ಕನ್ನಡ ಚಿತ್ರರಂಗದಲ್ಲಿ 80-90ರ ದಶಕದಲ್ಲಿ ಸ್ಟಾರ್ ಹೀರೋಗಳ ಜೊತೆ ತೆರೆಮೇಲೆ ಮಿಂಚಿದ್ದ ಸ್ಟಾರ್ ನಟಿ ಮಹಾಲಕ್ಷ್ಮಿ. ತಮ್ಮ ಸಹಜ ಅಭಿನಯದ ಮೂಲಕ ಕನ್ನಡ ಸಿನಿಪ್ರೇಕ್ಷಕರನ್ನು ರಂಜಿಸಿದ್ದ ಈ ಮುದ್ದಿನ ರಾಣಿ, ಬಣ್ಣದ ಲೋಕದಲ್ಲಿ ಉತ್ತುಂಗದ ಸ್ಥಾನದಲ್ಲಿದ್ದಾಗಲೇ ಏಕಾಏಕಿ ಮಾಯವಾಗಿದ್ರು. ಆದ್ರೀಗ 30 ವರ್ಷದ ಬಳಿಕ ಮತ್ತೆ ಗಾಂಧಿನಗರ ಪ್ರವೇಶಿಸಲು ರೆಡಿಯಾಗಿದ್ದಾರೆ.
ಮಹಾಲಕ್ಷ್ಮಿ ಕನ್ನಡ ಸಿನಿಮಾ ಇಂಡಸ್ಟ್ಟ್ರೀಗೆ ಮರಳುತ್ತಾರೆ ಅನ್ನೋ ಸುದ್ದಿ ನಿನ್ನೆ-ಇಂದಿನದ್ದಲ್ಲ. ಬಹಳ ವರ್ಷಗಳಿಂದಲೂ ಈ ಮಾತು ಕೇಳಿ ಬರುತಿತ್ತು. ಬಟ್ ಇದೀಗ ಮಹಾಲಕ್ಷ್ಮಿ ರೀ-ಎಂಟ್ರಿಗೆ ವೇದಿಕೆ ಸಜ್ಜಾಗಿದೆ ಅನ್ನೋದನ್ನ ಅವರೇ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ‘TRP ರಾಮ’ ಅನ್ನೋ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರ ಎದುರು ಮತ್ತೆ ಬರಲು ರೆಡಿಯಾಗಿದ್ದಾರಂತೆ.
TRP ರಾಮ ಸಿನಿಮಾದಲ್ಲಿ ತಾಯಿಯ ಪಾತ್ರದ ಮೂಲಕ ಸಿನಿಮಾಕ್ಕೆ ರೀ ಎಂಟ್ರಿ ಆಗ್ತಿದ್ದಾನೆ. ಸಿನಿಮಾದ ಕಥೆ ಚೆನ್ನಾಗಿದ್ದು ಭಾವನಾತ್ಮಕವಾದ ಪಾತ್ರವಾಗಿದ್ದರಿಂದ ಒಪ್ಪಿಕೊಂಡಿದ್ದೇನೆ. ನಿಮ್ಮ ಮಹಾಲಕ್ಷ್ಮಿಯನ್ನು ತೆರೆಯ ಮೇಲೆ ನೋಡಬಹುದು, ಈ ಹಿಂದೆ ನಿಮ್ಮೆಲ್ಲರ ಸಹಕಾರದಿಂದ ನಾನು ಮಿಂಚಿದ್ದೆ, ಈಗ ಮತ್ತೊಮ್ಮೆ ನಿಮ್ಮೆಲ್ಲರ ಬೆಂಬಲ ಹಾಗೂ ಸಹಕಾರ ರಾಮ ಚಿತ್ರ ತಂಡಕ್ಕೆ ಬೇಕಾಗಿದೆ ಎಂದು ಹೇಳಿದ್ದಾರೆ ಎನ್ನಲಾಗ್ತಿದೆ.
ಸಿನಿಮಾಗಳ ನಟನೆಯ ನಂತ್ರ ಕೌಟುಂಬಿಕ ಜೀವನಕ್ಕೆ ಕಾಲಿಟ್ಟೆ. ಆಗ ಅಲ್ಲಿ ಸ್ವಲ್ಪ ಬಿಡುವು ದೊರಕಿರುವುದರಿಂದ ಮತ್ತೊಮ್ಮೆ ಬಣ್ಣ ಹಚ್ಚಲು ಸಿದ್ಧವಾಗಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ತಾನು ಅಭಿನಯಿಸಿದ ಸಿನಿಮಾಗಳ ನೆನಪು ಇನ್ನೂ ಕೂಡಾ ಹಸಿರಾಗಿದ್ದು 30 ವರ್ಷಗಳ ನಂತರ ಮತ್ತೆ ನಟಿಸುತ್ತಿರುವುದು ಬಹಳ ಸಂತೋಷವನ್ನು ನೀಡಿದೆ ಎಂದಿದ್ದಾರೆ. ವರ್ಷಗಳು ಕಳೆದರೂ ಜನರು ತನ್ನನ್ನು ನೆನಪಿಟ್ಟು ಕೊಂಡಿರುವುದಕ್ಕೆ ಸಂತಸ ಪಟ್ಟಿದ್ದಾರೆ.
ಅಂದಹಾಗೇ ಮಹಾಲಕ್ಷ್ಮಿ ಡಾ.ರಾಜ್ ಕುಮಾರ್, ಅಂಬರೀಷ್, ಅನಂತ್ ನಾಗ್, ಶಂಕರ್ ನಾಗ್, ರವಿಚಂದ್ರನ್ ಸೇರಿದಂತೆ ಕಾಲಿವುಡ್ ಹಾಗೂ ಟಾಲಿವುಡ್ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡವರು.