www.karnatakatv.net: ಹೊರರಾಜ್ಯದಿಂದ ಕರ್ನಾಟಕಕ್ಕೆ ಬರುವ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸುವಂತಿಲ್ಲ. ಈ ಕುರಿತು ರಾಜ್ಯ ಸರಕಾರ ಈ ವಿಚಾರ ಮರುಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸಬೇಕೆಂದು ಕರ್ನಾಟಕ ಉಚ್ಛ ನ್ಯಾಯಾಲಯ ಆದೇಶಿಸಿದೆ.
ಹೌದು..ಹೊರರಾಜ್ಯದಿಂದ ಕಲಿಕೆಗಾಗಿ ರಾಜ್ಯಕ್ಕೆ ಬರುವ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಡ್ಡಾಯಗೊಳಿಸುವಂತಿಲ್ಲ ಮತ್ತು ಅಂತರ ರಾಜ್ಯ ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯನ್ನುಕಡ್ಡಾಯ ವಿಷಯವನ್ನಾಗಿಸಿ ಮಾಡಿರುವ ಸರಕಾರದ ಎರಡು ಆದೇಶಗಳನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಾಧೀಶರಾದ ರಿತು ರಾಜ್ ಆವಸ್ತಿ ಈ ಪ್ರಕರಣವನ್ನು ನವೆಂಬರ್ 10ಕ್ಕೆ ಮುಂದೂಡಿದ್ದಾರೆ.
ಸರಕಾರವು ಮರುಪರಿಶೀಲನೆ ನಡೆಸಬೇಕಾಗಿರುವುದರಿಂದ ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ವಿಭಾಗೀಯ ಪೀಠ ತಿಳಿಸಿದೆ. ರಾಜ್ಯದಲ್ಲಿ ಉದ್ಯೋಗಕ್ಕೆ ಅರ್ಹರಾಗಲು ವಿದ್ಯಾರ್ಥಿಗಳಿಗೆ ಕ್ರಿಯಾತ್ಮಕ ಕನ್ನಡ ಕಲಿಸುವುದು ನೀತಿ ನಿರ್ಧಾರ ಎಂದು ವಕೀಲರಾದ ಪ್ರಭುಲಿಂಗ ಕೆ ನಾವಡಗಿ ತಿಳಿಸಿದ್ದರು. ಉದ್ಯೋಗ ಸಂಬAಧಿತವಾಗಿ ಕನ್ನಡ ಭಾಷೆ ಕಡ್ಡಾಯಗೊಳಿಸುವುದು ಅನಿವಾರ್ಯವಾಗಿದ್ದು ಇತರ ಸಂದರ್ಭಗಳಲ್ಲಿ ಕನ್ನಡ ಕಲಿಯಬೇಕೆಂಬುದನ್ನು ಕಡ್ಡಾಯಗೊಳಿಸಬಾರದು ಎಂಬುದನ್ನು ಹೈಕೋರ್ಟ್ ಗಮನಿಸಿದೆ.
ಕನ್ನಡವನ್ನು ಕಡ್ಡಾಯ ಭಾಷೆಯನ್ನಾಗಿ ಜಾರಿಗೊಳಿಸುವ ಇಂತಹ ನಿರ್ಧಾರವು ಟಾಸ್ಕ್ ಫೋರ್ಸ್ ಅಥವಾ ರಾಜ್ಯದಲ್ಲಿ ಓಇP ಜಾರಿಗೆ ತರಲು ರಚಿಸಲಾದ ಉಪಸಮಿತಿಗಳು ತೆಗೆದುಕೊಂಡ ನಿರ್ಧಾರಗಳ ಭಾಗವಾಗಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ಆದರೂ ಕರ್ನಾಟಕದ ಹೊರಗಿನಿಂದ ಬರುವ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕೆಂದು ರಾಜ್ಯ ಸರಕಾರ ಹೇಗೆ ಒತ್ತಾಯಿಸುತ್ತದೆ ಎಂಬುದನ್ನು ಪ್ರಶ್ನಿಸಿರುವ ವಿಭಾಗೀಯ ಪೀಠವು ಈ ವಿಚಾರವನ್ನು ಸರಕಾರ ಮರುವಿಚಾರಣೆ ನಡೆಸಬೇಕೆಂದು ಆದೇಶಿಸಿದೆ.