ಸೆಪ್ಟಂಬರ್ ಕ್ರಾಂತಿಗೂ ಮುನ್ನವೇ ಕಾಂಗ್ರೆಸ್ಸಿನ ಫಸ್ಟ್ ವಿಕೆಟ್ ಔಟ್ ಆಗಿದೆ. ಸಚಿವ ಸ್ಥಾನಕ್ಕೆ ಕೆ.ಎನ್. ರಾಜಣ್ಣ ರಾಜೀನಾಮೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ನೇರವಾಗಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ರಾಜಣ್ಣ ರಾಜೀನಾಮೆ ವಿಚಾರದಲ್ಲಿ, ಒಳಗಿನ ಲೆಕ್ಕಾಚಾರಗಳು ಬೇರೆಯದ್ದೇ ಇರುತ್ತೆ. ರಾಜಣ್ಣ ಅವರ ಹೇಳಿಕೆಗಳೂ ಯಾವಾಗಲೂ, ಸಿಎಂ ಸುತ್ತಮುತ್ತಲೇ ಇರ್ತಿತ್ತು. ಸಿದ್ದರಾಮಯ್ಯಗೆ ಬೆಂಬಲ ಕೊಡುವ, ಶಕ್ತಿ ತುಂಬ ಕೆಲಸ ಮಾಡ್ತಿದೆ. ಸಿಎಂ ಆಪ್ತ ವಲಯದಲ್ಲಿ ನಡೆಯುವಂತಹ ವಿಚಾರಗಳ ಬಗ್ಗೆಯೇ ಮಾತಾಡ್ತಿದ್ರು. ಅವರ ಮಾತುಗಳು ನೇರಾ ನೇರವಾಗೇ ಇರುತ್ತಿದ್ವು. ಯಾರೂ ಏನೂ ಹೇಳೋದಕ್ಕೆ ಸಾಧ್ಯವಿಲ್ಲವೋ, ಅಂಥಾ ವಿಚಾರಗಳನ್ನ ಬಹಿರಂಗವಾಗೇ ಹೇಳಿಕೊಳ್ತಿದ್ರು.
ಬಣ ಕಚ್ಚಾಟದ ಸಂದರ್ಭದಲ್ಲೇ ಯಾರಾದರೂ ಒಬ್ಬರ ಕೈ ಮೇಲಾಗುತ್ತದೆ. ಅವೆಲ್ಲವೂ ಸನ್ನಿವೇಶಗಳ ಮೇಲೆ ನಿರ್ಧಾರವಾಗಿರುತ್ತವೆ. ಇದೆಲ್ಲವೂ ಅತಿಯಾದಾಗ ಇಂಥದ್ದೊಂದು ತೀರ್ಮಾನಕ್ಕೆ ಕಾರಣವಾಗಿರುತ್ತದೆ. ರಾಜಣ್ಣ ರಾಜೀನಾಮೆಗೂ ಈ ರೀತಿಯ ನಡವಳಿಕೆಗಳಿಗೆ ಕಾರಣವಾಗಿರುತ್ತದೆ.
ಈ ಬಾರಿ ರಾಜಣ್ಣ ಹೇಳಿಕೆಗಳು, ರಾಹುಲ್ ಗಾಂಧಿ ನಿಲುವಿಗೆ ಸಂಪೂರ್ಣವಾಗಿ ವಿರುದ್ಧವಾಗಿದ್ದವು. ಇದನ್ನು ಸಹಿಸಿಕೊಳ್ಳಲು ಹೈಕಮಾಂಡ್ ಸಿದ್ಧವಾಗಿಲ್ಲ. ಈ ಹಿಂದೆ ಹಲವು ಬಾರಿ ಪಕ್ಷದ ಬಗ್ಗೆಯೇ ಹೇಳಿಕೆ ಕೊಡ್ತಿದ್ರು. ಆದರೆ, ಉಚ್ಛಾಟನೆ ಅಥವಾ ರಾಜೀನಾಮೆವರೆಗೂ ತಲುಪಿರಲಿಲ್ಲ.
ಸೆಪ್ಟೆಂಬರ್ ಕ್ರಾಂತಿ ವಿಚಾರ, ಅಧಿಕಾರಿಗಳ ಜೊತೆ ಸುರ್ಜೇವಾಲ ಮೀಟಿಂಗ್ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ರು. ಮಾಧ್ಯಮಗಳ ಎದುರು ನೇರವಾಗಿ ಕಿಡಿಕಾರಿದ್ರು. ಆದ್ರೀಗ ರಾಹುಲ್ ಗಾಂಧಿ ವಿಚಾರದಲ್ಲಿ ಬಹಿರಂಗ ಹೇಳಿಕೆಗಳಿಗೆ ಹೈಕಮಾಂಡ್ ಕೆಂಡಾಮಂಡಲವಾಗಿದ್ದು, ಕಠಿಣ ನಿರ್ಧಾರ ಕೈಗೊಂಡಿದೆ.
ಇನ್ನು, ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯರನ್ನ ರಾಜಣ್ಣ ಭೇಟಿಯಾಗಿದ್ದಾರೆ. ಇದಕ್ಕೂ ಮುನ್ನ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಅಧಿಕಾರಕ್ಕೆ ಅಂಟಿಕೊಳ್ಳುವವನು ಅಲ್ಲ. ಯಾವುದೇ ಪರಿಸ್ಥಿತಿ ಬಂದ್ರೂ ಅದಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುತ್ತೇನೆ. ಯಾವ ವಿಚಾರಕ್ಕೆ ಹೈಕಮಾಂಡ್ ಅಪ್‌ಸೆಟ್ ಆಗಿದೆಯೋ ನನಗೆ ಗೊತ್ತಿಲ್ಲ. ಅವರು ಹೇಳಿದ ನಂತರ ನಾನು ಹೇಳುತ್ತೇನೆ ಎಂದಷ್ಟೇ ರಾಜಣ್ಣ ಹೇಳಿದ್ರು.

