BREAKING NEWS: ಕರಿಯಾ ಸಿನಿಮಾ ನಿರ್ಮಾಪಕ ಆನೇಕಲ್ ಬಾಲರಾಜ್ ರಸ್ತೆ ಅಪಘಾತದಲ್ಲಿ ನಿಧನ

ಬೆಂಗಳೂರು: ಇಂದು ಮುಂಜಾನೆ ವಾಕಿಂಗ್ ಮಾಡುತ್ತಿದ್ದಂತ ಸಂದರ್ಭದಲ್ಲಿ, ಜೆಪಿ ನಗರದಲ್ಲಿ ಕರಿಯಾ ಸಿನಿಮಾ ನಿರ್ಮಾಪಕ ಆನೇಕಲ್ ಬಾಲರಾಜ್ (58) ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.

ಜೆಪಿ ನಗರದಲ್ಲಿ ಇಂದು ಮುಂಜಾನೆ ವಾಕಿಂಗ್ ಗೆ ಮಾಡುತ್ತಿದ್ದಾಗ ಅಪಘಾತ ಸಂಭವಿಸಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಆದ್ರೇ.. ಚಿಕಿತ್ಸೆ ಫಲಕಾರಿಯಾಗದೇ ಇದೀಗ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.

ಅಂದಹಾಗೇ 2003ರಲ್ಲಿ ತೆರೆಕಂಡಂತ ನಟ ತೂಗುದೀಪ್ ದರ್ಶನ್ ಅಭಿನಯದ ಕರಿಯಾ ಚಿತ್ರವನ್ನು ನಿರ್ಮಾಪಕರಾಗಿ ಆನೇಕಲ್ ಬಾಲರಾಜ್ ನಿರ್ಮಿಸಿದ್ದರು. 56 ದಿನಗಳ ಯಶಸ್ವಿ ಪ್ರದರ್ಶನ ಕಂಡಿತ್ತು. ಪ್ರೇಕ್ಷಕರ ಒತ್ತಾಯದ ಮೇರೆಗೆ ಮರು ಬಿಡುಗಡೆಯಾದಾಗ 100 ದಿನ ಕೂಡ ಹಲವು ಚಿತ್ರಮಂದಿರಗಳಲ್ಲಿ ಪೂರೈಸಿತ್ತು. ಜೊತೆಗೆ ಕೀರ್ತಿಯನ್ನು ಇವರಿಗೆ ತಂದುಕೊಟ್ಟಿತ್ತು.

About The Author