Friday, November 28, 2025

Latest Posts

ರಿಲೀಸ್‌ಗೂ ಮುನ್ನವೇ ‘ಕಾಂತಾರ ಚಾಪ್ಟರ್ 1’ ಹಿಟ್!

- Advertisement -

ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ ಚಾಪ್ಟರ್ 1’ ಬಹು ನಿರೀಕ್ಷೆಯನ್ನ ಹುಟ್ಟುಹಾಕಿದೆ. ಈ ಚಿತ್ರ ಬಿಡುಗಡೆಯ ಮೊದಲೇ 200 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಗಳಿಸಿದೆ. ಚಿತ್ರತಂಡ ಈಗಾಗಲೇ ಓಟಿಟಿ, ಸ್ಯಾಟಲೈಟ್ ಹಾಗೂ ಆಡಿಯೋ ಹಕ್ಕುಗಳನ್ನು ಮಾರಾಟ ಮಾಡುವ ಮೂಲಕ ಬಜೆಟ್‌ನ ಬಹುಪಾಲನ್ನು ಹಿಂತಿರುಗಿಸಿಕೊಂಡಿದೆ.

ಓಟಿಟಿ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ ಸಂಸ್ಥೆ ₹120 ಕೋಟಿಗೆ ಖರೀದಿಸಿದೆ. ಎಲ್ಲಾ ಭಾರತೀಯ ಭಾಷೆಗಳ ಸ್ಯಾಟಲೈಟ್ ಹಕ್ಕುಗಳನ್ನು ಜೀ ಟಿವಿ ₹80 ಕೋಟಿಗೆ ಪಡೆದುಕೊಂಡಿದೆ. ಈ ಮೂಲಕ ಮಾತ್ರವೇ ಚಿತ್ರ 200 ಕೋಟಿ ಕ್ಲಬ್‌ ಸೇರಿದೆ. ಮೂಲಗಳ ಪ್ರಕಾರ, ಸಿನಿಮಾ ಪ್ರಸಾರ ಹಕ್ಕುಗಳನ್ನು ಸುವರ್ಣ ವಾಹಿನಿ ಖರೀದಿಸಿದೆ. ಈ ಲೆಕ್ಕಾಚಾರದಲ್ಲೂ ನಿರಾಕ್ಷೇಪಣಾ ಪತ್ರದ ಮೂಲಕ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದೆ.

ಚಿತ್ರದ ಆಡಿಯೋ ಹಕ್ಕುಗಳನ್ನು ಸುಮಾರು ₹30 ಕೋಟಿಗೆ ಖ್ಯಾತ ಸಂಸ್ಥೆಗೆ ಮಾರಾಟ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ.ಇನ್ನು ಪ್ರೀಮಿಯರ್ ಶೋ ಹಾಗೂ ಬಿಡುಗಡೆಯ ವಿವರಗಳನ್ನ ನೋಡೋದಾದ್ರೆ ಅಕ್ಟೋಬರ್ 1ರಂದು ಸಂಜೆ ವಿಶ್ವದಾದ್ಯಾಂತ ಭರ್ಜರಿ ಪ್ರೀಮಿಯರ್ ಶೋ ಆಯೋಜಿಸಲು ಚಿತ್ರತಂಡ ತಯಾರಿ ನಡೆಸುತ್ತಿದೆ.
ಮೊದಲ ವಾರದಲ್ಲಿ ಸಿನಿಮಾ ಐದು ಪ್ರಮುಖ ಭಾರತೀಯ ಭಾಷೆಗಳಲ್ಲಿ ಹಾಗೂ ಇಂಗ್ಲಿಷ್‌ನಲ್ಲಿ ಮಾತ್ರ ಬಿಡುಗಡೆಯಾಗಲಿದೆ. ಅದರ ಮುಂದಿನ ವಾರದಿಂದ ಇತರ ವಿದೇಶಿ ಭಾಷೆಗಳನ್ನೂ ಸೇರಿಸಿ ಒಟ್ಟು ಸುಮಾರು 30 ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.

ಸದ್ಯ ಪ್ರಚಾರಕ್ಕಿಂತ ಪೈರಸಿ ತಡೆಗೆ ಹೆಚ್ಚಿನ ಒತ್ತಡ ಇದೆ. ಚಿತ್ರದ ಪ್ರಚಾರ ಕಾರ್ಯಕ್ಕೆ ಚಿತ್ರತಂಡ ಹೆಚ್ಚಿನ ಗಮನ ನೀಡುತ್ತಿಲ್ಲ.ಬದಲಿಗೆ ಪೈರಸಿ ತಡೆಯುವ ಕಾರ್ಯಕ್ಕೆ ವಿಶೇಷ ಗಮನ ಹರಿಸಲಾಗಿದೆ. ಇದಕ್ಕಾಗಿ ದೇಶದ ಪ್ರಮುಖ ಪೈರಸಿ ತಡೆ ತಂಡಗಳನ್ನು ಒಳಗೊಂಡಿದೆ. ರಿಷಬ್ ಶೆಟ್ಟಿ ಸಿನಿಮಾದ ನಂತರವೇ ಸಂದರ್ಶನಗಳಲ್ಲಿ ಪಾಲ್ಗೊಳ್ಳುವ ಆಲೋಚನೆಯಲ್ಲಿದ್ದಾರೆ. ಈಗಾಗಲೇ ಅವರು ಚಿತ್ರದ ಅಂತಿಮ ಹಂತದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಹಾಲಿವುಡ್‌ನ ಸಾಹಸ ನಿರ್ದೇಶಕ ಟೋಡರ್ ಲ್ಯಾಜರೋವ್ ಹೇಳುವ ಪ್ರಕಾರ,
ಕಾಂತಾರ ಚಿತ್ರದ ಒನ್‌ಲೈನ್ ಮಾತ್ರ ಕೇಳಿದ ಕೂಡಲೇ ನಾನು ಸಾಹಸ ನಿರ್ದೇಶನ ಮಾಡಲು ಒಪ್ಪಿಕೊಂಡೆ. ಈ ಸಿನಿಮಾಗಾಗಿ ನಾನು ಇತ್ತೀಚೆಗೆ ಒಪ್ಪಿಕೊಂಡಿದ್ದ ಎರಡು ಸಿನಿಮಾ ಪ್ರಾಜೆಕ್ಟ್‌ಗಳಿಂದ ಹಿಂದೆ ಸರಿದಿದ್ದೇನೆ. ಇದು ಬಿಡುಗಡೆಗೂ ಮುನ್ನವೇ ಬ್ಲಾಕ್‌ಬಸ್ಟರ್ ಹಿಟ್ ಆಗುತ್ತಿದೆ ಎಂದು ಹೇಳಿದ್ದಾರೆ. ಸದ್ಯ ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಯ ಮೊದಲೇ ಬೃಹತ್‌ ಹಣದ ಗಳಿಕೆಯಿಂದ ಗಮನ ಸೆಳೆಯುತ್ತಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss