ಬೆಳಗಾವಿ : ರಾಜ್ಯದ ಸರ್ಕಾರಿ ಕಛೇರಿಗಳ ಮೇಲೆ ನಾಡಧ್ವಜವನ್ನು ಹಾರಿಸಬೇಕು ಕನ್ನಡ ನಾಡಧ್ವಜಕ್ಕೆ ಶಾಸನಬದ್ದ ಸ್ಥಾನಮಾನ ಸಿಗಬೇಕು ಎಂದು ಕಳೆದ ಆರು ವರ್ಷಗಳ ಹಿಂದೆಯೆ ಕೇಂದ್ರದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು ಆದರೆ ಇಲ್ಲಿರುವರೆಗೂ ಅದು ಜಾರಿಯಾಗಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಭೀಮಪ್ಪ ಗಡಾದ್ ಪ್ರತ್ರ ಬರೆಯುವ ಮೂಲಕ ಒತ್ತಾಯಿಸಿದರು.
ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷ ಕಳೆದರು ಸರ್ಕಾರಿ ಮತ್ತು ಅರೆ ಸರ್ಕಾರಿ ಕಚೇರಿಗಳ ಮೇಲೆ ರಾಷ್ಟ್ರಧ್ವಜಕ್ಕೆ ಚ್ಯುತಿ ಬರದ ರೀತಿಯಲ್ಲಿ ನಾಡಧ್ವಜವನ್ನು ಹಾರಿಸಬೇಕೆಂದು ಕಳೆದ ಆರು ವರ್ಷಗಳಿಂದ ಕೇಂದ್ರದಲ್ಲಿ ಕನ್ನಡ ನಾಡಧ್ವಜಕ್ಕೆ ಸ್ಥಾನಮಾನ ಸಿಗಬೇಕೆಂದು ಪ್ರಸ್ತಾವನೆ ಸಲ್ಲಿಸಿದ್ರು ಇಲ್ಲಿಯವರೆಗೂ ಧ್ವನಿ ಎತ್ತದ 25 ರಾಜ್ಯ ಸದಸ್ಯರು ಹಾಗೂ ದೆಹಲಿ ಪ್ರತಿನಿಧಿಗಳು ಮೌನವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2015ರಲ್ಲಿ ಹೈಕೋರ್ಟ್ ಅಡ್ವಕೇಟ್ ಜನರಲ್ ನಾಡಧ್ವಜ ಹಾರಿಸಲು ಕಾನೂನಿನಲ್ಲಿ ತೊಂದರೆ ಇಲ್ಲ ಎಂದು ಅಭಿಪ್ರಾಯ 9 ಜನ ಸಾಹಿತಿಗಳು ಚಿಂತಕರ ಸಮಿತಿಯಿಂದ ನಾಡಧ್ವಜದ ವಿನ್ಯಾಸಗೊಳಿಸಿದ್ದರು. 2018ರ ಮಾರ್ಚ್ 8ರಂದು ರಾಜ್ಯ ಸಚಿವ ಸಂಪುಟದ ಅನುಮೋದನೆ ಮಾಡಿದ ನಂತರ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ.
ಸರ್ಕಾರಿ ಕಚೇರಿಗಳ ಮೇಲೆ ನಾಡಧ್ವಜ ಹಾರಾಟಕ್ಕೆ ಕ್ರಮ ವಹಿಸಬೇಕು ಇಲ್ಲವಾದಲ್ಲಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಭೀಮಪ್ಪ ಗಡಾದ್ ಪ್ರತ್ರ ಬರೆದು ಒತ್ತಾಯಿಸಿದ್ದಾರೆ.
ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರಾಜಾಹುಲಿ ಟೀಮ್ ಆ್ಯಕ್ಟಿವ್ ; ರಾಜ್ಯಾದ್ಯಂತ ಬರ ಪ್ರವಾಸ..!
ಈರುಳ್ಳಿಗಳನ್ನು ಸಂಗ್ರಹ ಮಾಡಿ ಬೇಡಿಕೆ ಸೃಷ್ಟಿ ಮಾಡುತ್ತಿದ್ದಾರೆ; ಸಚಿವ ಶಿವಾನಂದ ಪಾಟೀಲ್..!