Wednesday, July 2, 2025

Latest Posts

ಜುಲೈ 17, 2020ರ ರಾಶಿ ಭವಿಷ್ಯ

- Advertisement -

ಮೇಷ: ಆರ್ಥಿಕ ಕೊರತೆಯ ಬಗ್ಗೆ ಹೆಚ್ಚಿನ ಗಮನ ಹರಿಸಿರಿ.ಕೆಲಸ ಕಾರ್ಯಗಳಲ್ಲಿ ವಿಘ್ನಗಳು ತೋರಿ ಬರುವುದರಿಂದ, ಯಾವುದೇ ಕಾರ್ಯಗಳನ್ನ ಯೋಚಿಸಿ, ಪ್ರಾರಂಭಿಸಿ. ವೃತ್ತಿಯಲ್ಲಿ ಸ್ವಂತ ಪ್ರಯತ್ನ ಅಗತ್ಯವಿದೆ.

ವೃಷಭ: ನಿಮ್ಮ ಬದುಕಿನಲ್ಲಿ ಹೊಸ ಹೆಜ್ಜೆ ಇಡಲು ಇದು ಉತ್ತಮ ಕಾಲ. ನೆರೆಹೊರೆಯವರೊಡನೆ ಜಾಗೃತೆ ವಹಿಸಿರಿ. ವ್ಯಾಪಾರ ವ್ಯವಹಾರಗಳು ಯಶಸ್ಸನ್ನು ತಂದುಕೊಡಲಿದೆ. ಆರೋಗ್ಯದ ಬಗ್ಗೆ ಸಮಸ್ಯೆಗಳು ಕಾಣದು.

ಮಿಥುನ: ಉದ್ಯೋಗ ವ್ಯವಹಾರದಲ್ಲಿ ಪ್ರಗತಿ ಹಂತ ಹಂತವಾಗಿ ಕುಂಠಿತಗೊಳ್ಳಬಹುದು. ಸಣ್ಣ ಪುಟ್ಟ ವಿಚಾರದಲ್ಲಿ ಸಮಸ್ಯೆಗಳು ಕಂಡುಬಂದಾವು. ಆಪ್ತರೊಂದಿಗೆ ಜಗಳಕ್ಕೆ ಕಾರಣರಾಗದಿರಿ. ಸಂಯಮದಿಂದಿರುವುದು.

ಕರ್ಕಾಟಕ: ಸಾಂಸಾರಿಕವಾಗಿ ಪತ್ನಿಯೊಂದಿಗೆ ಹೊಂದಾಣಿಕೆ ಇರಲಿ. ಹಿರಿಯರ ಸೂಕ್ತ ಸಲಹೆಗಳು ನಿಮ್ಮ ಮುನ್ನಡೆಗೆ ಕಾರಣವಾಗಲಿದೆ. ಕಾರ್ಯರಂಗದಲ್ಲಿ ಮೇಲಾಧಿಕಾರಿಯೊಂದಿಗೆ ಭಿನ್ನಾಭಿಪ್ರಾಯ ತಂದೀತು. ಮೌನವೇ ಲೇಸು.

ಸಿಂಹ: ಆಪ್ತರೊಂದಿಗೆ ಆತ್ಮೀಯ ಮಾತುಕತೆ. ಅನಿರೀಕ್ಷಿತವಾಗಿ ಧನಲಾಭ ತೋರಿಬರಲಿದೆ. ಕುಟುಂಬದಲ್ಲಿ ಹಿರಿಯರ ಆರೋಗ್ಯ ಸುಧಾರಿಸಲಿದೆ. ವಿದ್ಯಾರ್ಥಿಗಳು ಯಶಸ್ಸನ್ನು ಸಂಪಾದಿಸಲಿದ್ದಾರೆ ಮುನ್ನಡೆಯಿರಿ.

ಕನ್ಯಾ: ಶುಭ ದಿನವಲ್ಲ. ವೃತ್ತಿರಂಗದಲ್ಲಿ ಪ್ರಮಾದ ಕಂಡುಬಂದೀತು. ಆರ್ಥಿಕವಾಗಿ ಏರಿಳಿತವನ್ನು ಅನುಭವಿಸಲಿದ್ದೀರಿ. ವಿದ್ಯಾರ್ಥಿಗಳು ಉದಾಸೀನತೆಯಿಂದ ಹಿನ್ನಡೆ ಹೊಂದಲಿದ್ದಾರೆ. ಆರೋಗ್ಯದಲ್ಲಿ ಹೆಚ್ಚಿನ ಜಾಗೃತೆ ಇರಲಿ.

ತುಲಾ: ಹಿರಿಯರ ಆಹಾರ ಔಷಧಿಯ ಬಗ್ಗೆ ಎಚ್ಚರವಹಿಸಿರಿ. ವಾದ ವಿವಾದಗಳಿಂದ ದೂರವಿರಿ. ಆರ್ಥಿಕವಾಗಿ ಹೆಚ್ಚಿನ ಸಮಸ್ಯೆ ಇರದು. ಶುಭಮಂಗಳ ಕಾರ್ಯದಲ್ಲಿ ಸಕಾಲ. ದೂರ ಸಂಚಾರದಲ್ಲಿ ಜಾಗೃತೆ.

ವೃಶ್ಚಿಕ: ಎಲ್ಲಾ ವಿಚಾರದಲ್ಲಿ ಸವಾಲುಗಳು ಕಂಡುಬರಲಿದೆ. ಕೆಲಸದಲ್ಲಿ ತಪ್ಪುಗಳು ತೋರಿಬಂದಿತು. ಶಾಂತಚಿತ್ತರಾಗಿ ವ್ಯವಹರಿಸುವುದು ಉತ್ತಮ. ಖಾಸಗೀಯ ವಲಯದಲ್ಲಿ ನೀವು ನಿರೀಕ್ಷೆ ಮಾಡದ ಬದಲಾವಣೆಯಾಗಲಿದೆ.

ಧನು: ಕೆಲವರು ನಿಮ್ಮ ಶಾಂತಿ ಕದಡುವ ವರ್ತನೆ ತೋರಲಿದ್ದಾರೆ. ಅದನ್ನು ನಿರ್ಲಕ್ಷಿಸುವುದೇ ಉತ್ತಮ. ಸಣ್ಣ ಸಣ್ಣ ವಿಚಾರದಲ್ಲಿ ಜಗಳವನ್ನೂ ಕಾಣಬಹುದು. ಆರ್ಥಿಕವಾಗಿ ಅತೀ ಜಾಗೃತೆ ಮಾಡಿರಿ.

ಮಕರ: ಆರ್ಥಿಕ ಕೊರತೆಯಿಂದ ಆಗಾಗ ಸಮಸ್ಯೆಗಳು ತೋರಿಬಂದಾವು. ಆದರೆ ನಿಮ್ಮ ಬದುಕಿನಲ್ಲಿ ಹೊಸ ಹೆಜ್ಜೆ ಇಡಲು ಇದು ಉತ್ತಮ ಸಮಯ. ಆರೋಗ್ಯ ಸಮಸ್ಯೆ ಆಗಾಗ ಕಂಡುಬಂದು ಬೇಸರವಾದೀತು.

ಕುಂಭ: ಆರ್ಥಿಕವಾಗಿ ಪ್ರಗತಿ ಉತ್ತಮ. ವೃತ್ತಿರಂಗದಲ್ಲಿ ತಾಳ್ಮೆ ಸಮಾಧಾನದಿಂದ ವರ್ತಿಸಬೇಕು. ಆಪ್ತರ ಸಂಗದಲ್ಲಿ ನೆಮ್ಮದಿ ಕಾಣುವಿರಿ. ಸಂಗಾತಿಯ ಜೊತೆ ಭಿನ್ನಾಭಿಪ್ರಾಯ ಕಂಡುಬರಲಿದೆ ಜಾಗೃತೆ.

ಮೀನ: ಹಿರಿಯರ ಆಹಾರದ ಬಗ್ಗೆ ಜಾಗೃತೆ ವಹಿಸಿರಿ. ಅನಾವಶ್ಯಕ ಚಿಂತೆಗಳು ನಿಮ್ಮ ಪ್ರಗತಿಗೆ ಅಡ್ಡಿಯಾದೀತು. ಆದರೂ ನೀವು ನಿರೀಕ್ಷಿಸಿದ ಬದಲಾವಣೆ ಕಂಡುಬರಲಿದೆ. ಅನಿರೀಕ್ಷಿತ ಧನಾಗಮನವಿದೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.

- Advertisement -

Latest Posts

Don't Miss