Sunday, December 22, 2024

Latest Posts

Collage : ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ

- Advertisement -

Karkala News : ಪತ್ರಿಕಾ ರಂಗದಲ್ಲಿ ದುಡಿಯಲು ಯುವಕರು ಮನಸ್ಸು ಮಾಡಬೇಕಾಗಿದೆ. ಸಮಾಜದ ಹಾಗು ಹೋಗುಗಳ ಬಗ್ಗೆ ಜನರಿಗೆ ತಿಳಿಸುವ ಮಹಾ ಕೆಲಸವನ್ನು ಪತ್ರಿಕೆಗಳು ಮಾಡುತ್ತದೆ. ಸಾಮಾಜಿಕ ಜಾಲತಾಣದ ನಡುವೆಯೂ ಪತ್ರಿಕೆ ತನ್ನ ಗೌರವನ್ನು ಇಂದಿಗೂ ಇಟ್ಟುಕೊಂಡಿದೆ. ಪತ್ರಕರ್ತರಾಗಲು ಬರವಣಿಗೆ ಕೌಶಲ್ಯ ಹೊಂದಿದ್ದರೆ ಸಾಕು. ಇಂದು ಪತ್ರಿಕಾರಂಗದಲ್ಲಿ ವಿಪುಲ ಅವಕಾಶಗಳಿವೆ ಅದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳುಬೇಕೆಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ, ಪ್ರಾಧ್ಯಾಪಕಿ ರಕ್ಷಿತಾ ಕುಮಾರಿ ಟಿ.ಡಿ ಹೇಳಿದರು.

ಅವರು ಕಾರ್ಕಳ ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜಿನ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹೊಸತನವನ್ನು ಹುಡುಕುವ ಹಸಿವು ಪತ್ರಕರ್ತರಲ್ಲಿರಬೇಕು. ಪತ್ರಿಕೋದ್ಯಮ ವಿಭಾಗ ಅಭೂತಪೂರ್ವ ಅವಕಾಶಗಳನ್ನು ತೆರೆದಿಟ್ಟಿದೆ.  ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಓದು ನಮ್ಮನ್ನು ಬರೆಯಲು ಪ್ರೇರೆಪಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕಾರ್ಕಳ ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಷರೀಫ್ ರವರನ್ನು ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕ್ರೈಸ್ಟ್‍ಕಿಂಗ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀ ನಾರಾಯಣ ಕಾಮತ್ ಮಾತನಾಡಿ ವಿದ್ಯಾರ್ಥಿಗಳು ನಿತ್ಯ ಓದಿನ ಜೊತೆಯಲ್ಲಿ ಬರವಣಿಗೆಯನ್ನು ರೂಢಿಸಿಕೊಂಡು ಪತ್ರಕರ್ತರಾಗಲು ಸಾಧ್ಯವಾಗುತ್ತದೆ. ಪತ್ರಿಕೆ ಸಮಾಜದ ಕನ್ನಡಿಯಾಗಿದೆ. ಸರಿ ತಪ್ಪುಗಳನ್ನು ಸಮಾಜದಲ್ಲಿ ತಿದ್ದುವ ಮಹಾ ಕೆಲಸವನ್ನು ಪತ್ರಿಕೆಗಳು ಮಾಡುತ್ತದೆ. ಸುಂದರ ಪದಗಳನ್ನು ಜೋಡಿಸುವ ಪ್ರಾವೀಣ್ಯತೆಯನ್ನು ಪತ್ರಕರ್ತರು ಹೊಂದಿರುತ್ತದೆ. ಸುಂದರ ಪದಗಳ ಜೋಡಣೆಯ ಪತ್ರಿಕೆಯನ್ನು ಜನ ಹೆಚ್ಚಾಗಿ ಓದುತ್ತಾರೆ ಎಂದರು.

ಕ್ರೈಸ್ಟ್‍ಕಿಂಗ್ ಪದವಿ ಪೂರ್ವ ಕಾಲೇಜಿನ ಉಪಪ್ರಾಚಾರ್ಯ ಪ್ರಕಾಶ್ ಭಟ್, ಕ್ರೈಸ್ಟ್‍ಕಿಂಗ್ ಎಜುಕೇಷನ್ ಟ್ರಸ್ಟ್ (ರಿ.)ಸದಸ್ಯ ಡಾ.ಪೀಟರ್ ಫೆರ್ನಾಂಡಿಸ್,  ಕ್ರೈಸ್ಟ್‍ಕಿಂಗ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಮೇರಿಯನ್ ಡಿ’ಸೋಜ, ಕ್ರೈಸ್ಟ್‍ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆ ಮುಖ್ಯ ಶಿಕ್ಷಕ ಡೊಮಿನಿಕ್ ಅಂದ್ರಾದೆ ಉಪಸ್ಥಿತರಿದ್ದರು.

ವಿದ್ಯಾರ್ಥಿ ಶ್ರೇಯಸ್ ಸ್ವಾಗತಿಸಿದರು, ಶಿಕ್ಷಕ ಉಮೇಶ್ ಸಿ.ಆರ್ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿ ಚರಣ್ ರಾಜ್ ವಂದಿಸಿದರು.

ಹೆಣ್ಣು ಮಕ್ಕಳ ಮಾನ ಹಾನಿ ಯತ್ನ ಕೊಲೆಗಿಂತಲೂ ಭೀಕರ : ರೇಶ್ಮಾ ಉದಯ್ ಶೆಟ್ಟಿ

Flower : ತ್ಯಾಜ್ಯ ನಿರ್ವಹಣಾ ಜಾಗದಲ್ಲಿ ಅರಳಿತು ಹೂದೋಟ…!

Rain : ಭಾರೀ ಮಳೆಗೆ ಮನೆಗುರುಳಿದ ಮರ…!

- Advertisement -

Latest Posts

Don't Miss