Saturday, December 21, 2024

Latest Posts

ಹೆಸರಿನಲ್ಲೇ ಇದೆ ಸೋಲು & ಗೆಲುವು

- Advertisement -

ವಿಘ್ನನಾಯಕ, ವಿನಾಯಕ, ಗಣಪತಿಗೆ ಎಲ್ಲಾಕಡೆಯೂ ಅಗ್ರಪೂಜೆ. ಯಾವುದೇ ಕಾರ್ಯಕ್ರಮಕ್ಕೂ ಮುನ್ನ ವಿಘ್ನನಾಶಕನಿಗೆ ಪೂಜೆ ಮಾಡಿ ಕಾರ್ಯಕ್ರಮ ಯಶಸ್ಸು ಆಗಲಿ ಎಂದು ಪ್ರಾರ್ಥನೆ ಮಾಡುವುದು ಸಾಮಾನ್ಯ, ಮಕ್ಕಳ ವಿದ್ಯಾಭ್ಯಾಸದ ಆರಂಭದಲ್ಲೂ ಗಣಪನಿಗೆ ಪೂಜೆ ಮಾಡಿಯೇ ಆರಂಭಿಸಬೇಕು. ವಿದ್ಯಾಭ್ಯಾಸದಲ್ಲಿ ಸರಸ್ವತಿಯಷ್ಟೇ ಗಣಪತಿಯೂ ಮುಖ್ಯ.

https://www.youtube.com/watch?v=8M4od28gC34

ಗಣಪನ ಶ್ಲೋಕ ಹೇಳುವುದರಿಂದ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಉತ್ತಮಗೊಳ್ಳುತ್ತದೆ. ಇದು ವಿದ್ಯಾಭ್ಯಾಸಕ್ಕೆ ಸಹಾಯಕವಾಗುತ್ತದೆ, ಉತ್ತಮ ಅಂಕಗಳಿಕೆಗೂ ಇದು ಪೂರಕ, ಮಕ್ಕಳಿಗೆ ಸುಲಭವಾಗಿ ಹೇಳಲು ಸಿಂಪಲ್ ಮಂತ್ರವಿದೆ. ಓ ಗಂ ಗಣಪತಯೇ ನಮಃ ಅನ್ನುವುದು ವಿದ್ಯಾಭ್ಯಾಸದಲ್ಲಿ ಮಹತ್ವದ ಮಂತ್ರ. ವಿದ್ಯಾಭ್ಯಾಸದ ಆರಂಭದಲ್ಲಿ ಈ ಶ್ಲೋಕ ಹೇಳುವುದರಿಂದ ಉನ್ನತಿ ಸಾಧ್ಯವಾಗುತ್ತದೆ.

https://www.youtube.com/watch?v=8M4od28gC34

ಓಂ ಗಂ ಗಣಪತೆಯೇ ನಮಃ ಅನ್ನುವ ಮಂತ್ರವನ್ನು ಗರಿಕೆ ಹುಲ್ಲನ್ನುಗಣಪನ ಮುಂದೆ ಇಟ್ಟು 21 ಬಾರಿ ಪಠಿಸಿದ್ರೆ ವಿದ್ಯಾಭ್ಯಾಸದ ಶಕ್ತಿ, ಮೆಮೊರಿ ಪವರ್ ಹಾಗೂ ವಿದ್ಯಾಭ್ಯಾಸದ ಆಸಕ್ತಿ ಹೆಚ್ಚುತ್ತದೆ. ಬೀಜಮಂತ್ರದಷ್ಟೇ ಶಕ್ತಿಶಾಲಿಯಾಗಿರುವ ಈ ಮಂತ್ರವನ್ನು ಮಂಗಳವಾರದ ದಿನ ಹೇಳಿದ್ರೆ ಜ್ಞಾಪಕ ಶಕ್ತಿ ಹಾಗೂ ವಿದ್ಯಾಭ್ಯಾಸ ಚೆನ್ನಾಗಿ ಆಗಲಿದೆ.

https://www.youtube.com/watch?v=8M4od28gC34

ಹೆಸರು ಅಥವಾ ನೇಮಿಯೋಲಾಜಿ ಕೂಡ ಮನುಷ್ಯನ ಜೀವನದಲ್ಲಿ ತುಂಬಾ ಸಹಾಯಕ. ಹೆಸರು ಇದ್ದಾಗ ಮಾತ್ರ ಗುರುತು ಮಾಡಲು ಸಾಧ್ಯ. ಹಾಗಂತ ಹೆಸರು ಬೇಕಾದ ಹಾಗೇ ಇಟ್ಟುಕೊಂಡರೆ ಒಳ್ಳೆಯದಾಗುವುದಿಲ್ಲ. ಉತ್ತಮ ಹೆಸರು ಅತ್ಯುತ್ತಮ ಹಾಗೂ ಉನ್ನತಿಗೆ ಸಹಕಾರಿ

https://www.youtube.com/watch?v=8M4od28gC34

ಹೆಸರಿನಲ್ಲೇ ಪಾಸಿಟಿವ್ ವೈ ಬ್ರೇಷನ್ ಮತ್ತು ನೆಗೆಟಿವ್ ವೈಬ್ರೇಷನ್ ಇರುತ್ತದೆ. ಹೆಸರು ಕರೆದಾಗ ಅದ್ರ ವೈಬ್ಸ್ ಮೂಲಕ ನಮ್ಮ ಮೆದುಳು ಕೆಲಸ ಮಾಡುತ್ತದೆ. ಹೆಸರು ಬರೆಯುವುದರಿಂದಲೂ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಹೆಸರನ್ನು ಹೇಗೆ ಬೇಕೋ ಹಾಗೆ ಇಡುವ ಹಾಗಿಲ್ಲ. ಕಂಪನಿ ಇರಬಹುದು ಅಥವಾ ದೇವರೇ ಇರಬಹುದು ಹೆಸರು ಅನ್ನೋದು ಭವಿಷ್ಯವನ್ನು ನಿರ್ಧರಿಸುತ್ತದೆ. ಹೊಂದಾಣಿಕೆ ಇಲ್ಲದ ಹೆಸರಿನಿಂದ ಯಶಸ್ಸು ಸಿಗುವುದಿಲ್ಲ.

https://www.youtube.com/watch?v=8M4od28gC34

ಜ್ಯೋತಿಷಿ: ಡಾ. ತರುಣ್ ಬಾಲಾಜಿ

- Advertisement -

Latest Posts

Don't Miss