ಇಂದು ಆಯೋಜನೆಗೊಂಡಿರೋ ಹಿಂದಿ ಸಪ್ತಾಹ ಕಾರ್ಯಕ್ರಮವನ್ನ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ರು.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಿಂದಿ ಭಾಷೆ ಹೇರಿಕೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಭಾಷಾವಾರು ಪ್ರಾಂತ್ಯಗಳ ಆಧಾರದಲ್ಲಿ ರಾಜ್ಯಗಳನ್ನ ರಚಿಸಿರೋ ಭಾರತದಲ್ಲಿ ಒಂದೇ ಭಾಷೆಯ ಹೇರಿಕೆ ಸಲ್ಲದು. ನಮ್ಮದು ವಿವಿಧತೆಯಲ್ಲಿ ಏಕತೆ ಹೊಂದಿರೋ ಪ್ರಜಾಪ್ರಭುತ್ವ ಹೊಂದಿರೋ ದೇಶ ಅಂತಾ ಕರವೇ ಕಾರ್ಯಕರ್ತರು ಹೇಳಿದ್ರು.
ಆದರೆ ಕೇಂದ್ರ ಸರ್ಕಾರದ ಹಿಂದಿ ಮಾತನಾಡುವವರನ್ನ ದೇಶದ ಪ್ರಥಮ ಪ್ರಜೆಗಳಂತೆ ಹಾಗೂ ದ್ರಾವಿಡ ಭಾಷೆ ಮಾತನಾಡುವವರನ್ನ ದ್ವಿತೀಯ ದರ್ಜೆ ಪ್ರಜೆಗಳಂತೆ ಕಾಣುತ್ತಿದೆ. ಅಲ್ಲದೇ ನಮ್ಮದೇ ತೆರಿಗೆ ಹಣ ಬಳಸಿಕೊಂಡು ಒತ್ತಾಯಪೂರ್ವಕವಾಗಿ ಕೆಲ ರಾಜ್ಯಗಳಲ್ಲಿ ಹಿಂದಿ ದಿವಸ್ ಆಚರಣೆ ಮಾಡಲಾಗ್ತಿದೆ. ಇದು ದೇಶದ ಒಕ್ಕೂಟ ವ್ಯವಸ್ಥೆಗೆ ಮಾಡಿದ ಅವಮಾನ. ಕೇಂದ್ರ ಸರ್ಕಾರ ಹಿಂದಿ ಸಪ್ತಾಹ್ ಆಚರಣೆ ಹಿಂಪಡೆಯದಿದ್ದಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಅಂತಾ ಕಾರ್ಯಕರ್ತರು ಎಚ್ಚರಿಕೆ ಸಂದೇಶ ರವಾನಿಸಿದ್ರು.
ಕೆ.ರಾಜು ಕರ್ನಾಟಕ ಟಿವಿ