Tuesday, April 22, 2025

Latest Posts

N. T. Rama Rao Jr : ಕೃಷ್ಣನ ಮೊರೆ ಹೋದ ಜೂ.ಎನ್‌ಟಿಆರ್: ಪ್ರೀತಿಯಿಂದ ಬರಮಾಡಿಕೊಂಡ ರಿಷಭ್‌ ಶೆಟ್ಟಿ

- Advertisement -

ತೆಲುಗು ಚಿತ್ರರಂಗದ ಸೂಪರ್‌ ಹೀರೋ ಜೂ.ಎನ್‌ಟಿಆರ್‌ ಅವರು ಶನಿವಾರ ಉಡುಪಿಯ ಶ್ರೀಕೃಷ್ಣ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ತಮ್ಮ ತಾಯಿಯೊಂದಿಗೆ ಆಗಮಿಸಿದ ಜೂ.ಎನ್‌ಟಿ ಆರ್‌ ಅವರನ್ನು ಕನ್ನಡದ ಖ್ಯಾತ ನಟ, ನಿರ್ದೇಶಕ ರಿಷಭ್‌ ಶೆಟ್ಟಿ ಅವರು ಪ್ರೀತಿಯಿಂದ ಬರಮಾಡಿಕೊಂಡರು. ಈ ವೇಳೆ ರಿಷಭ್‌ ಶೆಟ್ಟಿ ಅವರಿಗೆ ತಮ್ಮ ತಾಯಿಯನ್ನು ಜೂ.ಎನ್‌ಟಿಆರ್‌ ಅವರು ಪರಿಚಯ ಮಾಡಿಕೊಟ್ಟರು. ರಿಷಭ್‌ ಶೆಟ್ಟಿ ಅವರು ಜೂ.ಎನ್‌ಟಿಆರ್‌ ಅವರ ತಾಯಿಯ ಪಾದಕ್ಕೆ ನಮಸ್ಕರಿಸುವ ಮೂಲಕ ಅವರನ್ನು ಬರಮಾಡಿಕೊಂಡು, ಉಡುಪಿ ಶ್ರೀಕೃಷ್ಣನ ಸನ್ನಿಧಿಗೆ ಕರೆದುಕೊಂಡು ಹೋದರು.

ಕೃಷ್ಣನ ದರ್ಶನ ಬಳಿಕ ಪೂಜೆ ಮಾಡಿಸಿ, ಅಲ್ಲಿ ಪ್ರಸಾದ ಪಡೆದ ಜೂ.ಎನ್‌ಟಿಆರ್‌ ಹಾಗು ಅವರ ತಾಯಿ ರಿಷಭ್‌ ಜೊತೆ ಒಂದಷ್ಟು ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ರಿಷಭ್‌ ಶೆಟ್ಟಿ ಅವರ ಪತ್ನಿ ಇದ್ದರು. ಇನ್ನು, ನಿರ್ದೇಶಕ ಪ್ರಶಾಂತ್‌ ನೀಲ್‌ ಅವರು ಜೂ.ಎನ್‌ಟಿಆರ್‌ ಅವರಿಗೊಂದು ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ. ಸಿನಿಮಾ ಶುರುವಿಗೆ ಮುನ್ನ ಜೂ.ಎನ್‌ಟಿಆರ್‌ ಅವರು ಕೃಷ್ಣನ ಮೊರೆ ಹೋಗಿದ್ದಾರೆ. ಇನ್ನು ಪ್ರಶಾಂತ್‌ ನೀಲ್‌ ಹಾಗು ಜೂ.ಎನ್‌ಟಿಆರ್‌ ಅವರ ಕಾಂಬಿನೇಷನ್‌ನ ಮೊದಲ ಸಿನಿಮಾ ಇದಾಗಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

- Advertisement -

Latest Posts

Don't Miss