Saturday, August 9, 2025

Latest Posts

Kannada Bigg Boss Season 11: ಬಿಗ್‌ಬಾಸ್ ಬಗ್ಗೆ ಅಹಂಕಾರದ ಮಾತನಾಡಿದ ಜಗದೀಶ್..?

- Advertisement -

Kannada Bigg Boss Season 11: ಈ ಬಾರಿಯ ಕನ್ನಡ ಬಿಗ್‌ಬಾಸ್ ಸೀಸನ್ 11ನಲ್ಲಿ ಸಖತ್ ಸದ್ದು ಮಾಡುತ್ತಿರುವ ಸ್ಪರ್ಧಿ ಎಂದರೆ, ವಕೀಲ ಜಗದೀಶ್. ಜಗದೀಶ್ ತುಂಬಾ ದಿನಗಳ ಕಾಲ ಸ್ಪರ್ಧೆ ಮಾಡಿ, ಶೋಗೆ ಟಿಆರ್‌ಪಿ ಹೆಚ್ಚಿಸುವಂತೆ ಮಾಡೋದಂತೂ ಖಚಿತ ಅಂತಾ ಎಲ್ಲರಿಗೂ ಗೊತ್ತು.

ಆದರೆ ಜಗದೀಶ್ ಈಗ ಟಾಸ್ಕ್‌ಗಿಂತ ಹೆಚ್ಚಾಗಿ, ತಮ್ಮ ಅಹಂಕಾರದ ಮಾತಿನಿಂದಲೇ ಸುದ್ದಿಯಾಗುತ್ತಿದ್ದಾರೆ. ಅದರಲ್ಲೂ ವಕೀಲ ಜಗದೀಶ್ ಅಹಂಕಾರದ ಮಾತನ್ನಾಡಿರುವುದು ಪ್ರತಿಸ್ಪರ್ಥಿಗಳ ಬಗ್ಗೆ ಅಲ್ಲ. ಬದಲಾಗಿ ಬಿಗ್‌ಬಾಸ್ ಬಗ್ಗೆ. ನಾನು ಮನಸ್ಸು ಮಾಡಿದ್ರೆ, ಬಿಗ್‌ಬಾಸ್‌ನೇ ಖರೀದಿಸುವ ತಾಕತ್ತು ನನಗಿದೆ ಎಂದು ಹೇಳಿದ್ದಾರೆ.

ಅನುಷಾ ರೈ ಬಗ್ಗೆ ಮಾತನಾಡುವಾಗ ವಕೀಲ ಜಗದೀಶ್, ಎಲ್ಲರೂ ಆಟವಾಡಲು ಬಂದಿದ್ದಾರೆ. ಆದರೆ ನನಗೆ ಬಿಗ್‌ಬಾಸನ್ನೇ ಖರೀದಿಸುವ ತಾಕತ್ತಿದೆ. 100 ಕೋಟಿ ಕೊಟ್ಟರೆ ನಾನು ಬಿಗ್‌ಬಾಸ್‌ನ್ನೇ ಖರೀದಿಸಬಹುದು. ನಾನು ಒಂದು ಮಾತು ಹೇಳಿದ್ರೆ ಸಾಕು, ನಮ್ಮ ಜನ 100 ಕೋಟಿ ತಂದು ಬಿಗ್‌ಬಾಸ್‌ಗೆ ಕೊಡುತ್ತಾರೆ. ಕಪ್ ನನ್ನದಾಗಿಸಿಕೊಳ್ಳುವ ತಾಕತ್ತು ನನಗೆ ಎಂದು ಅಹಂಕಾರದ ಮಾತನ್ನಾಡಿದ್ದಾರೆ.

ಇನ್ನು ವಕೀಲ್ ಸಾಬ್ ಮಾತಿಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದು, ಈ ಬಾರಿ ಮೊದಲ ವಾರದ ಕಥೆ ಕಿಚ್ಚನ ಕಥೆಯಲ್ಲಿ, ಕಿಚ್ಚ ಜಗದೀಶ್‌ರನ್‌ನು ಚೆನ್ನಾಗಿ ಡ್ರಿಲ್ ಮಾಡಲಿದ್ದಾರೆ. ಜಗದೀಶ್‌ಗೆ ಶನಿವಾರ ಹಬ್ಬವಿದೆ ಎಂದು ಮಾತನಾಡಿಕೊಂಡಿದ್ದಾರೆ. ಮತ್ತೆ ಕೆಲವರು ಜಗದೀಶ್‌ರನ್ನು ಬರೀ ಓಳು ಎಂದಿದ್ದಾರೆ.

- Advertisement -

Latest Posts

Don't Miss