ಕಲಬುರಗಿ: ನೀವು ಈ ಸ್ಟೋರಿಯನ್ನು ಓದಿದರೆ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾಧೆಗೆ ಸಫೋಕ್ತ ಒಂದೆನಿಸದೆ ಇರದು ಯಾಕೆಂದರೆ ಕೊಲೆ ಮಾಡಿದವರಿಗೂ ಮತ್ತು ಕೊಲೆಯಾದ ವ್ಯಕ್ತಿಗೆ ಯಾವುದೇ ಸಂಭಂದವಿಲ್ಲ ಇಬ್ಬರು ಪ್ರೇಮಿಗಳು ಮನೆಯವರ ಒಪ್ಪಿಗೆ ಇಲ್ಲದೆ ಮದುವೆ ,ಮಾಡಿಕೊಂಡು ಬಂದಿದ್ದರು ನಂತರ ಹುಡುಗಿಯ ಮನೆಯವರು ಹುಡುಗಿಯನ್ನು ನೋಡಲು ಬಂದು ತಂಟೆ ತೆಗೆದಿದ್ದರು ಆದರೆ ಇಲ್ಲಿ ಹುಡುಗನ ಸಂಬಂಧಿ ಸ್ವಲ್ಪ ಏರುದನಿಯಲ್ಲಿ ಮಾತನಾಡಿದ್ದಾರೆ ಅಷ್ಷೇ ನಂತರ ಸಂಚಿನಿಂದಾಗಿ ಕೊಲೆಯಾಗಿ ಹೋದ
ಕಲಬುರಗಿ ನಗರದ ತಾರಪೈಲ್ ನಿವಾಸಿಯಾಗಿದ್ದ ವಿಕ್ರಮ್ ಲಿಂಗೇರಿ (26) ಎಂಬಾತನನ್ನು ಜುಲೈ 25 ರಂದು ಅಫಜಲಪುರ ತಾಲೂಕಿನ ಚೌಡಾಪುರ ಬಳಿ ರಸ್ತೆ ಪಕ್ಕದಲ್ಲಿ ಕೊಲೆ ಮಾಡಲಾಗಿತ್ತು.ಕಲಬುರಗಿ ನಗರದಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವಿಕ್ರಮ್ಗೆ ಮದುವೆಯಾಗಿರಲಿಲ್ಲ. ವಿಕ್ರಮ್ಗೆ ಮದುವೆ ಮಾಡಲು ತಾಯಿ ಹುಡುಗಿ ಹುಡಕುತ್ತಿದ್ದಳು. ಆದರೆ ಜೂನ್ 25 ರಂದು ಮುಂಜಾನೆ ಮನೆಯಿಂದ ವಿಕ್ರಮ್ ಹೋಗಿದ್ದನಂತೆ. ನಂತರ ತಾಯಿ ಅನೇಕ ಬಾರಿ ಕರೆ ಮಾಡಿದ್ದಾಳೆ, ಆದರೆ ಪೋನ್ ಸ್ವಿಚ್ ಆಪ್ ಆಗಿತ್ತು.
ಮಾರನೇ ದಿನ ಮುಂಜಾನೆ ಕೂಡಾ ಪೋನ್ ಮಾಡಿದ್ದಾಳೆ. ಆದರೆ ಪೋನ್ ಮತ್ತೆ ಸ್ವಿಚ್ ಆಪ್ ಅಂತ ಬಂದಿದೆ. ಎಲ್ಲಿಯಾದರು ಹೋಗಿರಬಹುದು ಅಂತ ತಾಯಿ ಸುಮ್ಮನಾಗಿದ್ದಳಂತೆ ಆದರೆ ವಿಕ್ರಮ್ ಕೊಲೆಯಾದ ವಿಚಾರ ತಿಳಿದುಬಂದಿದೆ.
ಜೂನ್ 26 ರಂದು ರಸ್ತೆ ಪಕ್ಕದಲ್ಲಿ ಶವ ನೋಡಿದ್ದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದ ಗಾಣಗಾಪುರ ಠಾಣೆಯ ಪೊಲೀಸರಿಗೆ, ಆರಂಭದಲ್ಲಿ ಕೊಲೆಯಾಗಿದ್ದ ಯಾರು ಅನ್ನೋದು ಗೊತ್ತಾಗಿರಲಿಲ್ಲ. ಪ್ರಾಥಮಿಕ ತನಿಖೆ ವೇಳೆ ಕೊಲೆಯಾಗಿದ್ದ ಯುವಕ ಕಲಬುರಗಿ ನಗರದ ವಿಕ್ರಮ್ ಎಂಬುದು ಪೊಲೀಸರಿಗೆ ತಿಳಿದುಬಂದಿದೆ.
Railway-ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ನೈರುತ್ಯ ರೈಲ್ವೆ ಜಯಶಾಲಿ