Movie News: ಕನ್ನಡಿಗ ನಿಖಿಲ್ ತೆಲುಗು ಬಿಗ್‌ಬಾಸ್ ಕೀರಿಟ ತಮ್ಮದಾಗಿಸಿಕೊಂಡಿದ್ದಾರೆ. ತೆಲುಗು ಬಿಗ್‌ಬಾಸ್ ಸೀಸನ್ 8ನಲ್ಲಿ ಕನ್ನಡಿಗ ನಿಖಿಲ್ ಮಳಿಯಕ್ಕಲ್ ಗೆಲುವು ಸಾಧಿಸಿದ್ದು, ನಟ ರಾಮ್‌ಚರಣ್ ನಿಖಿಲ್‌ಗೆ ಬಿಗ್‌ಬಾಸ್ ಟ್ರೋಫಿ ನೀಡಿ, ಅಭಿನಂದಿಸಿದ್ದಾರೆ.
ಮೂಲತಃ ಮೈಸೂರಿನವರಾಾದ ನಿಖಿಲ್ ಯೂಟ್ಯೂಬರ್ ಕೂಡ ಹೌದು. ನಿಖಿಲ್ ತೆಲುಗಿನ ಕೆಲವು ಕಿರುತೆರೆ ಧಾರಾವಾಹಿಯಲ್ಲಿ ನಟಿಸಿ, ತೆಲುಗು ಚಿತ್ರರಂಗದ ನಂಟು ಬೆಳೆಸಿಕೊಂಡಿದ್ದರು. ಸೆಪ್ಟೆಂಬರ್ 1ರಂದು ನಿಖಿಲ್ ಬಿಗ್‌ಬಾಸ್ ಪ್ರವೇಶ ಮಾಡಿದ್ದರು. ಚೆನ್ನಾಗಿ ಎಂಟರ್‌ಟೇನ್ ಮೆಂಟ್ ಕೊಟ್ಟ ಕಾರಣಕ್ಕೆ, ನಿಖಿಲ್ ಟ್ರೋಫಿಯ ವಾರಸುದಾಾರರಾಗಿದ್ದಾರೆ.
ಬಿಗ್‌ಬಾಸ್ ಫಿನಾಲೆಗೆ ಅತಿಥಿಯಾಗಿ ನಟ ರಾಮ್‌ಚರಣ್ ಬಂದಿದ್ದರು. ನಿಖಿಲ್ ಗೆದ್ದ ತಕ್ಷಣ, ರಾಮಚರಣ್ ಅಭಿನಂದಿಸಿದ್ದು, ರಾಮಚರಣ್‌ಗೆ ಟ್ರೋಫಿ, ಚೆಕ್ ನೀಡಿ, ಅಭಿನಂದಿಸಿದ್ದಾರೆ. ಅಲ್ಲದೇ, ನಿಖಿಲ್‌ಗೆ ಕಾರ್ ಕೂಡ ಸಿಕ್ಕಿದೆ. ಒಟ್ಟಾರೆಯಾಗಿ ಕನ್ನಡಿಗ ನಿಖಿಲ್ ಕುಮಾರ್ ಬಿಗ್‌ಬಾಸ್‌ನಂಥ ಚಾಲೆಂಜಿಂಗ್ ಸ್ಪರ್ಧೆಯಲ್ಲಿ ಗೆದ್ದು, ತೆಲುಗು ಜನ ಪ್ರೀತಿ ಪಡೆದಿರುವುದು ನಿಜಕ್ಕೂ ಹೆಮ್ಮೆಯ ವಿಷಯ.