International News : ಕ್ಯಾಲಿಫೋರ್ನಿಯಾದಲ್ಲಿ ನ್ಯಾಯಾಧೀಶರೊಬ್ಬರು ತನ್ನ ಹೆಂಡತಿಯನ್ನು ಗುಂಡು ಹಾರಿಸಿ ಕೊಂದ ಘಟನೆ ನಡೆದಿದೆ. ಕೊಂದ ಬಳಿಕ ತನ್ನ ಸಹದ್ಯೋಗಿಯೊಬ್ಬರಿಗೆ `ನಾನು ನಾಳೆ ಕೋರ್ಟ್‍ಗೆ ಬರುವುದಿಲ್ಲ, ಕಸ್ಟಡಿಯಲ್ಲಿರುತ್ತೇನೆ’ ಎಂದು ಸಂದೇಶ ಕಳುಹಿಸಿದ್ದಾನೆ.
ನ್ಯಾಯಾಧೀಶ ಜೆಫ್ರಿ ಫರ್ಗುಸನ್ (72) ಎಂಬಾತ ಪತ್ನಿಯನ್ನು ಕೊಲೆಗೈದ ಆರೋಪಿ. ಆತನ ಮನೆಯಲ್ಲಿ ಪರವಾನಿಗೆ ಹೊಂದಿದ್ದ ಸುಮಾರು 47 ಬಂದೂಕುಗಳು ಮತ್ತು 26,000 ಸಜೀವ ಮದ್ದುಗುಂಡುಗಳು ಪತ್ತೆಯಾಗಿವೆ ಎನ್ನಲಾಗಿದೆ.
ಪೊಲೀಸರು ತೆರಳಿದ್ದಾಗ ಎದೆಗೆ ಗುಂಡೇಟು ಬಿದ್ದು ಆತನ ಪತ್ನಿ ಮೃತಪಟ್ಟಿದ್ದಳು. ಈ ವೇಳೆ ಆತ ವಿಪರೀತವಾಗಿ ಕುಡಿದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಲಾಸ್ ಏಂಜಲೀಸ್‍ನ ನ್ಯಾಯಾಲಯವು ವಿಚಾರಣೆ ನಡೆಸಿದೆ. ಆರೋಪಿ ಕೊಲೆ ಮಾಡಿರುವುದನ್ನು ನಿರಾಕರಿಸಿದ್ದಾನೆ. ಆತನ ವಕೀಲ ಇದು ಆಕಸ್ಮಿಕ ಘಟನೆ. ಉದ್ದೇಶಿತ ಕೊಲೆ ಅಲ್ಲ ಎಂದು ತಿಳಿಸಿದ್ದಾರೆ.
ಆರೋಪಿ ಫರ್ಗುಸನ್‍ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಅಲ್ಲದೇ ಕುಡಿಯದಂತೆ ನ್ಯಾಯಾಲಯ ಆದೇಶಿಸಿದೆ. ಅಕ್ಟೋಬರ್ 30 ರಂದು ಮತ್ತೆ ನ್ಯಾಯಾಲಯ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂಬ ಮಾಹಿತಿಯೂ ಇದೆ.
Rishi Sunak: ‘ರಾಮ್ ಕಥಾ’ ನನ್ನ ಹಿಂದೂ ನಂಬಿಕೆಯು ನನಗೆ ಪ್ರಧಾನ ಮಂತ್ರಿಯಾಗಿ ಮಾರ್ಗದರ್ಶನ ನೀಡುತ್ತದೆ..!
Anwarul Haq Kakar : ಅನ್ವರುಲ್ ಹಕ್ ಕಾಕರ್ ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ
Donald Trump: ಜಾರ್ಜಿಯಾದಲ್ಲಿ ಟ್ರಂಪ್ ದೋಷಾರೋಪಣೆಯಿಂದ ಪ್ರಮುಖ ಟೇಕ್ಅವೇಗಳು