ಸ್ಯಾಂಡಲ್ ವುಡ್ ಅಂಗಳದಲ್ಲಿ ಸ್ಮಾಲ್ ಸ್ಕ್ರೀನ್ ನಲ್ಲಿ ಮಿಂಚೋ ಅದೆಷ್ಟೋ ಚೆಲುವೆಯರು ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಟ್ಮೇಲೆ ಸ್ಟಾರ್ ನಟಿ ಪಟ್ಟಗಿಟ್ಟಿಸಿಕೊಂಡಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಂಪಲ್ ಡಿಂಪಲ್ ಕ್ವೀನ್ ರಚಿತಾ ರಾಮ್. ಸೀರಿಯಲ್ ನಿಂದ ಶುರುವಾದ ಬುಲ್ ಬುಲ್ ಬೆಡಗಿಯ ಸಿನಿಜರ್ನಿಯ ಬಗ್ಗೆ ನಾವೇನು ಬಿಡಿಸಿ ಹೇಳಬೇಕಿಲ್ಲ. ಯಾಕಂದ್ರೆ ಇಂದು ರಚಿತಾ ರಾಮ್ ಕನ್ನಡದ ಟಾಪ್ ಒನ್ ನಟಿ ಅಂದ್ರೆ ತಪ್ಪಾಗಲಾರದು. ಅದೇ ರೀತಿ ಸದ್ಯ ಕನ್ನಡ ಕಿರುತೆರೆ ಲೋಕದಲ್ಲಿ ಮುಗ್ದ ಅಭಿನಯದ ಮೂಲಕ ಕುಲಕೋಟಿ ಕರುನಾಡಿನ ಮನಸು ಕದ್ದಿರುವ ಜೊತೆ ಜೊತೆ ಸೀರಿಯಲ್ ನ ಅನುಸಿರಿ ಮನೆ ಖ್ಯಾತಿ ಮೇಘ ಶೆಟ್ಟಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ.
ಗಣೇಶ್ ಜೊತೆ ಮೇಘ ಶೆಟ್ಟಿ…
ಆರಂಭದಿಂದಲೂ ಮೇಘ ಶೆಟ್ಟಿಗೆ ಸಾಕಷ್ಟು ಸಿನಿಮಾ ಆಫರ್ ಗಳು ಅರಸಿ ಬಂದಿದ್ವು. ಆದ್ರೆ ಒಂದೊಳ್ಳೆ ಕಥೆ, ನಿರ್ದೇಶಕ, ಹೀರೋ ನೋಡಿ ಒಪ್ಪಿಕೊಳ್ಳದಾಗಿ ಹೇಳಿದ್ದ ಮೇಘಗೆ ಕೊನೆಗೂ ಆ ಕಥೆ ಸಿಕ್ಕಿದೆ. ಅದು ಮೊದಲ ಬಾರಿಗೆ ಸ್ಟಾರ್ ಹೀರೋ ಜೊತೆ ನಟಿಸುವ ಅವಕಾಶ. ಯಸ್, ಗೋಲ್ಡನ್ ಸ್ಟಾರ್ ಗಣೇಶ್ ನಾಯಕ ನಟನಾಗಿ ನಟಿಸ್ತಿರುವ ತಿಬ್ರಲ್ ರೈಡಿಂಗ್ ಸಿನಿಮಾದಲ್ಲಿ ಮೇಘ ಶೆಟ್ಟಿ ನಾಯಕಿಯಾಗಿದ್ದಾರೆ. ಇಂದಿನಿಂದ ಶೂಟಿಂಗ್ ಗೆ ಹಾಜರಾಗಿದ್ದು, ಕೆಲವು ಮೇಕಿಂಗ್ ಸ್ಟಿಲ್ಸ್ ನ್ನ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಂದಹಾಗೇ ಈ ಹಿಂದೆ ವಿನೋದ್ ಪ್ರಭಾಕರ್ ರಗಡ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಮಹೇಶ್ ಗೌಡ ಈ ಸಿನಿಮಾಕ್ಕೂ ನಿರ್ದೇಶನ ಮಾಡ್ತಿದ್ದಾರೆ. ಲವ್, ಕಾಮಿಡಿ ಆ್ಯಕ್ಷನ್ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರವಿರುವ ಈ ಚಿತ್ರಕ್ಕೆ ರಾಮ್ ಗೋಪಾಲ್ ವೈ.ಎಂ ಬಂಡವಾಳ ಹೂಡಿದ್ದಾರೆ.