- Advertisement -
Hubballi News:ಹುಬ್ಬಳ್ಳಿ: ಸುಳ್ಳು ಭರವಸೆ ನೀಡಿ, ಅಧಿಕಾರಕ್ಕೆ ಬಂದ ಇವರು ಅವುಗಳನ್ನು ಈಡೇರಿಸಲು ಜನ ಸಾಮಾನ್ಯರ ಮೇಲೆ ಬೆಲೆ ಏರಿಕೆಯ ಹೊರೆ ಹೊರಿಸಿದ್ದಾರೆ. ಬಡವರ ಕಲ್ಯಾಣವೆಂಬ ಬೊಗಳೆ ಬಿಟ್ಟ ಇವರು ಇಂದು ಬಡವನ ಬಾಳಿಗೆ ಕೊಳ್ಳಿ ಇಟ್ಟಿದ್ದಾರೆ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಒಂದು ಮಂಡಿಸಿರುವ ರಾಜ್ಯ ಬಜೆಟ್ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ #ATMSarkara #ಸಾಲರಾಮಯ್ಯ ಎಂದು ಯ‌್ಯಾಶ್ ಟ್ಯಾಗ್ ಮಾಡಿ ಬಜೆಟ್ ಬಗ್ಗೆ ಅಸಮಾಧಾನ ಹೊರ ಹಾಕಿರುವ ಜೋಶಿ, ಬೆಲೆ ಏರಿಕೆ ಗ್ಯಾರಂಟಿ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುವ ದಿನಗಳಲ್ಲಿ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಅಧೋಗತಿಗೆ ತೆಗೆದುಕೊಂಡು ಹೋಗುವ ಎಲ್ಲ ಸೂಚನೆಗಳನ್ನು ನೀಡಿದ್ದಾರೆ ಅಂತ ಹರಿಹಾಯ್ದಿದ್ದಾರೆ.
- Advertisement -