Film News:
ಜೊತೆಜೊತೆಯಲಿ ದಾರವಾಹಿ ಇದೀಗ ಬದಲಾಗುತ್ತಿದೆ. ಹೌದು ಸೀರಿಯಲ್ ಸೆಟ್ ನಲ್ಲಿ ಆದಂತಹ ಗಲಾಟೆಗಳ ನಂತರ ಆರ್ಯವರ್ಧನ್ ಪಾತ್ರಕ್ಕೆ ಬೇರೆ ನಾಯಕ ಬರೋದು ಪಕ್ಕಾ ಆಗಿದೆ. ಈಗಾಗಲೆ ಕಥೆ ಟ್ವಿಸ್ಟ್ ಪಡೆದಿದ್ದು ಆರ್ಯವರ್ಧನ್ ಗೆ ಆಕ್ಸಿಡೆಂಟ್ ಆಗಿದೆ. ಈ ಕಾರಣದಿಂದ ಅನಿರುದ್ದ್ ಪಾತ್ರಕ್ಕೆ ಬೇರೆಯವರು ಬರುವುದು ಖಚಿತವಾಗಿದೆ. ಈ ವಿಚಾರಕ್ಕೆ ಅನಿರುದ್ಧ್ ಪೋಸ್ಟ್ ಒಂದನ್ನು ಮಾಡಿದ್ದಾರೆ. ಅದರಲ್ಲಿ ನನ್ನ ಮೇಲೆ ತಮಗಿರೋ ಅಪಾರವಾದ ಪ್ರೀತಿಯನ್ನು ನೋಡಿ ನಾನು ತಲೆ ಬಾಗುತ್ತೇನೆ. ಈ ಸಂಘರ್ಷದ ದಿನಗಳಲ್ಲಿ ತಾವು ಸಾವಿರಾರು ಸಂದೇಶಗಳ, ಟ್ವೀಟ್, ಕರೆಗಳ, ಪತ್ರಗಳ, ಪ್ರತಿಭಟನೆಗಳ, ಪತ್ರಿಕಾಗೋಷ್ಠಿಗಳ, ಪ್ರಾರ್ಥನೆಗಳ ಮುಖಾಂತರ, ನನ್ನ ಪರ, ನನ್ನ ಬೆಂಬಲಕ್ಕೆ ನಿಂತಿದ್ದೀರಿ, ಅದಕ್ಕೆ ನಾನು ಚಿರ ಋುಣಿ , ತಮ್ಮ ಪ್ರಯತ್ನಗಳಗೆ ತಾವು ಅಂದುಕೊಂಡಿರೋ ಫಲ ಸಿಗಲಿಲ್ಲ ಅಂತ ದಯವಿಟ್ಟು ನಿರಾಶೆಗೊಳ್ಳಬೇಡಿ. ಶ್ರೀ ಅಮಿತಾಭ್ ಬಚ್ಚನ್ ರವರ ತಂದೆ ಮಹಾನ್ ಕವಿ ಶ್ರೀ ಹರಿವಂಶ್ ರಾಯ್ ಬಚ್ಚನ್ ರವರು ಹೇಳುತ್ತಿದ್ದರು “ಮನ್ ಕಾ ಹುವಾ ತೋ ಅಚ್ಛಾ, ನಾ ಹುವಾ ತೋ ಔರ್ ಭೀ ಅಚ್ಛಾ ಕ್ಯುಂಕೆ ತಬ್ ವೋ ಭಗವಾಗ್ ಕೀ ಇಚ್ಛಾ ಹೋತಿ ಹೈ ಔರ್ ಭಗವಾನ್ ತುಮ್ಹಾರೆ ಲಿಯೇ ಅಚ್ಛಾಹೀ ಸೋಚತಾ ಹೈ” (ನಮ್ಮ ಇಚ್ಛಾನುಸಾರ ಆದರೆ ಒಳ್ಳೆದು, ಆಗದೇ ಇದ್ದರೆ ಇನ್ನೂ ಒಳ್ಳೇದು ಯಾಕಂದರೆ ಆಗ ಅದು ದೇವರ ಇಚ್ಛೆ ಆಗಿರುತ್ತೆ ಹಾಗೂ ದೇವರು ನಮಗಾಗಿ ಒಳ್ಳೇದೆ ಮಾಡುತ್ತಾನೆ) ಸ್ವಲ್ಪ ತಾಳ್ಮೆಯಿಂದ ಇರೋಣ, ತಮ್ಮ ಪ್ರೀತಿ, ಹಾರೈಕೆ, ಪ್ರೋತ್ಸಾಹ, ಆಶೀರ್ವಾದ ಹಾಗೂ ಪ್ರಾರ್ಥನೆ ನನ್ನ ಮುಂದಿನ ಯೋಜನೆಗಳ ಮೇಲೂ ಇರತ್ತೆ ಅನ್ನೋ ನಂಬಿಕೆ ನನಗಿದೆ. ಎಂಬುವುದಾಗಿ ಭಾವುಕ ಪೋಸ್ಟ್ ವೊಂದನ್ನು ಮಾಡಿದ್ದಾರೆ.
ರಮೇಶ್ ಅರವಿಂದ್ ಹುಟ್ಟು ಹಬ್ಬಕ್ಕೆ ವಿಶ್ ಮಾಡಲು ಬಯಸುವಿರಾ..?! ಇಲ್ಲಿದೆ ಫೋನ್ ನಂಬರ್..!