Wednesday, February 5, 2025

Latest Posts

ಕಲ್ಯಾಣಿಯಲ್ಲಿ ಮುತ್ತಿನ ಗಣಪತಿ..?!

- Advertisement -

State News:

ಗೌರಿ-ಗಣೇಶ ಹಬ್ಬದಲ್ಲಿ ಗಣಪತಿ ಕೂರಿಸುವುದು ಕಾಮನ್, ಆದರೆ ತಾವು ವಿಭಿನ್ನವಾಗಿ ಕೂರಿಸುವ ಗಣೇಶನನ್ನು ಬೆಂಗಳೂರಿಗರು ವೀಕ್ಷಿಸಬೇಕೆಂಬ ಉದ್ದೇಶದಿಂದ ಇಲ್ಲೊಂದು ಗ್ರಾಮದ ಯುವಕರ ಪಡೆ ಪ್ರತಿವರ್ಷ ಗಣಪತಿ ಹಬ್ಬ ಮುಗಿದ ನಂತರ ವಿಭಿನ್ನ ಬಗೆಯ ಅದ್ದೂರಿ ಸೆಟ್ ನಿರ್ಮಿಸಿ ಗಣಪತಿಯನ್ನು ಕೂರಿಸುತ್ತಾರೆ. ಅದರಂತೆ ಈ ಭಾರಿಯು ತಮ್ಮ ಗ್ರಾಮದಲ್ಲಿನ ಕಲ್ಯಾಣಿಯನ್ನು ಹೊಸದಾಗಿ ನವೀಕರಿಸಿ ಅದರಲ್ಲಿ ಮುತ್ತಿನ ಗಣಪತಿಯನ್ನು ಪ್ರತಿಷ್ಠಾಪಿಸಿದ್ದಾರೆ.

ಹೀಗೆ ಕರುನಾಡಿನ ಜನರ ಆರಾದ್ಯ ದೈವ ದಿವಂಗತ ಡಾ. ಪುನಿತ್ ರಾಜ್ ಕುಮಾರ್ ರವರಿಂದ ಸ್ವಾಗತಿಸಲ್ಪಡುವ ಭವ್ಯವಾದ ಮಂದಿರ, ಅದರೊಳಗೆ ಪ್ರವೇಶಿಸುತ್ತಿದ್ದಂತೆ ಕಣ್ಮನ ಸೆಳೆಯುವ ಕಲ್ಯಾಣಿ, ಕಲ್ಯಾಣಿಯ ದಡದಲ್ಲಿ ರಾಜನಂತೆ ಕೂತಿರುವ ಗಣಪತಿ ಇಂತಹ ವಿಭಿನ್ನವಾದ ಕಲ್ಯಾಣಿ ಗಣೇಶೋತ್ಸವ ಆಚರಿಸುತ್ತಿರುವ ದೃಶ್ಯಗಳು ಕಂಡುಬಂದದ್ದು ಬೆಂಗಳೂರಿನ ಕೆ.ಆರ್.ಪುರ ಕ್ಷೇತ್ರದ ಕಲ್ಕೆರೆ ಗ್ರಾಮದಲ್ಲಿ. ಅಂದಹಾಗೆ ಇಲ್ಲಿನ  ಸ್ವಾಭಿಮಾನಿ ಕನ್ನಡಿಗರ ಯುವಸೇನೆ ತಂಡ ಕಳೆದ ಒಂಬತ್ತು ವರ್ಷಗಳಿಂದ ಧರ್ಮಸ್ಥಳ, ಬೇಲೂರು-ಹಳೇಬೀಡು, ತಿರುಪತಿ, ಗೋ ಗ್ರೀನ್ ಮಾದರಿಯ ಸೆಟ್ ಗಳನ್ನು ನಿರ್ಮಿಸಿ ಹೆಸರುವಾಸಿಯಾಗಿ ಗಣಪತಿ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದು, ಈ ಭಾರಿ ವಿಶೇಷವಾಗಿ ತಮ್ಮ ಗ್ರಾಮದಲ್ಲಿನ ಕಲ್ಯಾಣಿ ಯನ್ನು ನವೀಕರಿಸಿ ಅದರಲ್ಲಿ ಮುತ್ತಿನ ಗಣಪತಿಯನ್ನು ಪ್ರತಿಷ್ಠಾಪಿಸಿ ಕಲ್ಯಾಣಿ ಗಣೇಶೋತ್ಸವವನ್ನು ಆಚರಿಸುವುದರ ಜೊತೆಗೆ ಕಲ್ಯಾಣಿಯನ್ನು ಅಭಿವೃದ್ಧಿ ಪಡಿಸಿ ಗ್ರಾಮಕ್ಕೆ ಅರ್ಪಿಸಿರುವುದು ಮತ್ತೊಂದು ವಿಶೇಷ.

ಇನ್ನು ಕಲ್ಕೆರೆ ಗ್ರಾಮದ ಸ್ವಾಭಿಮಾನಿ ಕನ್ನಡಿಗರ ಯುವ ಸೇನೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜನರು ತಾವು ವಿಭಿನ್ನ ಮಾದಿರಿಗಳಲ್ಲಿ ಪ್ರತಿಷ್ಠಾಪಿಸುವ ಗಣೇಶೋತ್ಸವವನ್ನು ಜನರು ವೀಕ್ಷಿಸಬೇಕೆಂದು ಗಣಪತಿ ಹಬ್ಬ ಮುಗಿದ ನಂತರ ಇವರು ಗಣಪತಿಯನ್ನು ಪ್ರತಿಷ್ಠಾಪಿಸುತ್ತಾರೆ. ಅದರೆಂತೆ ಸ್ವಾಭಿಮಾನಿ ಕ‌ನ್ನಡಿಗರ  ಯುವ ಸೇನೆ ಯುವಕರು ಕೂರಿಸುವ ಗಣೇಶೋತ್ಸವ ವೀಕ್ಷಿಸಲು ಕಲ್ಕೆರೆ, ಚನ್ನಸಂದ್ರ, ಹೊರಮಾವು, ರಾಮಮೂರ್ತಿನಗರ ಸೇರಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮುಂತಾದ ಪ್ರದೇಶಗಳಿಂದ ಸಾವಿರಾರು ಜನರು ಆಗಮಿಸುತ್ತಾರೆ. ಆದರೆ ಈಭಾರಿ ವಿಶೇಷ ಅಥಿತಿಯಾಗಿ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ರವರು ಸಹ ಬೇಟಿ ನೀಡಿ ಕಲ್ಯಾಣಿ ಗಣೇಶೋತ್ಸವ ವೀಕ್ಷಸಿ ಆಯೋಜಕರಾದ ಸ್ವಾಭಿಮಾನಿ ಕನ್ನಡಿಗರ ಯುವ ಸೇನೆ ಯುವಕರನ್ನು ಅಭಿನಂದಿಸಿದ್ದು ವಿಶೇಷವಾಗಿತ್ತು.

ಒಟ್ಟಾರೆ ತಾವು ಮಾಡುವ ಕಾರ್ಯದಿಂದ ಇತರರ ಮನಸ್ಸಿಗೆ ಸಂತೋಷ, ನೆಮ್ಮದಿ ಸಿಗಬೇಕೆಂಬ ಉದ್ದೇಶದಿಂದ ಕಲ್ಕೆರೆ ಗ್ರಾಮದ ಯುವಕರ ಪಡೆ 2011 ರಿಂದ ವಿಶೇಷವಾಗಿ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿದ್ದು, ಇವರ ಈ ಕಾರ್ಯ ಹೀಗೆ ಮುಂದುವರೆಯಲಿ ಎಂಬುದು ಎಲ್ಲರ ಆಶಯವಾಗಿದೆ.

‘’ಕರಕುಶಲ ಪ್ರಾತ್ಯಕ್ಷಿಕೆ ಮತ್ತು ಮಕ್ಕಳ ಚಿತ್ರಕಲಾ ಸ್ಪರ್ಧೆ’’ ಉದ್ಘಾಟಿಸಿದ ಎಸ್.ಟಿ.ಸೋಮಶೇಖರ್:

ಶ್ರೀ ಬಂಡೆ ಮಹಾ೦ಕಾಳಿ ದೇವಾಲಯದಲ್ಲಿ ನವರಾತ್ರಿ ನಾಲ್ಕನೇ ದಿನದ ಅಲಂಕಾರ…!

ಮೈಸೂರಿನ ಅರಮನೆ ಮುಂಭಾಗ ರೈತ ದಸರಾ ಉದ್ಘಾಟನೆ:

- Advertisement -

Latest Posts

Don't Miss