ಕಾವ್ಯ ಶಾ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ ಹಾಗೂ ನಿರೂಪಕಿ. ಈಗಾಗಲೇ ಕನ್ನಡ ಕಿರುತೆರೆಯ ಕೆಲ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ಅದಷ್ಟೇ ಅಲ್ಲದೆ ತಮಿಳು ಕಿರುತೆರೆಯಲ್ಲಿಯೂ ಕೂಡ ನಟಿಸಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ಕಾವ್ಯ `ಮುಕುಂದ ಮುರಾರಿ’, `ಲೌಡ್ ಸ್ಪೀಕರ್’ ಮುಂತಾದ ಕನ್ನಡ ಚಿತ್ರಗಳಲ್ಲದೆ ತಮಿಳು ಚಿತ್ರಗಳಲ್ಲಿಯೂ ಕೂಡ ನಟಿಸಿದ್ದಾರೆ. ಯಶ್ ಅಭಿನಯದ ‘ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ’ ಸಿನಿಮಾದಲ್ಲೂ ಕೂಡ ನಟಿಸಿ ಸೈ ಅನಿಸಿಕೊಂಡಿದ್ದಾರೆ.
ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದರೆ, ಇಷ್ಟೋತ್ತಿಗೆ ಕಾವ್ಯಾ ಶಾ ಅವರ ವಿವಾಹ ಮಹೋತ್ಸವ ನಡೆಯಬೇಕಿತ್ತು. ಆದರೆ ಮದುವೆ ನಡೆಯುವ ಮುನ್ನವೇ ವರುಣ್ ಕುಮಾರ್ ಗೌಡ ಅವರ ತಂದೆ ನಿಧನರಾದ ಕಾರಣ ಮದುವೆ ನಿಂತು ಹೋಗಿತ್ತು.
ಇನ್ನು ವರುಣ್ ಗೌಡ ಜೀ ಕನ್ನಡದ ಕೆಲ ಧಾರಾವಾಹಿಗಳಿಗೆ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಹಾಗೆ ಜೀ ಮುಖ್ಯಸ್ಥ ರಾಘವೇಂದ್ರ ಹುನುಸೂರು ಅವರ ಜೊತೆ ಕೆಲಸ ಮಾಡಿದ್ದಾರೆ. ಜೊತೆಗೆ ಹಾಸ್ಟೆಲ್ ಹುಡುಗರು ಎಂಬ ಸಿನಿಮಾಗೆ ಹಣ ಹೂಡಿ ನಿರ್ಮಾಪಕರಾಗಿಯೂ ಕೂಡ ಕೆಲಸ ಮಾಡಿದ್ದಾರೆ.
ನಟಿ ಕಾವ್ಯ ಶಾ ಹಾಗೂ ವರುಣ್ ಕುಮಾರ್ ಗೌಡ ಇಬ್ಬರು ಅನ್ನೊಂದು ವರ್ಷದಿಂದ ಪ್ರೀತಿಸುತ್ತಿದ್ದಾರೆ. ಇದೀಗ ಅವರಿಬ್ಬರ ಅವರ ಅನ್ನೊಂದನೇ ಪ್ರೀತಿಯ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ