Karkala News : ನಿತ್ಯ ಪ್ರಯಾಣಿಕರಿಗೆ ಉಪಯೋಗವಾಗುತ್ತಿದ್ದ ಪ್ರಯಾಣಿಕರ ತಂಗುದಾಣದಲ್ಲಿ ಸತ್ತ ನಾಯಿಯನ್ನು ತೆರವು ಮಾಡುವುದನ್ನು ಬಿಟ್ಟು ಸ್ಥಳೀಯ ಪಂಚಾಯತ್ ತಂಗುದಾಣದೊಳಗೆ ಮಣ್ಣು ಸುರಿದು ಟೀಕೆಗೆ ಕಾರಣವಾಗಿದೆ.
ನಂದಳಿಕೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾವಿನಕಟ್ಟೆಯಲ್ಲಿ ರಾಜ್ಯ ಹೆದ್ದಾರಿಗೆ ತಾಗಿಕೊಂಡಿರುವ ಪ್ರಯಾಣಿಕರ ತಂಗುದಾಣದಲ್ಲಿ ಕಳೆದ ಹತ್ತು ದಿನಗಳ ಹಿಂದೆ ನಾಯಿಯೊಂದು ಸತ್ತು ಕೊಳೆತು ಹೋಗಿದ್ದು ಅದನ್ನು ತೆರವು ಮಾಡಿ ದಫನ ಮಾಡುವ ಕ್ರಿಯೆಗೆ ಪಂಚಾಯತ್ ಮುಂದಾಗಿಲ್ಲ.
ಸತ್ತು ಕೊಳೆತು ಹೋದ ಬಳಿಕ ಪಂಚಾಯತಿಯ ಸಿಬ್ಬಂದಿಗಳು ಸತ್ತ ನಾಯಿಯ ದೇಹವನ್ನು ಹೂತುಹಾಕುವ ಬದಲು ತಂಗುದಾಣದ ಒಳಗೆಯೆ ಮಣ್ಣು ಸುರುದು ಸುಮ್ಮನಾಗಿದೆ. ತಂಗುದಾಣಕ್ಕೆ ಮಣ್ಣು ಹಾಕಿದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಬಗ್ಗೆ ಪ್ರತಿಕ್ರಿಯಿಸಿದ ನಂದಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷ ನಿತ್ಯಾನಂದ ಅಮೀನ್ ನಾಯಿ ಸತ್ತು ಹಲವು ದಿನಗಳಾಗಿತ್ತು ಆದರೆ ಪಂಚಾಯತಿಯ ಗಮನಕ್ಕೆ ಬಂದಿದ್ದು ಎರಡು ದಿನಗಳ ಹಿಂದೆ. ಸುದ್ದಿ ತಿಳಿದ ಬಳಿಕ ಸ್ಥಳಕ್ಕೆ ಸ್ವಚ್ಚತಾ ಸಿಬ್ಬಂದಿಗಳು ತೆರಳಿದ್ದು ಸಂಪೂರ್ಣ ಕೊಳೆತು ಹೋಗಿದ್ದ ನಾಯಿಯ ದೇಹವನ್ನು ತೆರವುಗೊಳಿಸಲು ಅಸಾಧ್ಯವಾಗಿತ್ತು ಹೀಗಾಗಿ ಅದರ ಮೇಲೆ ಮಣ್ಣು ಸುರಿದಿದ್ದು ಎರಡು ದಿನಗಳ ಬಳಿಕ ತೆಗೆಯಲಾಗುವುದು ಎಂದಿದ್ದಾರೆ.
ಆದರೆ ಸಾರ್ವಜನಿಕ ವಲಯದಲ್ಲಿ ತಂಗುದಾಣಕ್ಕೆ ಮಣ್ಣು ಸುರಿಯುವ ಬದಲಿಗೆ ಅಲ್ಲೇ ಡೀಸೆಲ್ ಹಾಕಿ ಸುಟ್ಟು ಹಾಕಿ ಬಳಿಕ ತೆರವು ಮಾಡಬಹುದಿತ್ತು. ಇದೀಗ ಮಣ್ಣು ಹಾಕಿದ್ದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಕಾರಣವಾಗಿದೆ.
ಸಂಪೂರ್ಣ ಕೊಳೆತು ಹೋಗಿದ್ದ ಪರಿಣಾಮ ತೆರವು ಮಾಡಲು ಅಸಾಧ್ಯವಾಗಿತ್ತು ಹೀಗಾಗಿ ಮಣ್ಣು ಹಾಕಲಾಗಿದೆ ಒಂದೆರಡು ದಿನಗಳಲ್ಲಿ ತೆರವು ಮಾಡಲಾಗುವುದು. ನಿತ್ಯಾನಂದ ಅಮೀನ್, ನಂದಳಿಕೆ ಗ್ರಾ.ಪಂ ಅಧ್ಯಕ್ಷ ಹೇಳಿಕೆ ನೀಡಿದ್ದಾರೆ.
Naleen Kumar Kateel : ಉಡುಪಿ ಕಾಲೇಜು ವಿಚಾರ : ಮಂಗಳೂರಿನಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ