ಕಾರ್ಕಳ : ಕೆರೆ ಬಸದಿಯು ಜೀರ್ಣೋದ್ದಾರಗೊಳ್ಳುತ್ತಿರುವುದು ಅತೀ ಸಂತಸದ ವಿಚಾರ. ಜೀವನದಲ್ಲಿ ಇಂತಹ ಅವಕಾಶ ಸಿಗುವುದೇ ಅಪರೂಪವಾಗಿದೆ. ಕೆರೆ ಬಸದಿ ಕಾಯಕಲ್ಪ ಹಾಗೂ ಪಂಚಕಲ್ಯಾಣ ಕಾರ್ಯಗಳು ನಡೆಯುತ್ತಿದೆ. ಇದು ಅಪರೂಪದ ಘಳಿಗೆಯಾಗಿದೆ. ಈ ಪುಣ್ಯ ಕಾರ್ಯದಲ್ಲಿ ಎಲ್ಲರೂ ಜೊತೆಯಾಗಿ ಸೇರಿದಾಗ ಯಶಸ್ವಿಯಾಗುತ್ತದೆ ಎಂದು ದಾನಶಾಲೆಯ ಜೈನ ಮಠ ಸ್ವಸ್ಥಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿ ಹೇಳಿದರು.
ಕಾರ್ಕಳ ಆನೆಕೆರೆ ಚತುರ್ಮುಖ ಕೆರೆ ಬಸದಿ ಸುಂದರೀಕರಣಗೊಳಿಸಿದ್ದು ಪಂಚಕಲ್ಯಾಣ ಗೊತ್ತು ಪಡಿಸುವ ದಿನ ಘೋಷಣೆಯ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿ ಮಾತನಾಡಿದರು.
ಬೆಳಗಾವಿ ಚಿಕ್ಕೋಡಿ ದಿಗಂಬರ ಜೈನ ಮುನಿ ಆಚಾರ್ಯಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಹತ್ಯೆಯನ್ನು ಸಮಾಜದ ವತಿಯಿಂದ ಖಂಡಿಸಿ, ಶ್ರೀಗಳ ಹತ್ಯೆಯನ್ನು ಖಂಡಿಸಿದ ಶ್ರೀಗಳು ದಿಗಂಬರರ ಹತ್ಯೆ ಅತ್ಯಂತ ದು:ಖಕರ. ಸಂತರ ಹತ್ಯೆ ತಡೆಯುವಲ್ಲಿ ಆಳುವವರ ಪಾತ್ರ ಬಹಳ ಮುಖ್ಯ. ಅವರಿಗೆ 5 ಬೆರಳುಗಳು ಒಂದೇ, ಭಾರತೀಯ ಪರಂಪರೆಯಲ್ಲಿ ಎಲ್ಲರೂ ಒಂದೆ ಎನ್ನುವುದಾಗಿದೆ. ಯಾವುದೇ ಬೇಧಬಾವ ಇರಬಾರದು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲುವಲ್ಲಿ ಸರ್ಕಾರ ಪಾತ್ರ ಮುಖ್ಯವಾಗಿದೆ. ಸಾಧು-ಸಂತರಿಗೆ ರಕ್ಷಣೆಗೆ ನೀಡಬೇಕಾಗಿದೆ ಎಂದರು.ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಜೈನ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಬಜೆಟ್‍ನಲ್ಲಿ ಘೋಷಣೆಗಳನ್ನು ಮಾಡಿದ್ದು, ಸರ್ಕಾರ ಮಟ್ಟದಲ್ಲಿ ಅನುದಾನಗಳನ್ನು ತರಲು ಪ್ರಯತ್ನಿಸಲಾಗುವುದು. ಇಡೀ ಸಮಾಜ ಬಾಂಧವರ ಸಹಕಾರದಲ್ಲಿ ಜೈನ ಬಸದಿಗಳು ಜೀರ್ಣೋದ್ದಾರಗೊಳ್ಳುತ್ತಿರುವುದು ಅತ್ಯಂತ ಸಂತಸದ ವಿಚಾರವಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಆನೆಕೆರೆ ಬಸದಿ ಜೀಣೋದ್ಧಾರ ಸಮಿತಿ ಅಧ್ಯಕ್ಷ ಡಾ| ಎಂ.ಎನ್ ರಾಜೇಂದ್ರಕುಮಾರ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಡಾ| ವೀರೇಂದ್ರ ಹೆಗ್ಗಡೆಯವರು, ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ನವೀಕರಣ ಕಾರ್ಯಗಳು ನಡೆದಿವೆ. ಜನವರಿ 18ರಿಂದ 22ರ ತನಕ ಐದು ದಿನಗಳ ಕಾಲ ಪಂಚಕಲ್ಯಾಣ ವಿಜೃಂಭಣೆಯಿಂದ ನಡೆಸಲು ಸಂಕಲ್ಪಿಸಲಾಗಿದೆ. ಸಮಾಜ ಬಾಂಧವರು ಇತರೆ ಸಮಾಜದವರು ಜೈ ಜೋಡಿಸಿ ಪಂಚಕಲ್ಯಾಣ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಆನೆಕೆರೆ ಚತುರ್ಮುಖ ಕೆರೆಬಸದಿ ತನ್ನದೇ ಆದ ವೈಶ್ಷಿಷ್ಟ್ಯತೆ ಹೊಂದಿದೆ. ಸಮಾಜದ ಮುಖಂಡರ ನಾಯಕತ್ವದಲ್ಲಿ ಸಮಾಜ ಹಾಗೂ ಇತರ ಸಮಾಜದ ಸಹಕಾರದಲ್ಲಿ ಸಂಪೂರ್ಣ ಶಿಲಾಮಯ ಬಸದಿ ನಿರ್ಮಾಣಗೊಂಡಿದ್ದು ಕೆರೆ ಬಸದಿ ಚರಿತ್ರೆಯಲ್ಲಿ ಉಳಿಯುವಂತೆ ಇಲ್ಲಿ ಕೆಲಸಗಳಾಗಿವೆ ಎಂದರು.
D.K.Shivakumar :ನಿವಾಸಿ ಕ್ಷೇಮಾಭಿವೃದ್ಧಿ ,ನಾಗರಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಡಿಕೆಶಿ ಸಮಾಲೋಚನೆ
Yamuna River: ಯಮುನಾ ಪ್ರವಾಹದಲ್ಲಿ ರಕ್ಷಿಸಿದ ಗೂಳಿಯ ಬೆಲೆ ಎಷ್ಟು ಕೋಟಿ ಗೊತ್ತಾ..?! ಅಚ್ಚರಿ ಆದ್ರೂ ಇದು ಸತ್ಯ..!