಎಂದೇ ಪ್ರಸಿದ್ಧವಾಗಿರುವ ಜೋಗಿಮಟ್ಟಿ ಅರಣ್ಯ ಪ್ರದೇಶದ ಸೌಂದರ್ಯಕ್ಕೆ ಪ್ರವಾಸಿಗರಂತೂ ಮಾರುಹೋಗಿದ್ದಾರೆ.

No photo description available.

ಕೋಟೆ ನಾಡಿಗೆ ಈ ಬಾರಿ ಮುಂಗಾರು ಕೈಕೊಟ್ಟಂತಿದ್ದರೂ ಮಂಜು  ಮುಸುಕಿದ ವಾತಾವರಣದಿಂದ ಪ್ರವಾಸಿ ತಾಣವಾದ ಜೋಗಿ ಮಟ್ಟಿ ಅರಣ್ಯ ಪ್ರದೇಶ ಮಾತ್ರ ಮಲೆನಾಡಿನಂತೆ ಕಂಗೊಳಿಸುತ್ತಿದೆ.

No photo description available.

ಇನ್ನು ಈ ಅರಣ್ಯ ಪ್ರದೇಶದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಜನರ ದಂಡೇ ಹರಿದು ಬರುತ್ತಿದೆ. ಮುಂಜಾವಿನ ವೇಳೆಗೆ ಮಂಜುಮುಸುಕಿದ ವಾತಾವರಣವನ್ನು ಕಾಣುವ ಸಲುವಾಗಿ ಪ್ರವಾಸಿಗರು ಬೆಳ್ಳಂಬೆಳಗ್ಗೆ ಓಡೋಡಿ ಬರುತ್ತಿದ್ದಾರೆ. ಆಗಾಗೆ ತುಂತುರು ಮಳೆಯಾಗುತ್ತಿದ್ದು ಇಳೆಗೆ ತಂಪೆರೆಯುತ್ತಿದೆ.

ಇನ್ನು ಸುಂದರ ಪ್ರವಾಸಿ ತಾಣವಾದ ಕೋಟೆನಾಡಿನ ಊಟಿ ಮತ್ತಷ್ಟು ಅಭಿವೃದ್ಧಿ ಕಾಣಬೇಕಿದೆ ಅನ್ನೋದು ಪ್ರವಾಸಿಗರ ಮಾತು.

Raagi ball- ನಾಟಿಕೋಳಿ ಸಾರು ರಾಗಿಮುದ್ದೆ ಸ್ಪರ್ಧೆ ಆಯೋಜನೆ

Vidhana Soudha :ಶಾಸಕರಿಗೆ ಕಾರ್ ಪಾರ್ಕಿಂಗ್ ಗೆ ಜಾಗವಿಲ್ಲ…!

Kaveri river: ಮಾನಸಿಕ ಖಿನ್ನತೆಗೆ ಸ್ವಾಮಿಜೀಯ ಆತ್ಮಹತ್ಯೆ

About The Author