Sunday, September 8, 2024

Latest Posts

ಕಾರ್ಗಿಲ್ ವಿಜಯೋತ್ಸವ ಹಿನ್ನೆಲೆ: ಧಾರವಾಡದಲ್ಲಿ ಪಂಜಿನ ಮೆರವಣಿಗೆ

- Advertisement -

Dharwad News: ಧಾರವಾಡ: ನಿನ್ನೆ 25ನೇ ಕಾರ್ಗಿಲ್ ವಿಜಯೋತ್ಸವ ಹಿನ್ನೆಲೆ, ಧಾರವಾಡದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಲ್ಲಿನ ಮಾಳಮಡ್ಡಿ ಬಡವಾಣೆಯಿಂದ ಪಂಜಿನ ಮೆರವಣಿಗೆ ಮೂಲಕ ಕಾರ್ಗಿಲ್ ಸ್ತೂಪದವರೆಗೆ, ಮೆರವಣಿಗೆ ನಡೆಸಲಾಯಿತು.

ಧಾರವಾಡದ ಡಿಸಿ ಕಚೇರಿ ಬಳಿ ಇರುವ ಈ ಸೂಪ್ತ ದೇಶದ ಪ್ರಥಮ ಸೂಪ್ತ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗಾಗಿ ಈ ಸೂಪ್ತಕ್ಕೆ ತೆರಳಿ ಹುತಾತ್ಮರಿಗೆ ನಮನ ಸಲ್ಲಿಸಲಾಯಿತು. ಇದೇ ವೇಳೆ ಯುವಕರು ದೇಶಭಕ್ತಿ ಘೋಷಣೆ ಹಾಕಿ ದೇಶಾಭಿಮಾನ ಮೆರೆದರು.

ಕಾರ್ಗಿಲ್ ಯುದ್ಧ ನಡೆಯುವ ಸಂದರ್ಭದಲ್ಲಿ ಒಂದು ದಿನಕ್ಕೆ ಕೋಟಿ ಕೋಟಿ ರೂಪಾಯಿ ಖರ್ಚಾಗಿತ್ತು. ಎಷ್ಟೋ ಜನ ಸೈನಿಕರು ಈ ಯುದ್ಧದಲ್ಲಿ ಮಡಿದರೆ, ಕೆಲವು ಸೈನಿಕರು ನಾಪತ್ತೆಯಾಗಿದ್ದರು. ಅವರು ಇನ್ನೂವರೆಗೂ ಕೂಡ ಪತ್ತೆಯಾಗಿಲ್ಲ. ಅವರನ್ನು ಪಾಕಿಗಳು ಹೊತ್ತೊಯ್ದು, ಹಿಂಸಿಸಿದ್ದಾರೆಂದು ಹೇಳಲಾಗುತ್ತದೆ.

ಇನ್ನು ಈ ಯುದ್ಧ ನಡೆಯುವ ವೇಳೆ ಅಟಲ್ ಬಿಹಾರಿ ವಾಜಪೇಯಿ ಅವರು ಸ್ವತಃ ಸೈನಿಕರ ಬಳಿ ಹೋಗಿ, ಸೈನಿಕರಿಗೆ ಯುದ್ಧಕ್ಕಾಗಿ ಹುರಿದುಂಬಿಸಿದ್ದರಂತೆ.

- Advertisement -

Latest Posts

Don't Miss