ರಜನಿಕಾಂತ್ ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಸಿನಿಮಾ ತಾರೆಯರಲ್ಲೊಬ್ಬರು. ಇವರು ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿಯೂ ಕೂಡ ಬಹಳಷ್ಟು ಚಿತ್ರಗಳಲ್ಲಿ ಅಭಿನಯಿಸಿ, ಖ್ಯಾತಿಯನ್ನು ಪಡೆದಿದ್ದಾರೆ. ಹಾಗೂ ಹಲವಾರು ಪ್ರಶಸ್ತಿಗಳನ್ನು ಕೂಡ ಪಡೆಕೊಂಡಿದ್ದಾರೆ.
ಜೊತೆಗೆ ಸಿನಿಮಾ ರಂಗದಲ್ಲಿ ಅನೇಕ ಜನರ ಜೊತೆ ಒಳ್ಳೆಯ ಒಡನಾಟವನ್ನು ಇಟ್ಟುಕೊಂಡಿದ್ದಾರೆ. ಇನ್ನು ತಲೈವಾ ಮತ್ತು ಕಮಲ್ ಹಾಸನ್ ಒಳ್ಳೆಯ ಗೆಳೆತನವಿದೆ. ಅದು ಇಂದಿನದ್ದಲ್ಲ 4 ದಶಕಗಳದ್ದು. ಇವರಿಬ್ಬರ ನಡುವೆ ವೈ ಮನಸ್ಸು ಇದೆ ಎಂಬ ವದಂತಿಗಳು ಕೇಳಿಬಂದರೂ ಸಹ ಅದೆಲ್ಲವೂ ಸುಳ್ಳು ಎಂಬುದನ್ನು ಆಗಾಗ ಇವರಿಬ್ಬರು ಸಾಬೀತು ಪಡಿಸುತ್ತಿದ್ದಾರೆ.
ಇದೀಗ ರಜನಿಕಾಂತ್ ನಿವಾಸಕ್ಕೆ ಕಮಲ್ ಹಾಸನ್ ಭೇಟಿ ನೀಡಿದ್ದು, ಅವರ ಮನೆಯಲ್ಲಿಯೇ ಕೆಲ ಹೊತ್ತು ಸಮಯ ಕಳೆದಿದ್ದಾರೆ. ಅವರಿಬ್ಬರು ಜೊತೆ ಇರುವ ಫೋಟೋಗಳನ್ನು ನಿರ್ದೇಶಕ ಲೋಕೇಶ್ ಕನಗರಾಜ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ‘ವಾವ್ ಇದು ಎಂಥ ಅದ್ಭುತ ಸ್ನೇಹ..ಸ್ಪೂರ್ತಿದಾಯಕವಾಗಿದೆ..’ ಎಂದು ಬರೆದುಕೊಂಡಿದ್ದಾರೆ.
ರಜನಿಕಾಂತ್ ನಿವಾಸಕ್ಕೆ ಕಮಲ್ ಭೇಟಿ ನೀಡಿದ್ದು, ಯಾಕೆ ಅಂದರೆ ಸ್ವತಃ ಕಮಲ್ ಹಾಸನ್ ಅವರೇ ನಿರ್ಮಿಸಿ ನಟಿಸಿರುವ ‘ವಿಕ್ರಮ್’ ಸಿನಿಮಾ ಇದೇ ಜೂನ್ 3 ರಂದು ತೆರೆಯ ಮೇಲೆ ಬರುತ್ತಿದೆ. ಈ ಸಿನಿಮಾವನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡ್ತಿದ್ದು, ಈ ಸಿನಿಮಾದಲ್ಲಿ ವಿಜಯ್ ಸೇತುಪತಿ, ಫಹಾದ್ ಫಾಸಿಲ್ ನಟಿಸಿದ್ದಾರೆ. ಇದರ ಜೊತೆಗೆ ವಿಶೇಷ ಅಂದರೆ ನಟ ಸೂರ್ಯ ರವರು ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹಾಗಾಗಿ ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಕಮಲ್ ಹಾಸನ್ ಬ್ಯುಸಿ ಆಗಿದ್ದು, ಈ ಬಗ್ಗೆ ತಮ್ಮ ಮಿತ್ರ ರಜನಿಕಾಂತ್ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ