Monday, December 16, 2024

Latest Posts

ಕಪೀಲ್ ಶರ್ಮಾ ಓರ್ವ ಅಹಂಕಾರಿ, ಅವರ ಶೋ ಒಂದು ಅಶ್ಲೀಲ ಶೋ: ನಟ ಮುಖೇಶ್ ಖನ್ನಾ

- Advertisement -

Bollywood News: ನಟ ಮುಖೇಶ್ ಖನ್ನಾ 90ರ ದಶಕದ ಮಕ್ಕಳಿಗೆ ಶಕ್ತಿಮಾನ್ ಅಂತಲೇ ಪರಿಚಿತರು. ಮಹಾಭಾರತದಲ್ಲಿ ಭೀಷ್ಮನ ಪಾತ್ರದಲ್ಲಿ ಮಿಂಚಿ ಪ್ರಸಿದ್ಧರಾದವರು. ಆದರೆ ಇತ್ತೀಚಿನ ದಿನಗಳಲ್ಲಿ ತಮ್ಮ ಖಾರವಾದ ಹೇಳಿಕೆಯಿಂದಲೇ ಈ ಶಕ್ತಿಮಾನ್ ಸುದ್ದಿಯಾಗುತ್ತಿದ್ದಾರೆ.

ಕೆಲ ದಿನಗಳ ಹಿಂದ ರಣ್ವೀರ್ ಸಿಂಗ್ ಅವರ ವಿರುದ್ಧ ಹೇಳಿಕೆ ಕೊಟ್ಟಿದ್ದರು. ಇದೀಗ ಕಪೀಲ್ ಶರ್ಮಾ ಬಗ್ಗೆ ಹೇಳಿಕೆ ಕೊಟ್ಟು ಸುದ್ದಿಯಾಗಿದ್ದಾರೆ. ಕಪೀಲ್ ಶರ್ಮಾ ಶೋ ಒಂದು ಅಶ್ಲೀಲ ಶೋ, ಅಂಥ ಶೋಗೆ ನನಗೆ ಒಂದು ದಿನವೂ ಕರೆಯಲಿಲ್ಲ. ಕರೆದರೂ ನಾನು ಹೋಗುತ್ತಿರಲಿಲ್ಲ. ಕಪೀಲ್ ಶರ್ಮಾರ ಅಹಂಕಾರವೋ, ಅಥವಾ ಸಂಕೋಚದ ಸ್ವಭಾವವೋ , ನನಗೆ ಆಮಂತ್ರಿಸಲು ತಡೆದಿರಬಹುದು ಎಂದು ಮುಖೇಶ್ ಖನ್ನಾ ಹೇಳಿದ್ದಾರೆ.

ಕಪೀಲ್ ಶರ್ಮಾ ಶೋ ನೋಡಿ ಜನ ನಗುತ್ತಾರೆ. ಆದರೆ ನನಗೆ ಅದರಲ್ಲಿ ನಗುವಂಥಾದ್ದು ಏನಾದರೂ ಇದೆ ಎಂದು ಯಾವಾಗಲೂ ಅನ್ನಿಸಲಿಲ್ಲ. ರಾಮನ ಪಾತ್ರಧಾರಿಯಾಗಿದ್ದಂಥ ಅರುಣ್ ಗೋಯಲ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಅಲ್ಲಿ ಅವರಿಗೆ ನೀವು ಪ್ರತಿದಿನ ಸ್ನಾನ ಮಾಡುತ್ತೀರಾ ಎಂಬ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಅರುಣ್ ಅವರು ಮೌನವಾಗಿ ನಕ್ಕಿದ್ದರು. ಅಷ್ಟು ಗೌರವವಿರುವ ವ್ಯಕ್ತಿಗೆ ಇಂಥ ಪ್ರಶ್ನೆ ಕೇಳುವುದು ಎಷ್ಟು ಸೂಕ್ತ ಎಂದು ಮುಖೇಶ್ ಖನ್ನಾ ಪ್ರಶ್ನಿಸಿದ್ದಾರೆ.

- Advertisement -

Latest Posts

Don't Miss