Wednesday, September 11, 2024

Latest Posts

ಮನೆ ಬಿದ್ದ ಮೃತರಾಗಿದ್ದ ಯಲಪ್ಪ ಮನೆಗೆ ಭೇಟಿ ನೀಡಿ, ಧನ ಸಹಾಯ ಮಾಡಿದ ಕೇಂದ್ರ ಸಚಿವ ಜೋಶಿ

- Advertisement -

Dharwad News: ಧಾರವಾಡ: ಧಾರವಾಡದಲ್ಲಿ ಮನೆ ಕುಸಿದು ಸಾವನ್ನಪ್ಪಿದ್ದ ಗ್ರಾಮಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ನೀಡಿದ್ದರು. ಇಲ್ಲಿನ ವೆಂಕಟಾಪೂರ ಗ್ರಾಮದಲ್ಲಿ ಮನೆ ಬಿದ್ದು, ಯಲ್ಲಪ್ಪ ಹಿಪ್ಪಿ ಎನ್ನುವವರು ಸಾವನ್ನಪ್ಪಿದ್ದು, ಅವರ ಮನೆಗೆ ಭೇಟಿ ನೀಡಿದ ಜೋಶಿ, ಅವರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಅಲ್ಲದೇ ಧನನ ಸಹಾಯವೂ ಮಾಡಿದ್ದಾರೆ.

ಬಳಿಕ ಮಾಧ್ಯಮದ ಜೊತೆ ಮಾತನಾಡಿರುವ ಜೋಶಿ, ಕಳೆದ ಶುಕ್ರವಾರ ಪಕ್ಕದ ಮನೆ ಗೋಡೆ ಕುಸಿದು ಯಲ್ಲಪ್ಪ ನಿಧನರಾಗಿದ್ದರು. ಬಹಳ ದುರ್ದೈವದ ಸಂಗತಿ. ಮೂರು ಮಕ್ಕಳಿವೆ, ಹೆಂಡತಿ ಮಕ್ಕಳಿಗೆ ಗಾಯವಾಗಿತ್ತು. ಈಗಾಗಲೇ ಪರಿಹಾರವನ್ನು ಸರ್ಕಾರದಿಂದ 5ಲಕ್ಷ ನೀಡಿದ್ದೇವೆ. ವಿಧವಾ ವೇತನ ಬರುವ ಹಾಗೆ ಮಾಡಲು ಹೇಳಲಾಗಿದೆ. ಮುಂದೆ ಮನೆ ಬರುವ ಸ್ಕೀಂ ಬಗ್ಗೆ ಮಾಡಿ ಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮಳೆ ಜಾಸ್ತಿ ಇದ್ದ ಹಿನ್ನೆಲೆ ಮಣ್ಣಿನ ಮನೆಗಳು ಬಗ್ಗೆ ಜಾಗೃತಿ ವಹಿಸಲು ಸೂಚನೆ ಕೊಟ್ಟಿದ್ದೇನೆ. ಮನೆ ಬೀಳುತ್ತಿರುವುದನ್ನು ಅಧಿಕಾರಿಗಳು ಹಾಗೂ ಗ್ರಾಮ ಪಂ ಯವರು ಗಮನಿಸಬೇಕು.

ಮೊದಲು ಇದ್ದ 5ಲಕ್ಷ ಪರಿಹಾರ ವಿತರಣೆ ಆಗದ ಹಿನ್ನೆಲೆ, ಇಡೀ ರಾಜ್ಯಾದ್ಯಂತ ಮಳೆ ಜಾಸ್ತಿ ಆಗುತ್ತಿದೆ. ಯಡಿಯೂರಪ್ಪ ಇದ್ದ ವೇಳೆಯಲ್ಲಿ ಪ್ರತಿ ಮನೆಗೆ 5ಲಕ್ಷ ಪರಿಹಾರ ನೀಡುತ್ತಿದ್ದರು. ಆದ್ರೆ ಈಗ 1.25ಲಕ್ಷ NDRF ಪರಿಹಾರ ಇದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಹಣ ಕೊಟ್ಟು ರಾಜ್ಯ ಸರ್ಕಾರ ಕೈ ತೊಳೆದುಕೊಳ್ಳುತ್ತಿದೆ. ಇವೆರಡೂ ಭಾರತ ಸರ್ಕಾರದ್ದು ಒಟ್ಟು 2.40ಲಕ್ಷ ಹಣ ಕೊಡುತ್ತಿದೆ. ಇನ್ನು 2.50ಲಕ್ಷ ಹಣವನ್ನು ಸರ್ಕಾರದ ಹಣ ಕೊಡಬೇಕೆಂದು ಸಿಎಂಗೆ ಆಗ್ರಹಿಸುತ್ತೇನೆ ಎಂದು ಜೋಶಿ ಹೇಳಿದ್ದಾರೆ.

ಸರ್ಕಾರ ದಿವಾಳಿ ಎದ್ದಿದೆ. ಮುಂದಾಲೋಚನೆ ಇಲ್ಲದೆ ಗ್ಯಾರಂಟಿ ಕೊಟ್ಟಿದೆ. ಪಾತ್ರೆ ಪಗಡೆ ಕಳೆದುಕೊಂಡವರಿಗೆ ಮೊದಲು 10ಸಾವಿರ ಕೊಡುತ್ತಿದ್ದರು. ಇದೀಗ ಅದನ್ನು ಕೊಡುತ್ತಿಲ್ಲ, ಗಂಭೀರತೆಯನ್ನ ಕಳೆದುಕೊಂಡಿದೆ. ದಯನೀಯ ಸ್ಥಿತಿಯನ್ನು ಕಾಂಗ್ರೆಸ್ ತಲುಪಿದೆ. ಆದ್ರೂ ಸಹ ದೊಡ್ಡದಾಗಿ ಭಾಷಣ ಮಾಡುತ್ತೀರಾ. ನಾವು ಬಡವರಿಗಾಗಿ ಬಹಳಷ್ಟು ಮಾಡಿದ್ದೇವೆ ಅಂತ ಹೇಳ್ತಿರಿ. ಯಾವುದೇ ಕಾಮಗಾರಿ ಆಗುತ್ತಿಲ್ಲ. ಕೇವಲ 2ಸಾವಿರ ಕೊಟ್ಟು ಕೈ ತೋಳೆದುಕೊಳ್ಳುತ್ತಿದೆ. ವೃದ್ಯಾಪ್ಯ ವೇತನ ಸೇರಿ ವಿಧವಾ ವೇತನ ಬರುತ್ತಿಲ್ಲ. ಯಾವುದೇ ಪ್ಲಾನಿಂಗ್ ಇಲ್ಲದೆ ಗ್ಯಾರಂಟಿ ತಂದರೂ. ಈಗ ಅಧಿಕಾರಿಗಳನ್ನು ಕೇಳಿದ್ರೆ ದುಡ್ಡೆ ಇಲ್ಲ ಅಂತ ಹೇಳ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಜೋಶಿ ವಾಗ್ದಾಳಿ ನಡೆಸಿದ್ದಾರೆ.

- Advertisement -

Latest Posts

Don't Miss