- Advertisement -
Karkala News : ಕರಾವಳಿಯಾದ್ಯಂತ ವಿಪರೀತ ಮಳೆಯಾಗುತ್ತಿದ್ದು ನದಿ ಕೆರೆಗಳು ಭರ್ತಿಯಾಗಿವೆ ಅನೇಕ ಅನಾಹುತಗಳ ಜೊತೆ ಕೃಷಿ ಭೂಮಿಗೆ ಅತಿ ವೃಷ್ಟಿ ಎದುರಾಗಿ ರೈತರೆಲ್ಲ ಕಂಗಾಲಾಗಿದ್ದಾರೆ.
ನಿರಂತರ ಸುರಿದ ಭಾರೀ ಮಳೆಯಿಂದಾಗಿ ಮುಂಡ್ಕೂರು ಭಾಗದ ನದಿ ತೊರೆಗಳು ತುಂಬಿ ಹರಿಯುತ್ತಿದ್ದು ಕೃಷಿಭೂಮಿಗಳು ಸಂಪೂರ್ಣ ಜಲಾವೃತಗೊಂಡಿದೆ.
ಕೆಲವೊಂದು ಭಾಗದಲ್ಲಿ ತಗ್ಗು ಪ್ರದೇಶದಲ್ಲಿ ಕೃತಕ ನೆರೆ ಉಂಟಾಗಿದೆ. ಮುಂಡ್ಕೂರಿನ ಸಂಕಲಕರಿಯ, ಬೋಳ, ಮುಂಡ್ಕೂರು ಪಡಿತ್ತಾರು, ಸಚ್ಚೆರಿಪೇಟೆ, ಇನ್ನಾ, ಬೆಳ್ಮಣ್, ನಂದಳಿಕೆ ಭಾಗದಲ್ಲಿ ಕೃಷಿ ಭೂಮಿಗಳು ಸಂಪೂರ್ಣ ಜಲಾವೃತಗೊಂಡಿದೆ.
Camera : ಹರಿದಾಡುತ್ತಿರುವ ಸುಳ್ಳು ವಿಡಿಯೋಗಳನ್ನು ನಂಬಬೇಡಿ : ಖುಷ್ಬೂ
- Advertisement -