Rain : ಕಾರ್ಕಳದಾದ್ಯಂತ ಧಾರಾಕಾರ ಮಳೆಗೆ ಹಲವೆಡೆ ಹಾನಿ…!

Karkala News : ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದ ಕಾರ್ಕಳ ತಾಲೂಕಿನ ನಾನಾ ಭಾಗದಲ್ಲಿ ಗಾಳಿ ಮಳೆಗೆ ಅಪಾರ ಪ್ರಮಾಣದಲ್ಲಿ ಹಾನಿಯಾದ ಘಟನೆಗಳು ನಡೆದಿದೆ. ತಾಲೂಕಿನ ಜಾರ್ಕಳ ಗ್ರಾಮದ ನಿವಾಸಿ ಜಯಕರ ಆಚಾರ್ಯ ರವರ ವಾಸ್ತವ್ಯದ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಹಾಗೂ ಹೆರ್ಮುಂಡೆ ಗ್ರಾಮದ ಫಾರೂಕ್ ಎಂಬವರಿಗೆ ಸೇರಿದ ಬಾಳೆತೋಟಕ್ಕೆ ಗಾಳಿ ಮಳೆಯಿಂದ ಹಾನಿಯಾಗಿದ್ದು ಕೆಲವೊಂದು ಬಾಳೆ ಗಿಡಗಳು ಧರೆಗೆ ಉರುಳಿಬಿದ್ದ ಘಟನೆ ನಡೆದಿದೆ ಘಟನೆಯಲ್ಲಿ ಸುಮಾರು 5 ಸಾವಿರ ರೂಪಾಯಿಯ ನಷ್ಟ ಸಂಭವಿಸಿದೆ.

ಬೋಳ ಗ್ರಾಮದ ವಂಜಾರಕಟ್ಟೆ ನಿವಾಸಿ ಜಯರಾಮ್ ಸಾಲ್ಯಾನ್ ರವರ ಅಡಿಕೆ ತೋಟಕ್ಕೆ ಗಾಳಿಯಿಂದ ಹಾನಿಯಾಗಿದ್ದು ಹಲವಾರು ಅಡಿಕೆ ಮರಗಳು ಧರೆಗೆ ಉರುಳಿದ್ದು ನಷ್ಟ ಸಂಭವಿಸಿದೆ. ನೀರೆ ಗ್ರಾಮದ ಪ್ರೇಮ ಪೂಜಾರಿ ಎಂಬವರ ಮನೆಗೆ ಮರದ ಗೆಲ್ಲು ಬಿದ್ದು ಸುಮಾರು 10 ಸಾವಿರ ರೂಪಾಯಿಯ ನಷ್ಟ ಉಂಟಾಗಿದೆ. ಭಾರೀ ಮಳೆಯಿಂದಾಗಿ ಎರ್ಲಪಾಡಿ ಗ್ರಾಮದ ನಿವಾಸಿ ಲತಿಕಾ ರವರ ಭತ್ತದ ಗದ್ದೆಗೆ ತೋಡಿನ ನೀರು ನುಗ್ಗಿ ಭತ್ತದ ಕೃಷಿಗೆ ಅಪಾರ ಹಾನಿಯಾಗಿದ್ದು ಸುಮಾರು 20 ಸಾವಿರ ರೂಪಾಯಿ ಅಂದಾಜು ನಷ್ಟ ಸಂಭವಿಸಿದೆ.

ಬೆಳ್ಮಣ್ ಗ್ರಾಮದ ಪುನಾರು ನಿವಾಸಿ ವೈಷ್ಣವಿ ನಾಯಕ್ ಎಂಬವರ ವಾಸ್ತವ್ಯದ ಮನೆಯ ಹೆಂಚುಗಳು ಗಾಳಿಯ ರಭಸಕ್ಕೆ ಹಾರಿಹೋಗಿ ಹಾನಿಯುಂಟಾಗಿದೆ. ಇರ್ವತ್ತೂರು ಗ್ರಾಮದ ಐತು ಮೂಲ್ಯ ಎಂಬವರ ಅಡಿಕೆ ತೋಟಕ್ಕೆ ಹಾನಿಯಾಗಿದ್ದು ಹಲವು ಮರಗಳು ಧರೆಗೆ ಉರುಳಿದೆ. ಮುಂಡ್ಕೂರು ಗ್ರಾಮದ ಕೃಷ್ಣ ಪೂಜಾರಿ ರವರ ಅಡಿಕೆ ತೋಟ ಹಾಗೂ ಭತ್ತದ ಗದ್ದೆಗೆ ಹಾನಿಯಾಗಿದ್ದು ಸುಮಾರು 20 ಸಾವಿರ ರೂಪಾಯಿಯ ನಷ್ಟ ಸಂಭವಿಸಿದೆ.

Rain : ಮಳೆಯ ಅಬ್ಬರ : ತಗ್ಗು ಪ್ರದೇಶದಲ್ಲಿ ಕೃತಕ ನೆರೆ

Police : ಪುತ್ತೂರು: ಅಪರಿಚಿತ ಶವ ಪತ್ತೆ: ತನಿಖೆ ಆರಂಭ

Camera : ಹರಿದಾಡುತ್ತಿರುವ ಸುಳ್ಳು ವಿಡಿಯೋಗಳನ್ನು ನಂಬಬೇಡಿ : ಖುಷ್ಬೂ

About The Author