- Advertisement -
ಆಸ್ಕರ್ ನಲ್ಲಿ ಕಾಂತಾರ ಹವಾ…!!!
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ವಿಶ್ವದ ಅತ್ಯಂತ ಪ್ರತಿಷ್ಠಿತ ಪುರಸ್ಕಾರ ಆಸ್ಕರ್‌ನ ʼಅತ್ಯುತ್ತಮ ಚಿತ್ರʼ ಹಾಗೂ ʼಅತ್ಯುತ್ತಮ ನಟʼ ವಿಭಾಗಗಳಲ್ಲಿ ಸ್ಪರ್ಧೆಯ ಅರ್ಹತೆ ಪಡೆದಿದೆ.
301 ಸಿನಿಮಾಗಳ ಪಟ್ಟಿಯಲ್ಲಿ ಕಾಂತಾರ ಚಿತ್ರಕ್ಕೂ ಅರ್ಹತೆ ದೊರೆತಿದೆ. ಕಾಂತಾರ ಜೊತೆ RRR, ಗಂಗೂಬಾಯಿ ಕಾಥಿಯಾವಾಡಿ, ಕಾಶ್ಮೀರಿ ಫೈಲ್ಸ್ ಕೂಡ ಸ್ಪರ್ಧಿಸಲಿವೆ. ನಾಳೆಯಿಂದ ಓಟಿಂಗ್ ಪ್ರಕ್ರಿಯೆ ಶುರುವಾಗಲಿದ್ದು, 17ರವರೆಗೂ ಓಟಿಂಗ್ ನಡೆಯಲಿದೆ. ಆಸ್ಕರ್ ಜೂರಿಯ 350 ಸದಸ್ಯರಿಂದ ಓಟಿಂಗ್ ನಡೆಯಲಿದೆ.
ಜನವರಿ 24ರಂದು ಆಸ್ಕರ್ ವಿಜೇತ ಚಿತ್ರಗಳ ಅಂತಿಮ ಪಟ್ಟಿ ಪ್ರಕಟವಾಗಲಿದೆ.ಹೊಂಬಾಳೆ ಫಿಲಂಸ್‌ನಿಂದ ಅಧಿಕೃತ ಘೋಷಣೆ ಬಂದಿದೆ. ಕಾಂತಾರ ಚಿತ್ರ ಆಸ್ಕರ್ ಸ್ಪರ್ಧೆಗೆ ನಾಮಿನೇಟ್ ಆಗಿರುವ ಸಂತಸವನ್ನು ಟ್ವೀಟ್ ಮಾಡುವ ಮೂಲಕ ಹೊಂಬಾಳೆ ಫಿಲಂಸ್ ಹಂಚಿಕೊಂಡಿದೆ.
- Advertisement -