Wednesday, October 15, 2025

Latest Posts

ತಲೈವಿ ಚಿತ್ರದ ಬಗ್ಗೆ ಕಂಗನಾ ಹೇಳಿದ್ದು ಹೀಗೆ..!

- Advertisement -

www.karnatakatv.net : ಬೆಂಗಳೂರು : ಕಂಗನಾ ರಣಾವತ್ ಅಭಿನಯದ ‘ತಲೈವಿ’ ಚಿತ್ರವು ಎಲ್ಲರ ಗಮನ ಸೆಳೆದಿದೆ. ನೆಟ್ ಫ್ಲಿಕ್ಸ್ ನಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದ್ದು, ಕಂಗನಾ ಇನ್ಸ್ಟಾಗ್ರಾಂ ನಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಹೌದು, ಬಾಲಿವುಡ್ ನಟಿ ಕಂಗನಾ ನಟಿಸಿರುವ ತಲೈವಿ  ಚಿತ್ರವು ಒಟಿಟಿಯಲ್ಲಿ ಬಿಡುಗಡೆಯಾಗಲು ಎಲ್ಲಾ ಸಿದ್ಧತೆಯು ನಡೆಯುತ್ತಲಿದೆ. ಇದರ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡ ನಟಿ ‘ಈ ಚಿತ್ರವು ಎಲ್ಲರಿಂದ ಪ್ರೀತಿಸಲ್ಪಡುವ ಚಿತ್ರವಾಗಿದ್ದು, ತಲೈವಿ ಅಂತಹ ಚಿತ್ರ ಜನರಿಗೆ ಡಾ.ಜೆ ಜಯಲಲಿತಾ ಅವರ ಕತೆ ತುಂಬಾ ಹಿಡಿಸಿದೆ. ನನ್ನ ವೃತ್ತಿ ಜೀವನದಲ್ಲಿ ಇದು ಒಂದು ಮರೆಯಲಾಗದ ಚಿತ್ರವಾಗಿದ್ದು, ಚಿತ್ರತಂಡಕ್ಕೆ ಧನ್ಯವಾದವನ್ನು ಹೇಳುತ್ತೆನೆ’ ಎಂದು ಅವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

 ಈ ಚಿತ್ರವು ಮಾಜಿ ನಟಿ ಹಾಗೂ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಜೀವನದ ಕತೆಯನ್ನು ಆಧರಿಸಿದೆ. ಈ ಚಿತ್ರದಲ್ಲಿ ಕಂಗನಾ ಜಯಲಲಿತಾ ಅವರ ಪಾತ್ರದಲ್ಲಿ ಮತ್ತು ನಟ ಅರವಿಂದ ಸ್ವಾಮಿ ಎಮ್​.ಜಿ.ರಾಮಚಂದ್ರನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಈ ಚಿತ್ರವು ಅ.10 ರಂದು ದೇಶದ ಹಲವು ಭಾಗಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದರೂ ಕೂಡ ಮುಂಬೈನಲ್ಲಿ ಬಿಡುಗಡೆಯಾಗಿರಲಿಲ್ಲ. ಪ್ರಸ್ತುತ ನೆಟ್​ಫ್ಲಿಕ್ಸ್​ನಲ್ಲಿ ತೆರೆಗೆ ಬರುತ್ತಿರುವುದರಿಂದ ಹೆಚ್ಚು ಜನರನ್ನು ತಲುಪುವ ಅವಕಾಶವಿದೆ.

ಫಿಲ್ಮಂ ಬ್ಯೂರೋ ಕರ್ನಾಟಕ ಟಿವಿ – ಬೆಂಗಳೂರು  

- Advertisement -

Latest Posts

Don't Miss