Banglore:
ಕೆಪಿಸಿಸಿ ವತಿಯಿಂದ ಸ್ವಾತಂತ್ರೋತ್ಸವ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು,ಬೈಯ್ಯಪ್ಪನಹಳ್ಳಿ,ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣಕ್ಕೆ ಜನಸಾಗರ ಹರಿದು ಬರುತ್ತಿದೆ. ಕಾರ್ಯಕರ್ತರನ್ನು ನಿಲ್ದಾಣದೊಳಕ್ಕೆ ಕೈ ಮುಖಂಡರು ಸ್ವಾಗತಿಸಿ ಬರಮಾಡಿಕೊಳ್ಳುತ್ತಿದ್ದಾರೆ. ಶ್ರೀನಿವಾಸಪುರ ಶಾಸಕ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದಲ್ಲಿ ಸಾವಿರಾರು ಜನ ಜಮಾಯಿಸಿದ್ದಾರೆ. ಶ್ರೀನಿವಾಸಪುರ, ಚಿಂತಾಮಣಿ, ಕೋಲಾರ, ಬಂಗಾರ ಪೇಟೆ, ಕೆ.ಜಿ.ಎಫ್, ಮಾಲೂರು ಜನರು ಆಗಮಿಸುತ್ತಿದ್ದಾರೆ.
ಕೆಪಿಸಿಸಿ ವತಿಯಿಂದ ನಡೆಯುವ ಈ ಸ್ವಾತಂತ್ರ್ಯ ನಡಿಗೆ ಸಂಗೊಳ್ಳಿ ರಾಯ ವೃತ್ತದಿಂದ ಪ್ರಾರಂಭವಾಗಲಿದೆ. 6 ಗಂಟೆ ವರೆಗೆ ಕಾರ್ಯಕ್ರಮ ಈ ಯಾತ್ರೆ ಜರಗಲಿದ್ದು, ದೇಶ ಭಕ್ತಿಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ. ಮೈಸೂರು ಕೋಲಾರ ಬೇರೆ ಪ್ರದೇಶಗಳಿಂದ ಜನರು ಆಗಮಿಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜೇಗೌಡ ಸೇರಿ ಅನೇಕ ಕಾಂಗ್ರೆಸ್ ನಾಯಕರು ಪಾಲ್ಗೊಂಡಂತಹ ಕಾರ್ಯಕ್ರಮ ಇದಾಗಿದೆ.