Zodiac:
ಜ್ಯೋತಿಷ್ಯಶಾಸ್ತ್ರದಲ್ಲಿ ಗುರು ಗ್ರಹವನ್ನು ಬಹಳ ಮುಖ್ಯವಾದ ಗ್ರಹ ಎಂದು ಹೇಳಲಾಗಿದೆ .ಗುರುವು ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದರೆ ಅವರ ಜೀವನದಲ್ಲಿ ಹಣ ,ಯಶಸ್ಸು, ಕೀರ್ತಿಯನ್ನು ಗಳಿಸಬಹುದು ಎಂಬ ನಂಬಿಕೆ ಇದೆ. ಹಾಗೂ ಗಜಕೇಸರಿ ಯೋಗದಿಂದ ವ್ಯಕ್ತಿಯು ಜೀವನದಲ್ಲಿ ಅಪಾರ ಸಂಪತ್ತು, ಪ್ರತಿಷ್ಠೆಯನ್ನು ಗಳಿಸುತ್ತಾನೆ ,ರಾಜನಂತೆ ಜೀವನ ನಡೆಸುತ್ತಾನೆ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯ ಜಾತಕದಲ್ಲಿ ರೂಪುಗೊಂಡ ಯೋಗಗಳಲ್ಲದೆ, ಗ್ರಹಗಳ ಸಂಕ್ರಮಣದಿಂದ ರೂಪುಗೊಂಡ ಶುಭ ಮತ್ತು ಅಶುಭ ಯೋಗಗಳನ್ನು ಸಹ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಗ್ರಹಗಳ ಸಂಕ್ರಮಣ ಮತ್ತು ಗ್ರಹಗಳ ಸಂಯೋಜನೆಯಿಂದ ರೂಪುಗೊಂಡ ಯೋಗಗಳು ಎಲ್ಲಾ 12ರಾಶಿಚಕ್ರ ಚಿಹ್ನೆಗಳ ಜನರ ಜೀವನದ ಮೇಲೆ ದೊಡ್ಡ ಪ್ರಭಾವವನ್ನು ಬೀರುತ್ತವೆ. ಅಂತಹ ಅತ್ಯಂತ ಮಂಗಳಕರವಾದ ಯೋಗವೆಂದರೆ ಗಜಕೇಸರಿ ಯೋಗ. ಯಾರ ಜಾತಕದಲ್ಲಿ ಗಜಕೇಸರಿ ಯೋಗವು ರೂಪುಗೊಳ್ಳುತ್ತದೆಯೋ ಅವರು ಜೀವನದಲ್ಲಿ ಸಂಪತ್ತು, ಸ್ಥಾನ ಮತ್ತು ಪ್ರತಿಷ್ಠೆಯನ್ನು ಪಡೆಯುತ್ತಾರೆ. ಮತ್ತು ರಾಜನಂತೆ ಜೀವನ ನಡೆಸುತ್ತಾನೆ ಎಂದು ಹೇಳಲಾಗುತ್ತದೆ.
ನವೆಂಬರ್ 24 ರಂದು ಗುರು ಗ್ರಹದ ನೇರ ನಡೆ ಆರಂಭವಾಗಲಿದೆ. ಗುರುವು ಗಜಕೇಸರಿ ಯೋಗವನ್ನು ರೂಪಿಸಲಿದ್ದಾನೆ. ಬೃಹಸ್ಪತಿ ನೇರ ಸಂಚಾರದಿಂದ ರೂಪುಗೊಳ್ಳಲಿರುವ ಗಜಕೇಸರಿ ಯೋಗವು 3ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಆದರೆ, ಈ ಗಜಕೇಸರಿ ಯೋಗವು ಮೂರು ರಾಶಿಯ ಜನರಿಗೆ ಅತ್ಯಂತ ಮಂಗಳಕರ ಎಂದು ಹೇಳಲಾಗಿದೆ. ಗಜಕೇಸರಿ ಯೋಗದ ಪರಿಣಾಮದಿಂದ ಈ ರಾಶಿಯವರು ಜೀವನದಲ್ಲಿ ಅಪಾರ ಹಣ, ಯಶಸ್ಸು, ಕೀರ್ತಿಯನ್ನು ಗಳಿಸುತ್ತಾರೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ.
ಮೇಷ ರಾಶಿ: ಗುರುವಿನ ನೇರ ಸಂಚಾರದಿಂದ ರೂಪುಗೊಳ್ಳುತ್ತಿರುವ ಗಜಕೇಸರಿ ಯೋಗದಿಂದ ಮೇಷ ರಾಶಿಯವರಿಗೆ ಲಾಭವಾಗಲಿದೆ. ಅಲ್ಲದೆ, ನೀವು ಅನಗತ್ಯ ಖರ್ಚುಗಳಿಂದ ಪರಿಹಾರವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ಬಹಳಷ್ಟು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ಹೊಸ ವ್ಯಾಪಾರ ಆರಂಭಿಸಬಹುದು. ಉದ್ಯೋಗಸ್ಥರು ಹೊಸ ಜವಾಬ್ದಾರಿಗಳನ್ನು ಪಡೆಯಬಹುದು.
ತುಲಾ ರಾಶಿ: ಮಾರ್ಗಿ ಗುರುವಿನ ಕಾರಣದಿಂದ ಗಜಕೇಸರಿ ಯೋಗವು ರೂಪುಗೊಳ್ಳುವುದರಿಂದ ತುಲಾ ರಾಶಿಯ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ದೀರ್ಘಕಾಲದ ಕಾಯಿಲೆಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ವೃತ್ತಿ ಜೀವನದಲ್ಲಿ ಲಾಭವಾಗಲಿದೆ. ನಿಮ್ಮ ಕೆಲಸವನ್ನು ಪ್ರಶಂಸಿಸಬಹುದು. ನೀವು ಹೊಸ ಉದ್ಯೋಗ ಆಫರ್ ಅನ್ನು ಕೂಡ ಪಡೆಯಬಹುದು.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಮಾರ್ಗಿ ಗುರುವಿನ ಕಾರಣದಿಂದ ನಿರ್ಮಾಣವಾಗಲಿರುವ ಗಜಕೇಸರಿ ಯೋಗವು ಬಹಳಷ್ಟು ಲಾಭವನ್ನು ನೀಡುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭವಾಗಲಿದೆ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಮನ್ನಣೆ ದೊರೆಯಲಿದ್ದು, ಪ್ರಗತಿ ಸಾಧಿಸಬಹುದು. ಇಷ್ಟು ದಿನ ಬೇರೆಡೆ ಸಿಲುಕಿರುವ ಹಣ ಈಗ ನಿಮ್ಮ ಕೈ ಸೇರಲಿದೆ. ಆರ್ಥಿಕ ಹೊಸ ಮೂಲಗಳು ಸೃಷ್ಟಿಯಾಗಲಿದ್ದು, ಆದಾಯ ಹೆಚ್ಚಾಗಬಹುದು. ಇದರಿಂದ ಹಣಕಾಸಿನ ಪರಿಸ್ಥಿತಿಯು ಬಲಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಸಮಯ. ಪರೀಕ್ಷೆ-ಸಂದರ್ಶನ, ಸ್ಪರ್ಧೆಗಳಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ಒಟ್ಟಾರೆಯಾಗಿ ಈ ಸಮಯವು ವೃಶ್ಚಿಕ ರಾಶಿಯವರಿಗೆ ಸುವರ್ಣ ಸಮಯ ಎಂದು ಸಾಬೀತುಪಡಿಸಬಹುದು.
eat