Kalaburgi News:
ಕರ್ನಾಟಕ ಅಮೃತ ಮಹೋತ್ಸವ ಹಿನ್ನೆಲೆ ಧ್ವಜಾರೋಹಣ ಕಾರ್ಯಕ್ರಮದ ಅಂಗವಾಗಿ ಸಿಎಂ ಬೊಮ್ಮಾಯಿ ಕಲಬುರುಗಿಗೆ ಆಗಮಿಸಿದ್ದರು. ಈ ಸಂದರ್ಭ ಎಸ್ಟಿ ಹೋರಾಟ ಸಮಿತಿಯಿಂದ ಕಪ್ಪುಬಾವುಟ ಪ್ರದರ್ಶನ ಮಾಡಲಾಯಿತು.
ಕಲಬುರಗಿ ನಗರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿದ್ದಾರೆ. ಆದ್ರೆ ಸಿಎಂ ಆಗಮನದ ವೇಳೆ ಎಸ್ ಟಿ ಹೋರಾಟ ಸಮಿತಿ ಸದಸ್ಯರು ಕಪ್ಪುಬಾವುಟ ಪ್ರದರ್ಶನ ಮಾಡಿದ್ದಾರೆ. ಸರದಾರ್ ಪಟೇಲರ್ ಮೂರ್ತಿಗೆ ಮಾಲರ್ಪಣೆ ಮಾಡಿ ಗೌರವ ಸಲ್ಲಿಸಿ ಕೆಳಗೆ ಇಳಿಯುವ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಧ್ಯೆಯೂ ಒಳ ನುಸುಳಿದ ಪ್ರತಿಭಟನಾಕಾರರು ಕಪ್ಪು ಪಟ್ಟಿ ಪ್ರದರ್ಶಿಸಿ ಮುಖ್ಯಮಂತ್ರಿಗಳಿಗೆ ದಿಕ್ಕಾರ ಕೂಗಿದರು. ಜೇಬಿನಲ್ಲಿ ಕಪ್ಪು ಪಟ್ಟಿ ಇರಿಸಿಕೊಂಡು ಆಗಮಿಸಿ ಪ್ರತಿಭಟನಾಕಾರರು ಸರ‍್ವಜನಿಕರ ಮಧ್ಯೆದಲ್ಲಿಯೇ ನಿಂತುಕೊಂಡಿದ್ದರು. ಮುಖ್ಯಮಂತ್ರಿ ಅವರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕೆಳಗೆ ಇಳಿಯುವ ಸಂದರ್ಭದಲ್ಲಿ ಒಬ್ಬರಾಗಿ ಕಪ್ಪು ಪಟ್ಟಿ ಪ್ರದರ್ಶಿಸಲು ಶುರುಮಾಡಿದರು. ತಕ್ಷಣವೇ ಕಾರ್ಯ ಪ್ರವೃತರಾದ ಪೊಲೀಸರು ಸಮಾರು 25ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು ಎಂದು ತಿಳಿದು ಬಂದಿದೆ.
ಮಂಡ್ಯ: ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ ಸುಮಲತಾ ಅಂಬರೀಷ್
ಭಿಕ್ಷಾಟನೆ ತಡೆಗೆ ಸೂಕ್ತಕ್ರಮ ಕೈಗೊಳ್ಳಲಾಗುವುದು: ಕೋಟಾ ಶ್ರೀನಿವಾಸ ಪೂಜಾರಿ

