www.karnatakatv.net : ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಕುಂತೂರು ಜಿಲ್ಲಾ ಪಂಚಾಯತ್ ಸದಸ್ಯ ಎಲ್.ನಾಗರಾಜು ಕಮಲ್ ಅವರಿಂದು ಚಾಮರಾಜನಗರದಲ್ಲಿ ಬಹುಜನ ಸಮಾಜ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದ್ರು.
ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಅವರ ಸಮ್ಮುಖದಲ್ಲಿ ವಿವಿಧ ಗ್ರಾಮಗಳ ತಮ್ಮ ಬಲಿಗರೊಂದಿಗೆ ಇಂದು ಕಮಲ್ ಬಿಎಸ್ಪಿಗೆ ಸೇರ್ಪಡೆಯಾದ್ರು.
ಕಮಲ್ ಗೆ ಬಿಎಸ್ಪಿ ಮಾತೃ ಪಕ್ಷವಾಗಿದ್ದು ಪ್ರಾರಂಭದಲ್ಲಿ ಅವರು ಬಿಎಸ್ಪಿಯಲ್ಲೇ ಇದ್ರು. ಹಲವು ಕಾರಣಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಕಮಲ್ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಟಿಕೆಟ್ ವಂಚಿತರಾದ ಹಿನ್ನಲೆ 2015 ರಲ್ಲಿ ಬಿಜೆಪಿಗೆ ಸೇರಿದ್ರು. ತದನಂತರ ಚುನಾವಣೆಯಲ್ಲಿ ಗೆದ್ದು ಜಿಲ್ಲಾ ಪಂಚಾಯತ್ ಸದಸ್ಯರೂ ಆಗಿದ್ರು. ಇದೀಗ ಅವರು ಮತ್ತೊಮ್ಮೆ ತವರು ಪಕ್ಷಕ್ಕೆ ಸೇರಿದ್ದಾರೆ.
ಕಮಲ್ ಬಿಎಸ್ಪಿ ಸೇರ್ಪಡೆ ಹಿನ್ನಲೆ ಪ್ರತಿಕ್ರಯಿಸಿದ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಅವರು ಜಿಲ್ಲಾ ಘಟಕ ಇಂದು ಕಮಲ್ ಅವರನ್ನು ಬಹಳಗೌರವದಿಂದ ಪಕ್ಷಕ್ಕೆ ಬರ ಮಾಡಿಕೊಂಡಿದೆ. ಬಿಎಸ್ಪಿ ಸಾಮಾಜಿಕ ಪರಿವರ್ತನಾ ಚಳುವಳಿ ಎಂಬ ನಂಬಿಕೆ ಅವರಿಗಿದೆ. ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಕಮಲ್ ಅವರನ್ನು ಬಳಸಿಕೊಳ್ಳುತ್ತೇವೆ ಅಂದ್ರು.
ಕಮಲ್ ಮಾತ್ನಾಡಿ ಹಿಂದೆ ಸುಮಾರು ಹದಿನೇಳು ವರ್ಷಗಳ ಕಾಲ ನಾನು ಬಿಎಸ್ಪಿ ಯಲ್ಲಿ ದುಡಿದಿದ್ದೆ. ಆನಂತರದ ರಾಜಕೀಯ ಬೆಳವಣಿಗೆಗಳಲ್ಲಿ. ಇದೀಗ ಮತ್ತೆ ನಾನು ನನ್ನ ಮನೆಗೆ ವಾಪಸ್ ಬರುವ ಸುಸಂದರ್ಭ ಬಂದಿದೆ. ಮುಂದೆ ನಾನು ಸಂಘಟನೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡ್ತೀನಿ ಅಂದ್ರು. ಈ ಸಂದರ್ಭದಲ್ಲಿ ಬಿಎಸ್ ಪಿ ಜಿಲ್ಲಾಧ್ಯಕ್ಷ ನಾಗಯ್ಯ, ಪ್ರ. ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ಮಹದೇವಯ್ಯ ಇನ್ನಿತರ ಮುಖಂಡರಿದ್ದರು.
ಕರ್ನಾಟಕ ಟಿವಿ ಚಾಮರಾಜನಗರ