Sunday, December 22, 2024

Latest Posts

ಜಮೀನಿನಲ್ಲಿ ಮಲಗಿದ್ದ ಮಹಿಳೆ ಮೇಲೆ ಹೆಡೆಬಿಚ್ಚಿ ನಿಂತ ನಾಗರಾಜ…!

- Advertisement -

Kalaburugi News:

ವಿಶ್ರಾಂತಿ ಪಡೆಯಲೆಂದು ಜಮೀನಿನಲ್ಲಿ ಮಲಗಿದ್ದ ಮಹಿಳೆ ಮೇಲೆ ನಾಗರಹಾವೊಂದು ಹೆಡೆಬಿಚ್ಚಿ ನಿಂತ ಘಟನೆಯೊಂದು ಕಲಬುರುಗಿಯಲ್ಲಿ ನಡೆದಿದೆ.ಕಲಬುರುಗಿಯ ಅಫಜಲಪುರ ತಾಲೂಕಿನ ಮಲ್ಲಾಬಾದ್ ಗ್ರಾಮದಲ್ಲಿ ನಡೆದಿದೆ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಭಯಬೀತಿಗೊಂಡಿದ್ದಾರೆ. ಗ್ರಾಮದ ಭಾಗಮ್ಮ ಬಡದಾಳ್ ಎಂಬುವರು ತಮ್ಮ ಜಮೀನಿನಲ್ಲಿ ಮಲಗಿದ್ದಾಗ ಮೈಮೇಲೆ ಬಂದ ನಾಗರಹಾವು ಹೆಡೆಎತ್ತಿ ನಿಂತುಕೊಂಡಿದೆ. ಈ ವೇಳೆ ಪ್ರಾಣ ಭೀತಿ ಅನುಭವಿಸಿದ ಮಹಿಳೆ ಕೈ ಮುಗಿದು ದೇವರಲ್ಲಿ ಬೇಡಿಕೊಂಡಿದ್ದಾರೆ.

ಭಾಗಮ್ಮ ಅವರ ಜಮೀನಿನಲ್ಲಿ ವಿಶ್ರಾಂತಿ ಪಡೆಯಲೆಂದೇ ಒಂದು ಮಲಗುವ ಮಂಚ ಇದೆ. ಇದರಲ್ಲಿ ಮಲಗಿಕೊಂಡಿದ್ದ ಭಾಗಮನ್ನ ಮೇಲೆ ನಾಗರಹಾವೊಂದು ಹತ್ತಿ ಹೆಡೆಬಿಚ್ಚಿ ನಿಂತುಕೊಂಡಿದೆ. ಇದನ್ನು ತಿಳಿದ ಭಾಗಮ್ಮ ಯಾವುದೇ ಆತುರದ ನಿರ್ಧಾರಗಳನ್ನು ಕೈಗೊಳ್ಳದೆ ಪ್ರಾಭ ಭಯದಿಂದಲೇ “ಕಾಪಾಡು ಶ್ರೀಶೈಲ ಮಲ್ಲಯ್ಯ” ಎಂದು ಕೈಗಳನ್ನು ಮುಗಿದು ಪ್ರಾರ್ಥಿಸಿದ್ದಾರೆ. ಇದಾಗಿ ಕೆಲಹೊತ್ತಿನ ನಂತರ ಮಹಿಳೆಗೆ ಯಾವುದೇ ತೊಂದರೆಯನ್ನು ನೀಡದೆ ನಾಗರಹಾವು ಇಳಿದು ಹೋಗಿದೆ. ನಿನ್ನೆ ಮಧ್ಯಾಹ್ನ ನಡೆದಿರೋ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ.

ಮಂಡ್ಯದಲ್ಲಿ ಮಳೆತಂದ ಅವಾಂತರ, ನೊಂದ ಮಹಿಳೆಯ ಕಣ್ಣೀರು

ವಿದ್ಯಾರ್ಥಿನಿಯರಿಗೆ ಸ್ವಾಮೀಜಿಯಿಂದ ಲೈಂಗಿಕ ಕಿರುಕುಳ: ಪ್ರಕರಣ ದಾಖಲು

ಬೆಂಗಳೂರಿನಲ್ಲಿ ಪ್ರೇಯಸಿಯಿಂದ ಪ್ರಿಯಕರನ ಕಿಡ್ನಾಪ್…?!

- Advertisement -

Latest Posts

Don't Miss